ಬೆಳ್ತಂಗಡಿ: ಉಜಿರೆ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಅ.23 ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘವನ್ನು ಹಿರಿಯ ಪುರೋಹಿತ, ವೇದಮೂರ್ತಿ ಪದ್ಮನಾಭ ಜೋಶಿ ಉದ್ಘಾಟಿಸಲಿದ್ದಾರೆ.
ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯ ರಾಘವ ಪಡುವೆಟ್ನಾಯ, ಸಾಹಿತಿ, ಸಂಘಟಕಿ ವಿಜಯಾ ವಿಷ್ಣು ಡೋಂಗ್ರೆ, ಶಿವಮೊಗ್ಗ ಜಿಲ್ಲೆಯ ಸಹಕಾರಿ ಸಂಘಗಳ ಜಂಟಿ ನಿಬಂಧಕ ನಾಗೇಶ್ ಎಸ್.ಡೋಂಗ್ರೆ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ನಿಯೋಜಿತ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜ ಅವರನ್ನು ಗೌರವಿಸಿ, ಸಂಘಟನೆಯ ಬಗ್ಗೆ ಮಾಹಿತಿ ನೀಡಿ ಸಮಾರಂಭಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭ ಸಂಘದ ನಿಯೋಜಿತ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ನಿಯೋಜಿತ ಕಾರ್ಯದರ್ಶಿ ನಾರಾಯಣ ಫಡ್ಕೆ ಪದಾಧಿಕಾರಿಗಳಾದ ಯೋಗೀಶ್ ಭಿಡೆ, ಗಿರೀಶ ಡೊಂಗ್ರೆ, ಉಮಾ ಮೆಹೆಂದಳೆ, ಅಶ್ವಿನಿ ಎ. ಹೆಬ್ಬಾರ್, ಡಾ. ಶಶಿಧರ ಡೋಂಗ್ರೆ, ಕೇಶವ ಫಡ್ಕೆ, ಮೃತ್ಯುಂಜಯ ಫಡ್ಕೆ, ಪ್ರಹ್ಲಾದ ಫಡ್ಕೆ ಇದ್ದರು.