ಮಂಗಳೂರು: ನಿಲ್ಲಿಸಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಬಲ್ಮಠದ ಜ್ಯೂಸ್ ಜಂಕ್ಷನ್ ಬಳಿ ನಡೆದಿದೆ.
ರಾಹಿಲ್ ಎಂಬವರ ಇಕೋ ಸ್ಪೋಡ್ಸ್ ಕಾರ್ ಈ ಅವಘಡಕ್ಕೆ ತುತ್ತಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಬಸ್ಮವಾಗಿದೆ. ಮಂಗಳೂರಿನ ಬಲ್ಮಠದ ಜ್ಯೂಸ್ ಜಂಕ್ಷನ್ ಬಳಿ ಕಾರು ನಿಲ್ಲಿಸಿ, ರಾಹಿಲ್ ಮತ್ತು ಮನೆ ಮಂದಿ ಜ್ಯೂಸ್ ಕುಡಿಯಲು ಹೋಗಿದ್ದ ವೇಳೆ ಘಟನೆ ನಡೆದಿದೆ.
ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದ್ದು, ಬೆಂಕಿ ನಂದಿಸುಲಿವಲ್ಲಿ ಸ್ಥಳೀಯರು ಯಶಸ್ವಿಯಾದರು. ಸ್ಥಳಕ್ಕೆ ಎಸಿಪಿ ಗೀತಾ ಕುಲಕರ್ಣಿ ಹಾಗೂ ಕದ್ರಿ ಠಾಣಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.