News Kannada
Wednesday, December 07 2022

ಮಂಗಳೂರು

ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಪೂರ್ವಭಾವಿ ಸಭೆ

Photo Credit : By Author

ಬೆಳ್ತಂಗಡಿ: ಲಕ್ಷದೀಪೋತ್ಸವದ ಪ್ರತಿ ವರ್ಷ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಅದೇ ರೀತಿಯಲ್ಲಿ ಭಕ್ತಿಯ ಅರ್ಪಣೆಯಲ್ಲಿ ಭಾಗವಹಿಸುವವರಿಗೆ ಪ್ರಗತಿಯನ್ನು ದೇವರು ಕರುಣಿಸಿದ್ದಾರೆ. ಪ್ರಸಕ್ತ ವರ್ಷ 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಪ್ರತಿ ವರ್ಷ ಹೊರಡುವ ಪಾದಯಾತ್ರೆ ದಶಮಾನೋತ್ಸವ ಪ್ರಯುಕ್ತ ನ.1 ರಂದು ಉಜಿರೆಯು ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕರ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಭಜನಾ ತಂಡ ಚೆಂಡೆಯೊಂದಿಗೆ ಉಜಿರೆಯಿಂದ ಪ್ರಾರಂಭವಾದರೆ ಎಸ್.ಡಿ.ಎಂ. ಕಾಲೇಜುವರೆಗೆ ತೆರಳಲಿದೆ. ಪಾದಯಾತ್ರೆ ಪೂರ್ಣಗೊಳಿಸುವಲ್ಲಿ ಧರ್ಮಸ್ಥಳ ದ್ವಾರದ ಬಳಿ ಸ್ವಾಗತಿಸುವಲ್ಲಿ ಗೊಂದಲಗಳು ಏರ್ಪಟ್ಟಿದ್ದರಿಂದ ಕೆಲವು ಬದಲಾವಣೆ ತರಲಾಗುವುದು.

ಈವರ್ಷ 25,000 ಜನ ಪಾದಯಾತ್ರಿಗಳು ಸೇರುವ ಚಿಂತನೆ

ಭಕ್ತಿ ಮತ್ತು ಪ್ರೀತಿಯ ಕೋಟಿ ಪಂಚಾಕ್ಷರಿ‌ ಜಪ
ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಪ್ರಾಸ್ತಾವಿಸಿ, ಜನಾರ್ದನ ದೇವಸ್ಥಾನದಿಂದ ಮಂಜುನಾಥನವರೆಗೆ ಭಕ್ತಿ ಭಾವದಿಂದ ಪಾದಯಾತ್ರೆ ಆರಂಭಿಸಿ ಹತ್ತು ವರ್ಷ ಸಂದಿದೆ. ಈ ಬಾರಿ ಕೋಟಿ ಪಂಚಾಕ್ಷರಿ ಜಪವನ್ನ ಸಭೆ ಚಿಂತಿಸೋಣ ಎಂದು ಹೇಳಿದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಎಸ್.ಡಿ.ಎಂ. ಐಟಿ ವಿಭಾಗದ ಸಿಇಒ ಪೂರನ್ ವರ್ಮಾ, ಶ್ರೀ ಕ್ಷೇ.ಧ.ಗ್ರಾ.ಯೋ. ಸಿಒಒ ಅನಿಲ್ ಕುಮಾರ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಉಜಿರೆ ಎಸ್.ಡಿ.ಎಂ. ಕಾಲೇಜು ಹಿರಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ, ಉದ್ಯಮಿಗಳಾದ ರಾಜೇಶ್ ಪೈ, ಮೋಹನ್ ಕುಮಾರ್ ಉಪಸ್ಥಿತರಿದ್ದರು.

ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ಸುರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

See also  ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ವ್ಯಕ್ತಿಯೋರ್ವರು ಕೆಳಗೆ ಬಿದ್ದು ಮ್ರತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು