ಬೆಳ್ತಂಗಡಿ: ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆಠವಳೆ ಫೌಂಡೇಶನ್ ಅಧ್ಯಕ್ಷ ಅನಿಲ್ ಆಠವಳೆ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದರು. ಹೆಗ್ಗಡೆಯವರು ಆಠವಳೆ ಅವರನ್ನು ಸಮ್ಮಾನಿಸಿದರು.
ಫೌಂಡೇಶನ್ ಸದಸ್ಯ ಅತುಲ್ ಆಠವಳೆ ಬರೋಡಾ, ವಕೀಲೆ ಸೀಮಾ ಅತುಲ್ ಆಠವಳೆ ಬರೋಡಾ, ನಿವೃತ್ತ ಸೈನಿಕ ರಘುರಾಮ ಆಠವಳೆ ಹೊಸ್ಮಠ, ಶೃತಿ ರಘುರಾಮ ಆಠವಳೆ ಹೊಸ್ಮಠ, ಶಿವರಂಜನ್ ಆಠವಳೆ ನಿಡ್ಲೆ, ದೀಪಕ ಆಠವಳೆ ಸೂಳಬೆಟ್ಟು ಉಪಸ್ಥಿತರಿದ್ದರು.