News Kannada
Tuesday, December 06 2022

ಮಂಗಳೂರು

ಬಂಟ್ವಾಳ: ಸ್ವಚ್ಛ ಸಂಕೀರ್ಣ ಘಟಕ ಮತ್ತು ಎರಡು ಹಿಂದೂ ರುದ್ರಭೂಮಿ ಲೋಕಾರ್ಪಣೆ

Bantwal: Clean complex unit and two Hindu burial grounds inaugurated
Photo Credit : By Author

ಬಂಟ್ವಾಳ: ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ 10 ಕೋಟಿಗೂ ಮಿಕ್ಕಿ ಅನುದಾನದಲ್ಲಿ ವಿವಿಧ ರಸ್ತೆ ಕಾಂಕ್ರಿಟೀಕರಣ, ಅಣೆಕಟ್ಟೆ ಮತ್ತಿತರ ಸೌಲಭ್ಯ ಒದಗಿಸಲಾಗಿದ್ದು, ಇಲ್ಲಿನ ಸ್ವಚ್ಛ ಸಂಕೀರ್ಣ ಘಟಕ ಮತ್ತು ಹಿಂದೂ ರುದ್ರಭೂಮಿ ಅಭಿವೃದ್ಧಿಗೂ ಅನುದಾನ ನೀಡುವುದಾಗಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.

ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛ ಸಂಕೀರ್ಣ ಘಟಕ ಸಹಿತ ರಾಯಿ ಮತ್ತು ಕೈತ್ರೋಡಿ ಎರಡು ಪತ್ಯೇಕ ಹಿಂದೂ ರುದ್ರಭೂಮಿ ಶುಕ್ರವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಪ್ರಾಸ್ತಾವಿಕ ಮಾತನಾಡಿ, ಗ್ರಾಮ ಪಂಚಾಯಿತಿ ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ಹಿಂದೂ ರುದ್ರಭೂಮಿ ನಿರ್ಮಾಣಗೊಂಡಿದೆ ಎಂದರು. ಗ್ರಾ.ಪಂ.ಸದಸ್ಯರಾದ ಸಂತೋಷ್ ಕುಮಾರ್ ಬೆಟ್ಟು, ದಿನೇಶ ಶೆಟ್ಟಿ, ಯಶೋಧ ನಾಯ್ಕ, ಉಷಾ ಸಂತೋಷ್, ಗುಣವತಿ, ಪುಷ್ಪಾವತಿ, ಮಾಜಿ ಅಧ್ಯಕ್ಷರಾದ ಜಿ.ದಾಮೋದರ ಬಂಗೇರ, ಇಂದಿರಾ ಮಧುಕರ ಬಂಗೇರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಕೆ.ನಾಯ್ಕ್, ಜಲಜೀವನ್ ಮಿಷನ್ ಎಂಜಿನಿಯರ್ ವಿಘ್ನೇಶ್ ರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಶಿವಾನಂದ, ರುದ್ರಭೂಮಿ ಮೇಲ್ವಿಚಾರಕ್ಷರಾದ ಬಿ.ದಯಾನಂದ ಸಪಲ್ಯ, ಕೆ.ಪರಮೇಶ್ವರ ಪೂಜಾರಿ ಮತ್ತಿತರರು ಇದ್ದರು.

ಪಿಡಿಒ ಮಧು ಟಿ.ಎಲ್.ಸ್ವಾಗತಿಸಿ, ದಿನೇಶ ಸುವರ್ಣ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

See also  ಮಂಡ್ಯ:  ಭಾರತದ ಸ್ವಾತಂತ್ರದ ಹೋರಾಟ  ವಿಶ್ವಕ್ಕೆ ಮಾದರಿ ಎಂದ ಆರ್ ಆಶೋಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು