News Kannada
Thursday, October 05 2023
ಮಂಗಳೂರು

ಮಂಗಳೂರು: ಕರ್ನಾಟಕದ ಜನತೆ ಎಎಪಿಗೆ ಬೆಂಬಲ ನೀಡುತ್ತಾರೆ- ಪೃಥ್ವಿ ರೆಡ್ಡಿ

People of Karnataka will support AAP: Prithvi Reddy
Photo Credit : News Kannada

ಮಂಗಳೂರು: ನಮ್ಮ ದೇಶದಲ್ಲಿ ಆಮ್ ಆದ್ಮಿ ಪಕ್ಷ ಕಡಿಮೆ ಅವಧಿಯಲ್ಲೇ ಜನಜಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ದೆಹಲಿ, ಪಂಜಾಬ್ ರಾಜ್ಯಗಳ ಅನಂತರ ನಾವು ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂದು ಭರವಸೆಯನ್ನು ದೇಶದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ವ್ಯಕ್ತಪಡಿಸಿದ್ದಾರೆ.

ಅವರು ಇಂದು ನಗರದ ಡಾನ ಬಾಸ್ಕೋ ಸಬಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ವತಿಯಿಂದ ಆಯೋಜಿಸಲಾದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಎಎಪಿ ಸರಕಾರ ಬಂದಾಗ ಉತ್ತಮ ಗುಣಮಟ್ಟದ ಶಿಕ್ಷಣಸೌಲಭ್ಯ, ವೈದ್ಯಕೀಯ ಸೌಲಭ್ಯದೊಂದಿಗೆ ಶೂನ್ಯ ಪರ್ಸೆಂಟ್ ಕಮೀಷನ್ ನೂರು ಪರ್ಸೆಂಟ್ ಕೆಲಸ ಮಾಡಿ ತೋರಿಸುತ್ತೇವೆ ಎಂದು ಪೃಥ್ವಿ ರೆಡ್ಡಿ ಭರವಸೆ ನೀಡಿದರು.

ಗುಜರಾತ್ ರಾಜ್ಯದಲ್ಲಿ 40 ವರ್ಷಗಳಿಂದ ಆಡಳಿತ ನಡೆಸುತ್ತಿದ್ದರು ಬಿಜೆಪಿ ಮುಖಂಡರಾದ ನರೇಂದ್ರ ಮೋದಿ, ಅಮಿತ್ ಶಾ ಈಗ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಶಿಕ್ಷಣ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳು ಈಗ ರಾಹುಲ್ ಗಾಂಧಿಯವರನ್ನು ಪ್ರಶ್ನಿಸುತ್ತಿದ್ದಾರೆ. ಇದು ಆಮ್ ಆದ್ಮಿ ಪಕ್ಷದ ಸಾಧನೆಯಾಗಿದೆ. ಕರ್ನಾಟಕದ ಜನತೆ ಮೂರು ಪಕ್ಷಗಳನ್ನು ಕೂಡ ಕಡೆಗಣಿಸಿ ಎಎಪಿಗೆ ಬೆಂಬಲ ನೀಡುತ್ತಾರೆ. ನಾವು ಜನರಲ್ಲಿ ಓಟು ಕೇಳಬೇಕಾಗಿಲ್ಲ. ನಾವು ಇದ್ದೇವೆ ಎಂದು ಪ್ರತಿ ಬೂತುಗಳಲ್ಲಿ ಕೂಡ ಮನವರಿಕೆ ಮಾಡಿದರೆ ಸಾಕು ಎಂದು ಪೃಥ್ವಿ ರೆಡ್ಡಿ ಹೇಳಿದರು.

ಕರಾವಳಿಯ ಜಿಲ್ಲೆಗಳಲ್ಲಿ ಪಕ್ಷವನ್ನು ಕಟ್ಟಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ನೀಡಿದ್ದಾರೆ ಎಂದವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕನಿಷ್ಟ ಒಂದೆರಡು ಶಾಸಕರನ್ನುಗೆಲ್ಲಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಸಂತೋಷ್ ಕಾಮತ್ ಹೇಳಿದರು.

ಸಮಾವೇಶಕ್ಕು ಮುನ್ನ ನಗರದ ಸೋಜ ಆರ್ಕೇಡಿನಲ್ಲಿ ಆಮ್ ಆದ್ಮಿ ಪಕ್ಷದ ನೂತನ ಕಚೇರಿಯನ್ನು ಎಎಪಿ ಹಿತೈಷಿ ಮೈಕಲ್ ಡಿ ಸೋಜ ಅವರು ಉದ್ಘಾಟಿಸಿದರು.

