News Kannada
Tuesday, November 29 2022

ಮಂಗಳೂರು

ಮಂಗಳೂರು: ಅ. ೩೧ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪದಗ್ರಹಣ, ವಾರ್ಷಿಕ ಸಂಭ್ರಮ - 1 min read

Photo Credit : Freepik

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಮಂಗಳೂರು ನಗರ ಘಟಕದ ಪದಗ್ರಹಣ ಕಾರ್ಯಕ್ರಮ ಮತ್ತು ಚತುರ್ಥ ವಾರ್ಷಿಕ ಸಂಭ್ರಮ ಅ.೩೧ ರಂದು ಅಪರಾಹ್ನ ೩ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ನಗರದ ಪುರಭವನದಲ್ಲಿ ನಡೆಯಲಿದೆ.

ಸಂಜೆ ೫ ಗಂಟೆಯಿಂದ ೬.೩೦ ರ ವರೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಲಯನ್ಸ್ ಜಿಲ್ಲೆ ೩೧೭ ಡಿ ಜಿಲ್ಲಾ ಗವರ್ನರ್ ಎಸ್. ಸಂಜೀತ್ ಶೆಟ್ಟಿ ಜ್ಯೋತಿ ಪ್ರಜ್ವಲನೆಗೈಯಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕ್ರಡಾ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್, ಉದ್ಯಮಿಗಳಾದ ಜೀತೇಂದ್ರ ಕೊಟ್ಟಾರಿ, ಪುರುಷೋತ್ತಮ ಆರ್. ಶೆಟ್ಟಿ, ಜಗದೀಶ್ ಶೆಟ್ಟಿ, ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಬೋಳಾರ ಮಾಜಿ ಮೊಕ್ತೇಸರ ಸೀತಾರಾಮ್ ಎ. ಭಾಗವಹಿಸಲಿದ್ದಾರೆ.

ನಿಯೋಜಿತ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ನಿಯೋಜಿತ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣ ಶೆಟ್ಟಿ ತಾರೆಮಾರ್, ನಿಯೋಜಿತ ಕೋಶಾಧಿಕಾರಿ ಕೆ. ಗೋಪಿನಾಥ ಶೆಟ್ಟಿ ಪದಗ್ರಹಣ ನಡೆಯಲಿದೆ.

ಬಪ್ಪನಾಡು ಮೇಳದ ಗಂಗಾಧರ ಮಣಿಯಾಣಿ, ಸುಂಕದಕಟ್ಟೆ ಮೇಳದ ವೆಂಕಪ್ಪ, ಸಸಿಹಿತ್ಲು ಭಗವತಿ ಮೇಳದ ಜಯ ಸುವರ್ಣ, ಪಾವಂಜೆ ಮೇಳದ ಲೋಕೇಶ್ ಮಲ್ಲ ಅವರಿಗೆ ಸನ್ಮಾನ, ಗೌರವ ಸಹಾಯಧನ ವಿತರಣೆ ನಡೆಯಲಿದೆ.

ಅಪರಾಹ್ನ ೩ ರಿಂದ ೪.೩೦ ರ ವರೆಗೆ ಮಂಗಳೂರು ಘಟಕದ ಮಹಿಳಾ ಸದಸ್ಯರಿಂದ ರುಕ್ಮಿಣಿ ಕಲ್ಯಾಣ ತಾಳಮದ್ದಳೆ ನಡೆಯಲಿದೆ. ೬.೩೦ ರಿಂದ ೯ ಗಂಟೆಯವರೆಗೆ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ವೀರ ಅಭಿಮನ್ಯು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

See also  ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದ ಶಮೀ ಕಟ್ಟೆಯಲ್ಲಿ ಸಾರ್ವಜನಿಕ ಶನಿ ಪೂಜೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು