ಮಂಗಳೂರು: ಯೂತ್ ಸೆಂಟರ್(ರಿ) ಪಡೀಲ್ ನ ಕಳೆದ 54 ವರ್ಷಗಳ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಸಮಾಜಮುಖಿ ಸಾಧನೆ ಗಳಿಗಾಗಿ 2022 ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡ ಪ್ರಯುಕ್ತ ತಮ್ಮ ಮಾತೃ ಸಂಘ ವನ್ನು ಅಭಿನಂದಿಸುತ್ತಾ, ಯೂತ್ ಸೆಂಟರ್ ಮಹಿಳಾ ಮಂಡಲ, ಯೂತ್ ಸೆಂಟರ್ ನ ಯಕ್ಷಗಾನ ನೃತ್ಯ ಕಲಿಕಾ ಶಿಬಿರದ ಮಕ್ಕಳು ಮತ್ತು ಪೋಷಕರು, ಯೂತ್ ಸೆಂಟರ್ ಭಜನಾ ಕಲಿಕಾ ಶಿಬಿರದ ಮಕ್ಕಳು ಮತ್ತು ಪೋಷಕರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಹಿತೈಷಿಗಳು ಆಯೋಜಿಸಿದ ಗೌರವಾಭಿವಂದನೆ ಕಾರ್ಯಕ್ರಮ ದಿನಾಂಕ: 06.11.2022 ರಂದು ಸಂಜೆ 03:30 ಗಂಟೆಗೆ ಯೂತ್ ಸೆಂಟರ್ ಕ್ಲಬ್ಬಿನ ಆವರಣದಲ್ಲಿ ಜರಗಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಅಣ್ಣಯ್ಯ ಕುಲಾಲ್, ದಿವಂಗತ ದೇವರಾಜ ಅರಸ್ ಪ್ರಶಸ್ತಿ ಪುರಸ್ಕೃತರು, ಅಧ್ಯಕ್ಷತೆಯನ್ನು ವಹಿಸಿ, ಮುಖ್ಯ ಅತಿಥಿಗಳಾಗಿ ಶ್ರೀ ವಿಜಯಕುಮಾರ್ ಶೆಟ್ಟಿ, ಅಧ್ಯಕ್ಷರು, ಬಿಜೆಪಿ ದಕ್ಷಿಣ ಮಂಡಲ, ಶ್ರೀ ಹರೀಶ್ ಶೆಟ್ಟಿ, ಪ್ರಾಂಶುಪಾಲರು, ಐ ಟಿ ಐ, ಮಂಗಳೂರು ಶ್ರೀ ರಾಜ ಕೆ ಕೋಟ್ಯಾನ್, ಗೌರವಾಧ್ಯಕ್ಷರು, ಯೂತ್ ಸೆಂಟರ್ (ರಿ) ಪಡೀಲ್ ಯೂತ್ ಸೆಂಟರ್ ಮಹಿಳಾ ಮಂಡಲ, ಶ್ರೀ ಉದಯ್ ಕೆ ಪಿ, ಅಧ್ಯಕ್ಷರು, ಯೂತ್ ಸೆಂಟರ್ (ರಿ) ಪಡೀಲ್, ಯೂತ್ ಸೆಂಟರ್ ಮಹಿಳಾ ಮಂಡಲ ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಅಣ್ಣಯ್ಯ ಕುಲಾಲ್ ರನ್ನು ಕ್ಲಬ್ಬಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಹಿಷ ವಧೆ ಎಂಬ ಪ್ರಸಂಗವನ್ನು ಯಶಸ್ವಿಯಾಗಿ ಆಡಿ ತೋರಿಸಿದ ಯೂತ್ ಸೆಂಟರ್ ನ ಯಕ್ಷಗಾನ ನೃತ್ಯ ಕಲಿಕಾ ಶಿಬಿರದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಯನ್ನು ನೀಡಲಾಯಿತು ಮತ್ತು ಯೂತ್ ಸೆಂಟರ್ ನ ಭಜನಾ ಕಲಿಕಾ ಶಿಬಿರದ ಮಕ್ಕಳು ಪ್ರಪ್ರಥಮವಾಗಿ ನೃತ್ಯ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಬಹುಮಾನವನ್ನು ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಬಾಲಚಂದ್ರ ಕೆ ಪಿ, ಸ್ವಾಗತಿಸಿ, ನಿರೂಪಿಸಿದರು. ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಉದಯ ಕೆ ಪಿ ಪ್ರಸ್ತಾವಿಸಿದರು, ಉಪಾಧ್ಯಕ್ಷರಾದ ಶ್ರೀಮತಿ ಸುಮಾ ನಾಯರ್ ವಂದಿಸಿದರು.