ಬೆಳ್ತಂಗಡಿ: ಕಲ್ಮಂಜ ಗ್ರಾಮದ ಪಜಿರಡ್ಕ ಎಂಬಲ್ಲಿ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ಸಂಗಮ ಸ್ಥಳದಲ್ಲಿ ನಿರ್ಮಾಣವಾಗಿರುವ ರಸ್ತೆ ಸಹಿತ ಕಿಂಡಿ ಅಣೆಕಟ್ಟಿನಲ್ಲಿ ಈ ಬಾರಿಯ ಮಳೆಗಾಲದಲ್ಲಿ ಭಾರಿ ಪ್ರಮಾಣದ ಮರಮಟ್ಟು ಸಂಗ್ರಹಗೊಂಡಿತ್ತು.
ಇಲ್ಲಿ ಸಿಲುಕಿದ್ದ ಮರಮಟ್ಟು ಹಾಗೂ ತ್ಯಾಜ್ಯವನ್ನು ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸ್ಥಳೀಯರ ಸಹಕಾರದಲ್ಲಿ ಭಾನುವಾರ ತೆರವುಗೊಳಿಸಿದರು.
ಇದರಿಂದ ಪರಿಸರದ ಜನರಿಗೆ ಹಾಗೂ ನದಿ ನೀರಿನ ಸರಾಗ ಹರಿವಿಗೆ ಅನುಕೂಲವಾಗಿದೆ.