News Kannada
Sunday, November 27 2022

ಮಂಗಳೂರು

ಮಂಗಳೂರು: ಕೆಎಸ್‌ಆರ್‌ಟಿಸಿ ವತಿಯಿಂದ ‘ದೀಪಾವಳಿ’ ಪ್ರವಾಸ ಪ್ಯಾಕೇಜ್ - 1 min read

KSRTC bus service resumes at Mangaluru International Airport
Photo Credit : Twitter

ಮಂಗಳೂರು: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ಸಂಪರ್ಕ ಕಲ್ಪಿಸಲು ‘ದೀಪಾವಳಿ’ ಪ್ರವಾಸ ಪ್ಯಾಕೇಜ್ ಹಮ್ಮಿಕೊಂಡಿದೆ. ಪ್ಯಾಕೇಜ್ ಟೂರ್ ಅಡಿಯಲ್ಲಿ ಕನಿಷ್ಠ ಐದರಿಂದ 10 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸಲಿವೆ.

ಅ.21ರಿಂದ 31ರವರೆಗೆ (ಅ.25 ಹೊರತುಪಡಿಸಿ) ಪ್ರವಾಸ ಪ್ಯಾಕೇಜ್‌ನಲ್ಲಿ ತೆರಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಮಂಗಳೂರು– ಮಡಿಕೇರಿ ಟೂರ್ ಪ್ಯಾಕೇಜ್‌ 1ರಲ್ಲಿ ರಾಜಸೀಟ್, ಅಬ್ಬಿಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಮ್ ನೋಡಬಹುದು. ಊಟ, ಉಪಾಹಾರದ ವ್ಯವಸ್ಥೆ ಹೊರತುಪಡಿಸಿ, ಈ ಟೂರ್ ಪ್ಯಾಕೇಜ್‌ಗೆ ವಯಸ್ಕರಿಗೆ ತಲಾ ₹500, ಆರು ವರ್ಷ ಮೇಲಿನ ಮಕ್ಕಳಿಗೆ ₹450 ದರ ನಿಗದಿಪಡಿಸಲಾಗಿದೆ.

ಮಂಗಳೂರು– ಕೊಲ್ಲೂರು ಟೂರ್ ಪ್ಯಾಕೇಜ್‌ 1ರಲ್ಲಿ ಮಾರಣಕಟ್ಟೆ, ಕೊಲ್ಲೂರು, ಕಮಲಶಿಲೆ, ಉಚ್ಚಿಲ ದೇವಸ್ಥಾನ ನೋಡಲು ಅವಕಾಶ ಇದೆ. ಊಟ, ಉಪಾಹಾರದ ವ್ಯವಸ್ಥೆ ಹೊರತುಪಡಿಸಿ, ಈ  ಟೂರ್ ಪ್ಯಾಕೇಜ್‌ಗೆ ವಯಸ್ಕರಿಗೆ ತಲಾ ₹400, ಆರು ವರ್ಷ ಮೇಲಿನ ಮಕ್ಕಳಿಗೆ ₹350 ದರ ನಿಗದಿಪಡಿಸಲಾಗಿದೆ.

ಮಂಗಳೂರು– ಪುತ್ತೂರು ಟೂರ್ ಪ್ಯಾಕೇಜ್‌ 1ರಲ್ಲಿ ವಿಟ್ಲ ಪಂಚಲಿಂಗೇಶ್ವರ, ಮೃತ್ಯುಂಜೇಶ್ವರ, ಉಮಾಮಹೇಶ್ವರಿ, ಪುತ್ತೂರು ಮಹಾಲಿಂಗೇಶ್ವರ, ಗೆಜ್ಜೆಗಿರಿ, ಹನುಮಗಿರಿಗೆ ಭೇಟಿ ನೀಡಲು ಅವಕಾಶ ಇದೆ. ಊಟ, ಉಪಾಹಾರದ ವ್ಯವಸ್ಥೆ ಹೊರತುಪಡಿಸಿ, ಈ  ಟೂರ್ ಪ್ಯಾಕೇಜ್‌ಗೆ ವಯಸ್ಕರಿಗೆ ತಲಾ ₹400, ಆರು ವರ್ಷ ಮೇಲಿನ ಮಕ್ಕಳಿಗೆ ₹350 ದರ ನಿಗದಿಪಡಿಸಲಾಗಿದೆ.

ಮಂಗಳೂರು ಟೂರ್ ಪ್ಯಾಕೇಜ್‌ 1ರಲ್ಲಿ ಕದ್ರಿ ದೇವಸ್ಥಾನ, ಪಾಣೆ ಮಮಗಳೂರು, ನಂದಾವರ ವಿನಾಯಕ, ಸುರ್ಯ ಕನ್ಯಾಡಿ, ಧರ್ಮಸ್ಥಳ, ಸೌತಡ್ಕ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಪುತ್ತೂರು ಮಹಾಲಿಂಗೇಶ್ವರ, ವಿಟ್ಲ ಪಂಚಲಿಂಗೇಶ್ವರ ದೇವಾಲಯಗಳು ಒಳಗೊಂಡಿವೆ. ಊಟ, ಉಪಾಹಾರದ ವ್ಯವಸ್ಥೆ ಹೊರತುಪಡಿಸಿ, ಈ ಟೂರ್ ಪ್ಯಾಕೇಜ್‌ಗೆ ವಯಸ್ಕರಿಗೆ ತಲಾ ₹400, ಆರು ವರ್ಷ ಮೇಲಿನ ಮಕ್ಕಳಿಗೆ ₹350 ದರ ನಿಗದಿಪಡಿಸಲಾಗಿದೆ.

ಮಂಗಳೂರು ಟೂರ್ ಪ್ಯಾಕೇಜ್ 2ರಲ್ಲಿ ಕುಡುಪು, ಮೂಡುಬಿದಿರೆ ಮಾರಿಯಮ್ಮ ದೇವಸ್ಥಾನ, ಸಾವಿರ ಕಂಬದ ಬಸದಿ, ಕೊಡ್ಯಡ್ಕ, ನೆಲ್ಲಿತೀರ್ಥ ಒಳಗೊಂಡಿದೆ. ಈ ಟೂರ್ ಪ್ಯಾಕೇಜ್‌ಗೆ ವಯಸ್ಕರಿಗೆ ತಲಾ ₹300, ಆರು ವರ್ಷ ಮೇಲಿನ ಮಕ್ಕಳಿಗೆ ₹250 ದರ ನಿಗದಿಪಡಿಸಲಾಗಿದೆ.

ಮಂಗಳೂರು ಟೂರ್ ಪ್ಯಾಕೇಜ್ 3ರಲ್ಲಿ ಮಂಗಳಾದೇವಿ, ಪೊಳಲಿ, ಕಟೀಲು, ಉಚ್ಚಿಲ, ಬಪ್ಪನಾಡು, ಸಸಿಹಿತ್ಲು, ತಣ್ಣೀರುಬಾವಿ ಬೀಚ್‌ ಸೇರಿವೆ. ಊಟ, ಉಪಾಹಾರದ ವ್ಯವಸ್ಥೆ ಹೊರತುಪಡಿಸಿ, ಈ ಟೂರ್ ಪ್ಯಾಕೇಜ್‌ಗೆ ವಯಸ್ಕರಿಗೆ ತಲಾ ₹300, ಆರು ವರ್ಷ ಮೇಲಿನ ಮಕ್ಕಳಿಗೆ ₹250 ದರ ನಿಗದಿಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಸ್ ಆರ್ ಟಿಸಿಯ ಈ ದೀಪಾವಳಿ ಪ್ಯಾಕೇಜ್ ಜನರಿಗೆ ಸಹಕಾರಿ ಆಗಲಿದೆ. ಈ ಪ್ಯಾಕೇಜ್ ನಲ್ಲಿ ಪ್ರಯಾಣಿಸುವವರು ದೇವಸ್ಥಾನಕ್ಕೆ ನೇರ ಪ್ರವೇಶವನ್ನು ಪಡೆಯ ಬಹುದು. ಸರತಿ ಸಾಲಿನಲ್ಲಿ ನಿಂತು ಕಾಯುವ ಅಗತ್ಯವಿರುವುದಿಲ್ಲ. ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಲು ನೇರ ಪ್ರವೇಶ ಮಾಡುವ ಅವಕಾಶ ಈ ಪ್ಯಾಕೇಜ್ ನಲ್ಲಿ ಲಭ್ಯವಿದೆ.

See also  ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಸರಳವಾಗಿ ಆಚರಣೆ

ಈ ದೀಪಾವಳಿ ಪ್ಯಾಕೇಜ್ ನಿಂದ ಮಧ್ಯಮ ವರ್ಗದ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಉಪಕಾರಿ ಆಗಿದೆ. 4 ಅಥವಾ 5 ಜನರ ಕುಟುಂಬವು ಪೂರ್ಣ ದಿನದ ಪ್ರವಾಸಕ್ಕಾಗಿ ಕೇವಲ 2 ರಿಂದ 3 ಸಾವಿರ ವೆಚ್ಚದಲ್ಲಿ ದೇವಸ್ಥಾನಗಳಿಗೆ ಪ್ರಯಾಣಿಸಬಹುದು.

ಕೆಎಸ್ ಆರ್ ಟಿಸಿಯ ದಸರಾ ಪ್ಯಾಕೇಜ್ ಯಶಸ್ವಿಯಾಗಿದ್ದರಿಂದ, ದೀಪಾವಳಿ ಪ್ಯಾಕೇಜ್ ಅನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಕೆಎಸ್ ಆರ್ ಟಿಸಿಯು ವಾರಾಂತ್ಯದ ಪ್ಯಾಕೇಜ್‌ಗಳನ್ನು ನಿಯಮಿತವಾಗಿ ಪ್ರಾರಂಭಿಸಲು ಯೋಜಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು