News Kannada
Friday, September 29 2023
ಮಂಗಳೂರು

ಬಂಟ್ವಾಳ: ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ

Bantwal: Janaspandana programme to provide speedy response to the problems of villagers
Photo Credit : By Author

ಬಂಟ್ವಾಳ:  ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಿ  ಅಧಿಕಾರಿ ವರ್ಗಕ್ಕೆ ಚುರುಕು ಮುಟ್ಟಿಸುವುದರ ಜತೆಗೆ ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ಸರಪಾಡಿ ಜಿ.ಪಂ ವ್ಯಾಪ್ರಿಯ ಸರಪಾಡಿ, ನಾವೂರು, ಉಳಿ, ಮಣಿನಾಲ್ಕೂರು, ಬಡಗಕಜೆಕಾರು, ಕಾವಳಪಡೂರು, ಕಾವಳಮೂಡೂರು ಗ್ರಾಮ ಪಂಚಾಯತಗಳ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟನೆಗೈದು ಅವರು ಜನಪ್ರತಿನಿಧಿಗಳ ಸಮ್ಮುಖದಲ್ಲಿ‌ ಸಮಸ್ಯೆ ಹೇಳಿಕೊಂಡಾಗ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಜನರ ಬಳಿಗೆ ಕರೆದುಕೊಂಡು ಬರಲಾಗಿದೆ ಎಂದರು.

ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾರಾಮು ಮಾತನಾಡಿ,ಶಾಸಕ ರಾಜೇಶ್ ನಾಯ್ಕ್ ಅವರ ಕಲ್ಪನೆಯಂತೆ ಕರ್ನಾಟಕದಲ್ಲಿ ಮೊದಲಬಾರಿಗೆ  ವಿನೂತನ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದು, ಜನಸಾಮಾನ್ಯರ ಕುಂದುಕೊರತೆ ಅಲಿಸಿ ಪರಿಹರಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಸರಪಾಡಿ ಗ್ರಾಪಂ.ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು.ಉಳಿ ಗ್ರಾಪಂ ಅಧ್ಯಕ್ಷ ಸುರೇಶ್ ಮೈರ,ಮಣಿನಾಲ್ಕೂರು ಗ್ರಾಪಂ.ಅಧ್ಯಕ್ಷ ನಾಗವೇಣಿ,  ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿ,ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಶಿಕ್ಷಣಾಧಿಕಾರಿ ಜ್ಞಾನೇಶ್, ಜಿ.ಪಂ.ಎ.ಇ.ಇ.ತಾರಾನಾಥ, ಪಿ.ಡಬ್ಲೂ ಎ.ಇ. ಜಯಪ್ರಕಾಶ್, ಬಂಟ್ವಾಳ ವಲಯ ಆರಣ್ಯಾಧಿಕಾರಿ ರಾಜೇಶ್ ಬಳಿಗಾರ್ ,ಮೆಸ್ಕಾಂ ನಾರಾಯಣ ಭಟ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದಿಯಾ, ಕೆ.ಎಸ್.ಆರ್.ಟಿ.ಸಿ.ಸಂಸ್ಥೆಯ ಡಿಪೋ ಮ್ಯಾನೇಜರ್ ಶ್ರೀಶ ಭಟ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ ಡಿ.ಸೋಜ, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್. ಐ.ಗಳಾದ ಹರೀಶ್ ,ಭಾರತಿ, ಪಶುಸಂಗೋಪನೆ ಇಲಾಖೆಯ ಅವಿನಾಶ್, ಕಾರ್ಮಿಕ ಅಧಿಕಾರಿ ಮರ್ಲಿನ್ ಗ್ರೆಸಿ ಲೋಬೊ, ಎ‌‌.ಸಿ.ಡಿ‌.ಪಿ‌.ಒ.ಶೀಲಾವತಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.417 ಮಂದಿ ಸವಲತ್ತು ವಿತರಣೆ.

ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಕಂದಾಯ,ಕಾರ್ಮಿಕ,ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸುಮಾರು 417 ಮಂದಿ ಸವಲತ್ತುಗಳನ್ನು ವಿತರಿಸಲಾಯಿತು.ಹಾಗೆಯೇ 68 ಅರ್ಜಿ ಗಳನ್ನು ಸ್ವೀಕರಿಸಿ ವಿಲೇಗಾಗಿ ಸಂಬಂಧ ಪಟ್ಟ ಇಲಾಖೆಗೆ ಸೂಚಿಸಲಾಯಿತು.

ಅಲ್ಲಿಪಾದೆ ಚಚ್೯ ಬಳಿ ಚಚ್೯ ಆಡಳಿತ ಮಂಡಳಿ ಹಾಗೂ ಸ್ಥಳೀಯ ಆಟೋ ಚಾಲಕರ ಮಧ್ಯೆ ಜಾಗವೊಂದಕ್ಕೆ ಸಂಬಂಧಿಸಿ ಪದೇ,ಪದೇ ಉಂಟಾಗುವ ವಿವಾದದ ಅಹವಾಲನ್ನು ಚಚ್ ೯ ನ ಧರ್ಮಗುರುಗಳು ಶಾಸಕರಿಗೆ ದೂರು ಸಲ್ಲಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ವಿವಾದಿತ ಜಮೀನನ್ನು ಸರ್ವೇ ನಡೆಸಿ ಸಂಬಂಧಪಟ್ಟ ಜಾಗ ಯಾರಿಗೆ ಸೇರಿದೆ ಎಂಬುದನ್ನು ಖಚಿತಪಡಿಸಿ ನಿರ್ಧಾರ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಇದೇ ಜಾಗಕ್ಕೆ ಸಂಬಂಧಿಸಿ ಸ್ಥಳೀಯ ರಿಕ್ಷಾ ಚಾಲಕರು ಚಚ್೯ ನವರು ನಿರ್ಮಿಸಿದ್ದ ದೇವರ ಮೂರ್ತಿಯನ್ನು ತೆರವುಗೊಳಿಸಿ ರಿಕ್ಷಾ ತಂಗುದಾಣ ನಿರ್ಮಿಸಿಕೊಡುವಂತೆ ಶಾಸಕರು ಮನವಿ ಮಾಡಿದರು.  ಈ ವಿಚಾರವಾಗಿ ಪರಿಸರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಚ್ಚರಿಕೆ ವಹಿಸುವಂತೆ ಶಾಸಕರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

See also  ಚಾಮರಾಜನಗರ: ಪಂಪ್‌ ಸೆಟ್‌ ಕೇಬಲ್‌ ಕಳವಿಗೆ ಯತ್ನ, ಇಬ್ಬರ ಬಂಧನ

ನಾವೂರು ಪಿಡಿಒ ವಿರುದ್ದ ದೂರು:

ಜನಸ್ಪಂದನ ಕಾರ್ಯಕ್ರಮದ ಕುರಿತಂತೆ ಸದಸ್ಯರಿಗೆ ಮಾಹಿತಿ ನೀಡದಿರುವುದು ಮತ್ತು ಸದಸ್ಯರ ಅಹವಾಲಿಗೆ ಸ್ಪಂದಿಸದಿರುವ ಹಿನ್ನಲೆಯಲ್ಲಿ ನಾವೂರ ಗ್ರಾ.ಪಂ.ನ ಸದಸ್ಯರ ನಿಯೋಗ ಪಿಡಿಒ ಶಾಸಕರಿಗೆ ದೂರು ಸಲ್ಲಿಸಿತು.ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಪಿಡಿಒ ಗೈರು ಹಾಜರಾಗಿದ್ದರು.ತಾ.ಪಂ. ರಾಜಣ್ಣ ಸ್ವಾಗತಿಸಿದರು‌.ಸರಪಾಡಿಗ್ರಾಪಂ ಸದಸ್ಯ ಧನಂಜಯ ಶೆಟ್ಟಿ ವಂದನೆ .ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು