ಮಂಗಳೂರು: ತಮಿಳುನಾಡಿನ ಸೇಲಂ ನಿವಾಸಿ ದೀಪ ಮಾರಾಟಗಾರ ಮಾಯವೆಲ್ ಪೆರಿಯಸಾಮಿ (52) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಮೂರ್ತಿ (45) ಎಂದು ಗುರುತಿಸಲಾಗಿದೆ. ಈ ಹಿಂದೆ ವಕೀಲ ನಾಯಕ್ ನನ್ನು ಬಂಧಿಸಲಾಗಿತ್ತು. ಮಾಜಿ ಜೊತೆ ಬಾಡಿಗೆ ಮನೆ ಹಂಚಿಕೊಂಡಿದ್ದ ಮೂರ್ತಿ ಕೂಡ ಕೊಲೆಯಲ್ಲಿ ಭಾಗಿಯಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ವ್ಯಾಪಾರ ವ್ಯವಹಾರದ ನೆಪದಲ್ಲಿ ಆರೋಪಿಗಳು ಪೆರಿಯಸಾಮಿಯನ್ನು ಕುಳೂರು ಮೈದಾನಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಕೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.