News Kannada
Sunday, September 24 2023
ಮಂಗಳೂರು

ಮಂಗಳೂರು: ನಿವಿಯಸ್ ಮ್ಯಾರಥಾನ್ 2022 ಗಾಗಿ ಟಿ-ಶರ್ಟ್ ಮತ್ತು ಪದಕ ಅನಾವರಣ

T-Shirt and Medal unveiled for Niveus Mangalore Marathon 2022
Photo Credit : News Kannada

ಮಂಗಳೂರು: ನಿವಿಯಸ್ ಮಂಗಳೂರು ಮ್ಯಾರಥಾನ್ ಇದರ ಪದಕಗಳು  ಮತ್ತು ಟಿ- ಶರ್ಟ್ ಬಿಡುಗಡೆ ಸಮಾರಂಭ ಅ.27 ಗುರುವಾರ ಮಂಗಳೂರಿನಲ್ಲಿ ನಡೆಯಿತು.

ಮಂಗಳೂರು ರನ್ನರ್ ಕ್ಲಬ್ ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನವೆಂಬರ್ 6 ರಂದು ಮಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಪದಕಗಳು ಹಾಗೂ ಟೀ ಶರ್ಟ್ ಗಳನ್ನು ಕೆನರಾ ಪ್ರೌಢಶಾಲೆಯ ಸುಧೀಂದ್ರ ಸಭಾಂಗಣದಲ್ಲಿ ಸಂಸದರಾದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಗಣ್ಯರು ಅನಾವರಣಗೊಳಿಸಿದರು.

ಜನರ ಆರೋಗ್ಯದ ದೃಷ್ಟಿಯಿಂದ ಜಾಗೃತಿ ಮೂಡಿಸುವ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಮ್ಯಾರಥಾನ್ ಯಶಸ್ವಿಯಾಗುವುದು ಖಂಡಿತ ಎಂದು ಅತಿಥಿಗಳು ಶುಭ ಹಾರೈಸಿದರು.

ಕೆಐಓಸಿಎಲ್ ನ ಮುರುಗೇಶ್, ನಿವಿಯಸ್ ಮಂಗಳೂರು ಮ್ಯಾರಥಾನ್ ರೇಸ್ ಡೈರೆಕ್ಟರ್ ಅಭಿಲಾಷ್ ಡೊಮಿನಿಕ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ರಂಗನಾಥ ಭಟ್ ಹಾಗೂ ಗಣ್ಯರು ಉಪಸ್ಥಿತರಿದ್ದರು.

See also  ಮಂಗಳೂರು: ಶಿವಬಾಗ್ ನಲ್ಲಿ ಬೋರ್ಡ್ ಬಿದ್ದು 2 ಕಾರ್ ಜಖಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು