News Kannada
Wednesday, November 30 2022

ಮಂಗಳೂರು

ಮಂಗಳೂರು: ಅ. 31 ಮತ್ತು ನ.1 ರಂದು ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಇದರ 10ನೇ ರಾಜ್ಯ ಸಮ್ಮೇಳನ - 1 min read

The 10th State Conference of The State Beedi Workers Federation will be held on October 31 and November 1.
Photo Credit : By Author

ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸ್ವತಂತ್ರ ಪೂರ್ವದಿಂದ ಇಂದಿನವರೆಗೂ ಬೀಡಿ ಕೈಗಾರಿಕೆ ಜನತೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಬೀಡಿ ಕಾರ್ಮಿಕರನ್ನು ಸಂಘಟಿಸಿ ಅವಿಶ್ರಾಂತ ಹೋರಾಟದ ಮುಖಾಂತರ ಯಾವುದೇ ಸವಲತ್ತು ಇಲ್ಲದೆ ಶೋಷಣೆಗೆ ಒಳಗಾಗಿದ್ದ ಬೀಡಿ ಕಾರ್ಮಿಕರಿಗೆ ಹಲವಾರು ಕಾನೂನು ಸವಲತ್ತುಗಳನ್ನು ಪಡೆಯಲು ಸಾಧ್ಯವಾಯಿತು.

ಈ ಎಲ್ಲಾ ಹೋರಾಟಗಳಿಗೆ ಸಿಐಟಿಯು ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ನೇತೃತ್ವವನ್ನು ನೀಡಿದೆ. ಬೀಡಿ ಕಾರ್ಮಿಕರ ಹೋರಾಟ ರಾಜ್ಯವ್ಯಾಪಿ ಪಸರಿಸಿದೆ. ಕನಿಷ್ಟ ಕೂಲಿ, ತುಟ್ಟಿಭತ್ತೆ, ಭವಿಷ್ಯನಿಧಿ, ಪಿಂಚಣಿ, ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯ  ಮೂಲಕ ಮನೆ ಕಟ್ಟಲು ಸಹಾಯಧನ, ವೈದ್ಯಕೀಯ ಸವಲತ್ತುಗಳು, ಮಕ್ಕಳಿಗೆ ವಿದ್ಯಾರ್ಥಿ ವೇತನ ಇತ್ಯಾದಿ ಕಾನೂನುಬದ್ಧ ಸೌಲಭ್ಯ ಪಡೆಯಲು ಸಾಧ್ಯವಾಯಿತು.

ಸದ್ಯ ಸರಕಾರಗಳ ನೀತಿಗಳಿಂದ ಬೀಡಿ ಕೈಗಾರಿಕೆ ನಲುಗಿ ಹೋಗಿದೆ. ಆರೋಗ್ಯದ ಹೆಸರಿನಲ್ಲಿ ನಿರಂತರ ದಾಳಿಗೊಳಗಾಗಿದೆ. ಕೋಟ್ಪಾ ಕಾಯಿದೆಯನ್ನು ಕಠಿಣಗೊಳಿಸಿ ಬೀಡಿ ಸೇದುವವರಿಗೆ, ಬೀಡಿ ಕೈಗೋರಿಕೋದ್ಯಮಿಗಳಿಗೆ, ಬೀಡಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಯನ್ನು ನೀಡಿದೆ. ವಾರಪೂರ್ತಿ ಕೆಲಸವಿಲ್ಲದೆ ಬೀಡಿ ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ. ಕೇಂದ್ರ ಸರಕಾರ ಬೀಡಿಯ ಮೇಲೆ ಜಿಎಸ್‌ಟಿ ಹೇರಿಕೆ ಮಾಡಿರುವುದರಿಂದ, ಕಲ್ಯಾಣ ಯಿಂದ ಬೀಡಿ ಕಾರ್ಮಿಕರ ಮಕ್ಕಳಿಗೆ ಸಿಗಬೇಕಾದ ಸ್ಕಾಲರ್‌ಶಿಫ್ ಸರಿಯಾಗಿ ಬರುತ್ತಿಲ್ಲ. ಮನೆಕಟ್ಟಲು ಸಹಾಯಧನ
ಇಲ್ಲವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಉದಾರೀಕರಣ ನೀತಿಯಿಂದಾಗಿ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆಯಾಗಿದೆ. ಪೆಟ್ರೋಲ್ ಉತ್ಪನ್ನಗಳ ದರ ಏರಿಕೆಯು ಇನ್ನಷ್ಟು ಬೆಲೆ ಏರಿಕೆಗೆ ಅವಕಾಶ ನೀಡಿ ಬೀಡಿ ಕಾರ್ಮಿಕರು ಸೇರಿಕೊಂಡು ಜನ ಸಮುದಾಯವನ್ನು ಸಂಕಷ್ಟಕ್ಕೆ ದೂಡಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಹೋರಾಟವನ್ನು ತೀಕ್ಷ್ಣಗೊಳಿಸಬೇಕಾಗಿದೆ. ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಇದರ 10ನೇ ರಾಜ್ಯ ಸಮ್ಮೇಳನವು 2022 ಅಕ್ಟೋಬರ್ 31 ಮತ್ತು ನವಂಬರ್ 1 ರಂದು ಮಂಗಳೂರಿನಲ್ಲಿ ನಡೆಯಲಿದೆ. ಈ ಸಮ್ಮೇಳನವು ಮೇಲ್ಕಾಣಿಸಿದ ವಿಷಯಗಳ ಬಗ್ಗೆ ಚರ್ಚಿಸಿ ರಾಜ್ಯವ್ಯಾಪಿ ಹೋರಾಟವನ್ನು ಸಂಘಟಿಸಲಿದೆ. ನ್ಯಾಯಾಲಯದಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಬೀಡಿಯ ಕನಿಷ್ಟ ಕೂಲಿ ಹಾಗೂ ತುಟ್ಟಿಭತ್ತೆಯ ಸಂಬಂಧಿಸಿ ಕೂಡಾ ರಾಜ್ಯ ಸಮ್ಮೇಳನದಲ್ಲಿ ಚರ್ಚೆಗೆ ಬರಲಿದೆ.

ಫೆಡರೇಶನ್‌ನ ರಾಜ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು 2022 ಅಕ್ಟೋಬರ್ 31 ರಂದು ಮಂಗಳೂರು ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ
ನಡೆಯಲಿದ್ದು ಇಲ್ಲಿಗೆ ಕಾ|ಬಿ.ಮಾಧವ ವೇದಿಕೆ ಹಾಗೂ ಕಾ|ನಿಸಾರ್ ಅಹಮ್ಮದ್ ನಗರ ಎಂಬ ಹೆಸರನ್ನು ನೀಡಲಾಗುವುದು. ಸಮ್ಮೇಳನದ ಉದ್ಘಾಟನೆಯನ್ನು ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು)ನ ಪ್ರಧಾನ ಕರ‍್ಯದರ್ಶಿ ಕಾ|ದೇಬಸಿಶ್ ರಾಯ್‌ರವರು ನಡೆಸಲಿದ್ದಾರೆ.

ಸಿಐಟಿಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರ, ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಮುಜೀಬ್, ಫೆಡರೇಶನ್‌ನ ಖಜಾಂಚಿ ಪದ್ಮಾವತಿ ಎಸ್.ಶೆಟ್ಟಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ರವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

See also  ಹೊಸದಿಲ್ಲಿ: ಪೋಕ್ಸೋ ನ್ಯಾಯಾಧೀಶರ ಅಮಾನತು ಹಿಂಪಡೆದ ಪಾಟ್ನಾ ಹೈಕೋರ್ಟ್

ಅಧ್ಯಕ್ಷತೆಯನ್ನು ಫೆಡರೇಶನ್‌ನ ರಾಜ್ಯಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿಯವರು ವಹಿಸಲಿದ್ದಾರೆ. 2022 ನವಂಬರ್ 1 ರಂದು ಬೋಳಾರ ಸಿಐಟಿಯು ಸಭಾಂಗಣದಲ್ಲಿ ಸಮ್ಮೇಳನದ ಕಲಾಪಗಳು ಮುಂದುವರಿಯಲಿದ್ದು ಅಲ್ಲಿಗೆ ಕಾ|ವಿಠಲ ಪೂಜಾರಿಯವರ ಹೆಸರನ್ನು ನೀಡಲಾಗುವುದು.

ಸಮ್ಮೇಳನದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರ ಪ್ರತಿನಿಧಿಗಳು ಸೇರಿಕೊಂಡು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬೀಡಿ ಕಾರ್ಮಿಕರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೀಡಿ ಕಾರ್ಮಿಕರ ಕಾನೂನು ಸೌಲಭ್ಯಗಳಿಗಾಗಿ ನಿರಂತರ ಯಶಸ್ವಿ ಹೋರಾಟ ನಡೆಸಿರುವ ಕಾರ್ಮಿಕ ಚಳುವಳಿಯ ಹಿರಿಯ ಮುಂದಾಳು ಯು.ಬಿ.ಲೋಕಯ್ಯನವರ ಕುರಿತ ಜೀವನ ಕಥನದ ಬಗ್ಗೆ ಪುಸ್ತಕವನ್ನು ಕಾರ್ಮಿಕ ನಾಯಕ ಬಾಬು ಪಿಲಾರುರವರು ಬರೆದಿದ್ದು, ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ. ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಿ ವ್ಯಾಪಕ ತಯಾರಿ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

15229
Jaya Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು