ಮಂಗಳೂರು: ದೇಶದ ಪ್ರತಿಷ್ಠಿತಕರ್ಣಾಟಕ ಬ್ಯಾಂಕ್100ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿತನ್ನ ಶತಮಾನೋತ್ಸವದ ಲಾಂಛನವನ್ನು‘ಸೆಲೆಬ್ರೇಟಿಂಗ್ ಹಂಡ್ರೆಡ್ ಇಯರ್ಸ್ ಆಫ್ ಟ್ರಸ್ಟ್ (ವಿಶ್ವಾಸಾರ್ಹ ನಂಟಿನ ಶತ ಸಂಭ್ರಮ)’ ಎಂಬ ಘೋಷವಾಕ್ಯದೊಂದಿಗೆ ಅನಾವರಣಗೊಳಿಸಿದೆ. ಬ್ಯಾಂಕಿನ ಪ್ರಧಾನಕಛೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ಲಾಂಛನವನ್ನುಅನಾವರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಎಂಡಿ ಹಾಗೂ ಸಿಇಓ ಮಹಾಬಲೇಶ್ವರ ಎಂ ಎಸ್‌ಅವರು “ಈ ಲಾಂಛನವು ಸ್ಪೂರ್ತಿದಾಯಕವಾಗಿದ್ದು ಬ್ಯಾಂಕಿನ ಸುದೀರ್ಘ ಇತಿಹಾಸ ಮತ್ತು ಭವಿಷ್ಯದ ಆಶಯಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಲಾಂಛನವು ಬ್ಯಾಂಕಿನ ಉಗಮ, ಬೆಳವಣಿಗೆ ಹಾಗೂ 1924ರಿಂದಈವರೆಗಿನ ಭವ್ಯಯಾನದ ಪ್ರತೀಕದಂತಿದ್ದು, ಪ್ರಾದೇಶಿಕ ಅಸ್ಮಿತೆಯನ್ನು ಕಾಯ್ದುಕೊಂಡು ಜಾಗತೀಕರಣದತ್ತ ನೋಟ ಎಂಬ ತತ್ತ್ವವನ್ನು ಪ್ರತಿನಿಧಿಸುತ್ತದೆ.
ಮಾತ್ರವಲ್ಲ ನಂಬಿಕೆ, ವಿಶ್ವಾಸ, ಸಮಗ್ರತೆ ಮತ್ತು ಹಸಿರು ಉಪಕ್ರಮಗಳಿಗೆ ಬ್ಯಾಂಕ್ ಹೆಸರುವಾಸಿಯಾಗಿರುವುದನ್ನು ಸೂಚಿಸುತ್ತದೆ. ಬ್ಯಾಂಕಿನ ಪರಿವರ್ತನಾ ಯಾತ್ರೆ ‘ಕೆಬಿಎಲ್ ವಿಕಾಸ್’ ಇದರ ಎರಡನೆಯ ಭಾಗವಾದ ‘ಕೆಬಿಎಲ್ ನೆಕ್ಸ್ಟ್’ನ ಡಿಜಿಟಲ್ ಉಪಕ್ರಮಗಳನ್ನೊಳಗೊಂಡಂತೆ ನವೀನ ಡಿಜಿಟಲ್ ವ್ಯವಹಾರಗಳನ್ನು ಹಾಗೂ ಡಿಜಿಟಲ್ ಇಂಡಿಯಾವನ್ನುಕೂಡಾ ಈ ಲಾಂಛನದಲ್ಲಿ ಅಳವಡಿಸಲಾಗಿದೆ.
ನಮ್ಮ ಗೌರವಾನ್ವಿತ ಗ್ರಾಹಕರು, ಶೇರುದಾರರು, ಹಿತೈಷಿಗಳು ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಕೆಬಿಎಲ್ ಕುಟುಂಬದ ಸರ್ವ ಸದಸ್ಯರ ಕಲ್ಪನೆಯನ್ನು ಮೈಗೂಡಿಸಿಕೊಂಡಿರುವ ಈ ಲಾಂಛನವು 2023-2024ರಲ್ಲಿ ಜರಗಲಿರುವ ಶತಮಾನೋತ್ಸವದ ವರ್ಷದುದ್ದಕ್ಕೂ ಆಚರಣೆಯ ಭಾಗವಾಗಿರುತ್ತದೆ”ಎಂದು ನುಡಿದರು.