ಆಮ್ ಆದ್ಮಿ ಜಾತಿ, ಧರ್ಮ ಭೇದಭಾವ ಇಲ್ಲದ ಪಕ್ಷವಾಗಿದ್ದು, ಭ್ರಷ್ಟಚಾರ ರಹಿತವಾಗಿ ಆಡಳಿತ ನೀಡುವ ದೇಶದ ಏಕೈಕ ಪಕ್ಷವಾಗಿದೆ. ಉತ್ತಮ ದೇಶವನ್ನು ಕಟ್ಟಲು ಜನರು ಆಮ್ ಆದ್ಮಿಯನ್ನು ಬೆಂಬಲಿಸಬೇಕು ಎಂದು ಮೈಕಲ್ ಡಿ ಸೋಜ ಹೇಳಿದರು.
ವೇದಿಕೆಯಲ್ಲಿ ಪಕ್ಷದ ರಾಜ್ಯ ಜತೆ ಕಾರ್ಯದರ್ಶಿ ವಿವೇಕಾನಂದ ಸಾಲಿನ್ಸ್, ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಅದಮಲೆ, ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್. ಉಡುಪಿ ಜಿಲ್ಲಾಧ್ಯಕ್ಷ ದಿವಾಕರ್ ಸನಿಲ್, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಾಲಕೃಷ್ಣ ನಾಯ್ಕ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ವಿಜಯನಾಥ ವಿಠಲ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಡಾ.ಬಿ.ಕೆ.ವಿಶುಕುಮಾರ್, ಸುಳ್ಯ ವಿಧಾನಸಭಾ ಕ್ಷೇತ್ರದ ಸುಮನ ಬೆಳ್ಳಾರ್ಕರ್, ಜಿಲ್ಲಾ ಕಾರ್ಯದರ್ಶಿ ವೇಣು ಗೋಪಾಲ್ ಉಪಸ್ಥಿತರಿದ್ದರು.

See also  ಮಂಡ್ಯ: ನೂತನ ಡಿಸಿ ಗೋಪಾಲಕೃಷ್ಣ ಅಧಿಕಾರ ಸ್ವೀಕಾರ

ದಿಟ್ಟ ಮಹಿಳಾ ಹೋರಾಗಾರ್ತಿ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರನ್ನು ಪೃಥ್ವಿ ರೆಡ್ಡಿ ಅವರು ಅಭಿನಂದಿಸಿದರು. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಾಡಗೀತೆ ಸಹಿತ ಕನ್ನಡ ಭಾವಗೀತೆಗಳನ್ನು ಹಾಡಲಾಯಿತು.
ಮೊದಲಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನಗರದ ಪಂಪ್ ವೆಲ್ ವೃತ್ತದಿಂದ ಅಂಬೇಡ್ಕರ್ ವೃತ್ತದ ತನಕ ಮೆರವಣಿಗೆ ನಡೆಸಿದರು. ಪುರುಷೋತ್ತಮ ಕೊಲ್ಪೆ ಸ್ವಾಗತಿಸಿದರು.   ಸಂದೀಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನೀರು ಕೊಡುವ ಯೋಗ್ಯತೆ ಇಲ್ಲ
ಕರಾವಳಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಶ್ಲಾಘಿಸಿದ ಬಿಜೆಪಿ ಮತದಾರ ನಾರಾಯಣ ಪ್ರಭು ಅವರು ಸಮಾವೇಶದಲ್ಲಿ ಮಾತನಾಡಿ, ನಾವು ಜನಸಂಘದ ಕಾಲದಿಂದಲು ಆರ್ ಎಸ್ ಎಸ್ ಬಿಜೆಪಿಗಾಗಿ ಕೆಲಸ ಮಾಡುತ್ತಾ ಬಂದಿದ್ದೇವೆ. ನಮ್ಮ ಪರಿಸರದಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಯೋಗ್ಯತೆ ಆಡಳಿತ ನಡೆಸುವವರಿಗೆ ಇಲ್ಲ. ಇವರಿಗೆ ಆಗುವುದಿಲ್ಲವಾದರೆ ಮನೆಯಲ್ಲಿ ಇರಬಹುದಲ್ಲ, ಯಾಕೆ ಕಾರ್ಪೋರೇಟರ್ ಆಗಬೇಕಾಗಿತ್ತು. ಕಾರ್ಪೋರೇಟರ್ ಗಂಡನು ಹೆಂಡತಿಯ ಪರವಾಗಿ ಓಡಾಡುವ ವ್ಯವಸ್ಥೆ ಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು