News Kannada
Tuesday, November 29 2022

ಮಂಗಳೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ 2022 - 1 min read

Mangaluru: Dakshina Kannada District Level Child Rights Parliament 2022
Photo Credit : News Kannada

ಮಂಗಳೂರು: ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಕ್ಕಳ ಸಮಾಲೋಚನೆಯನ್ನು ರಾಜ್ಯಮಟ್ಟದಲ್ಲಿ ನವೆಂಬರ್ ತಿಂಗಳಲ್ಲಿ ಆಯೋಜಿಸಲಾಗುತ್ತದೆ . ಮಕ್ಕಳ ಹಕ್ಕುಗಳ ಕುರಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ ಮತ್ತು ಯುನಿಸೆಫ್ ಬೆಂಬಲವಾಗಿದೆ.

ಈ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ಮಕ್ಕಳನ್ನು ಜಿಲ್ಲಾ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸುವ ಉದ್ದೇಶದಿಂದ ದಿನಾಂಕ: 28.10.2022 ರಂದು ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ರೋಶಿನಿ ನಿಲಯ ಸಭಾಂಗಣ, ಮಂಗಳೂರು ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಶೋಬಾ ಬಿ.ಜಿಯವರು ಮಾಡಿದರು, ಮುಖ್ಯ ಅತಿಥಿಗಳಾಗಿ ಲಯನ್‌ ಸುರೇಶ್‌ ರೈ ಎಂಜೆಎಫ್‌, ಅಧ್ಯಕ್ಷರು ಒಡಿಯೂರು ವಿವಿದೊದ್ಧೇಶ ಸೌಹಾರ್ದ ಸಹಕಾರಿ ಸಂಘ, ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಂಚಾಲಕರಾದ ಕಮಲಾ ಗೌಡ, ಮಕ್ಕಳ ಕಲ್ಯಾಣ ಸಮಿತಿ ದ.ಕ. ಜಿಲ್ಲೆ ಇದರ ಅಧ್ಯಕ್ಷರೂ ಹಾಗೂ ಪಡಿ ಸಂಸ್ಥೆಯ ನಿರ್ದೇಶಕರು ಆಗಿರುವ ರೆನ್ನಿ ಡಿಸೋಜಾ, ನಯನ ರೈ, ಅಧ್ಯಕ್ಷರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ದ.ಕ. ಜಿಲ್ಲೆ ವಲಯ ಶಿಕ್ಷಣ ಸಂಪನ್ಮೂಲ ಅಧಿಕಾರಿಯವರಾದ ತಹಸೀನ್‌ ರವರು ಉಪಸ್ಥಿತರಿದ್ದರು.

ಕಳೆದ 2020-21ನೇ ಸಾಲಿನ ವಿಧಾನಸಭಾ ಮತ್ತು ವಿಧಾನ ಪರಿಷತ್ ಮಂಡಲದ ಅಧಿವೇಶನ ಕಲಾಪದಲ್ಲಿ ಮಕ್ಕಳ ಹಕ್ಕುಗಳ ಕುರಿತಾದ ಪ್ರಶ್ನೆಗಳನ್ನು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಎಷ್ಟು ಪ್ರಶ್ನೆಗಳನ್ನು ಪ್ರಸ್ತಾಪಿಸಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದಿದ್ದಾರೆ ಎಂಬುದರ ಬಗ್ಗೆ ಸಂವಿಧಾನದ ಅಡಿಯಲ್ಲಿ ರಾಷ್ಟ್ರ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಅಧಿಕಾರ ವ್ಯಾಪ್ತಿ ಮತ್ತು ವ್ಯವಸ್ಥೆಯ ಕುರಿತು ಮಕ್ಕಳಿಗೆ ವಿವರಿಸುತ್ತ, ಜಿಲ್ಲೆಯಲ್ಲಿ ಮಕ್ಕಳ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಅಪೌಷ್ಠಿಕತೆ, ಹದಿಹರೆಯದ ಮಕ್ಕಳ ಅರೋಗ್ಯ ಹಾಗೂ ಇನ್ನಿತರೇ ವಿಷಯಗಳ ಕುರಿತು ಜಿಲ್ಲೆಯ ಅಂಕಿ ಅಂಶಗಳ ಮುಖಾಂತರ ಮಕ್ಕಳಿಗೆ ಸಂಸ್ಥೆಯ ವಕಾಲತ್ತು ಸಂಯೋಜಕರಾದ ಶ್ರೀ ಸಿದ್ದಾಂತ್ ರವರು ತರಬೇತಿಯನ್ನು ನೀಡಿದರು.

ಮಕ್ಕಳು ತಮ್ಮ ಶಾಲೆ, ತಮ್ಮ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮಕ್ಕಳಿಗೆ ಕುರಿತಾದ ಏನೆಲ್ಲ ಮುಖ್ಯವಾದ ಸಮಸ್ಯೆಗಳಿವೆ ಅವುಗಳನ್ನು ಪರಿಹರಿಸುವಲ್ಲಿ ಸರ್ಕಾರದ ಮಟ್ಟದಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಕ್ಕಳು ಗುಂಪು ಚರ್ಚೆಯ ಮೂಲಕ ಚರ್ಚಿಸಿ ಸಮಸ್ಯೆಗಳನ್ನು ಪಟ್ಟಿಮಾಡಿ ಮದ್ಯಾಹ್ನದ ನಂತರ ತಮ್ಮ ವಿಚಾರಗಳನ್ನು ಮಂಡಿಸುತ್ತಾ ಸಭೆಯಲ್ಲಿ ಹಾಜರಿದ್ದ ಮಕ್ಕಳ ಕಲ್ಯಾಣ ಸಮಿತಿ ದ.ಕ. ಜಿಲ್ಲೆ ಇದರ ಅಧ್ಯಕ್ಷರಾದ ರೆನ್ನಿ ಡಿಸೋಜಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯಾದ ಕುಮಾರ್, ವಲಯ ಶಿಕ್ಷಣ ಸಂಪನ್ಮೂಲ ಅಧಿಕಾರಿಯವರಾದ ತಹಸೀನ್‌, ಚೈಲ್ಡ್ ಲೈನ್ ನಗರ ಸಂಯೋಜಕರಾದ ಶ್ರೀಮತಿ ರೋಹಿಣಿ ಹಾಗೂ ಜಿಲ್ಲಾ ಸಂಯೋಜಕರಾದ  ಗಣೇಶ್ ದೋಲ್ಪಾಡಿ ಇಲಾಖಧಿಕಾರಿಗಳೊಂದಿಗೆ ಪ್ರಶ್ನೆನೋತ್ತರ ಮಾಡುವ ಮೂಲಕ ಮಕ್ಕಳ ಹಕ್ಕುಗಳ ವ್ಯವಸ್ಥೆ ಕುರಿತು ಸಂವಾದ ನಡೆಸಿದರು.

See also  ಮಂಗಳೂರು: ಕೊರಗ ಸಮುದಾಯದವರಿಗೆ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿಲ್ಲ

ಇಂದಿನ ಈ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ನಲ್ಲಿ ಐದು ಗುಂಪುಗಳಿಂದ ಬಂದಂತಹ ಜಿಲ್ಲೆಯ ಸಮಸ್ಯೆಗಳ ಕುರಿತು ಪ್ರತಿ ಗುಂಪಿನಿಂದ ಎರಡು ಮಕ್ಕಳಂತೆ ಹತ್ತು ಮಕ್ಕಳು ತಮ್ಮ ವಿಷಯ ಮಂಡನೆ ಮಾಡಿದರು, ಇದರ ಆಧಾರದ ಮೇಲೆ ಇನ್ನುಳಿದ ಮಕ್ಕಳು ಉತ್ತಮವಾಗಿ ವಿಷಯ ಮಂಡನೆ ಮಾಡಿದ ಎರಡು ಮಕ್ಕಳನ್ನು ಬಹುಮತದ ಆಧಾರದ ಮೇಲೆ ನವೆಂಬರ್ ತಿಂಗಳಲ್ಲಿ ನಡೆಯುವ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮಕ್ಕೆ ” ಸರ್ಕಾರಿ ಪ್ರೌಢಶಾಲೆ ಕೊಂಬೆಟ್ಟು, ಪುತ್ತೂರು ಇದರ ವಿದ್ಯಾರ್ಥಿಗಳಾದ ಕುಮಾರಿ. ಪ್ರಣಾಮ್ಯ ಹಾಗೂ ಜೀವನ್ ” ಎಂಬ ಮಕ್ಕಳು ಆಯ್ಕೆಯಾದರು.

ಈ ಸಂಸತ್ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 30 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಪಡಿ ಮಂಗಳೂರು, ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ದ.ಕ ,ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ರೋಶಿನಿ ನಿಲಯ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ) ದ.ಕ, ಸಮಾನ ಮನಸ್ಕ ಸಂಘಟನೆಗಳ ಸದಸ್ಯರುಗಳು ಮತ್ತು ವಿವಿಧ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು