ಮಂಗಳೂರು: ಪ್ರಸ್ತುತ ವೋಲ್ವೋ ಬಸ್ ನಿರ್ವಹಿಸಲು ಕಿಲೋ ಮೀಟರ್ ಗೆ 65 ಖರ್ಚು ತಗೊಳ್ಳುತ್ತದೆ ಆದರೆ ಪ್ರಸಕ್ತ ಬಸ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣ ನಡುವೆ ಕಿಲೋಮೀಟರ್ 7 ರೂಪಾಯಿ ಮತ್ತು ಮಣಿಪಾಲ ವಿಮಾನ ನಿಲ್ದಾಣ ನಡುವೆ 13 ರೂಪಾಯಿ ಮಾತ್ರ ಸಂಗ್ರವಾಗುತ್ತಿದೆ. ಮಣಿಪಾಲ ಮತ್ತು ಮಂಗಳೂರಿನಿಂದ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಬಸ್ಸುಗಳು ಬಹುತೇಕ ಖಾಲಿ ಓಡುತ್ತಿದೆ, ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಕೆಎಸ್ಆರ್ಟಿಸಿ 2014ರಲ್ಲಿ ಸಾಮಾನ್ಯ ಸಾರಿಗೆ ಮತ್ತು ಎರಡು ವರ್ಷ ಬಳಿಕ ವೋಲ್ವೋ ಬಸ್ ಆರಂಭಿಸಿತ್ತು. ಎರಡು ಬಾರಿ ಬಸ್ ಸೇವೆಯು ಪ್ರಯಾಣಿಕರ ಕೊರತೆಯಿಂದ ರದ್ದುಗೊಂಡಿತ್ತು ಇದೇ ಪರಿಸ್ಥಿತಿ ಪುನರಾವರ್ತನೆಯಾಗುವ ಸಾಧ್ಯತೆ ಕಂಡು ಬಂದಿದೆ
ಮಂಗಳೂರು ಮತ್ತು ಮಣಿಪಾಲದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಆರಂಭಿಸಬೇಕು ಎನ್ನುವುದು ಹಳೇ ಬೇಡಿಕೆ. ಆದರೆ ವಿವಿಧ ಕಾರಣಗಳಿಂದ ಈ ಮಾರ್ಗದಲ್ಲಿ ಬಸ್ ವ್ಯವಸ್ಥೆ ವಿಫಲವಾಗುತ್ತಿದೆ ವಿಮಾನದಲ್ಲಿ ಸಂಚರಿಸುವವರು ಸಾಮಾನ್ಯವಾಗಿ ಸ್ವಂತ ವಾಹನ ಅಥವಾ ಟ್ಯಾಕ್ಸಿಗಳ ಮೂಲಕವೇ ಪ್ರಯಾಣಿಸಲು ಬಯಸುತ್ತಾರೆ, ಬೆಂಗಳೂರು ನಗರಕ್ಕಿಂತ ಭಿನ್ನವಾದ ಪರಿಸ್ಥಿತಿ ಮಂಗಳೂರಿನಲ್ಲಿ ಇದೆ ಎನ್ನುವುದು ಎಲ್ಲಾ ಕೆಎಸ್ಆರ್ಟಿಸಿ ಸಿಬಂದಿ ಅಭಿಪ್ರಾಯ.
ಪ್ರಯಾಣಿಕರ ಕೊರತೆಯಿಂದಾಗಿ ವೋಲ್ವೋ ಬಸ್ ನಿರ್ವಣೆ ಕಷ್ಟ ಬೇಡಿಕೆ ಇರುವುದು ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರ ಇರಬೇಕೆನ್ನುವುದು ಹೊರತು ವೋಲ್ವೋ ಬಸ್ಸೇ ಬೇಕೆಂದಲ್ಲ. ಸಾಮಾನ್ಯ ಬಸ್ಸುಗಳನ್ನು ಓಡಿಸಬಹುದು ಸಾಮಾನ್ಯ ಹವಾ ನಿಯಂತ್ರಣ ಅಲ್ಲದ ಮಿನಿ ಬಸ್ಸುಗಳನ್ನು ಓಡಿಸುವ ಕುರಿತು ಕೆಎಸ್ಆರ್ಟಿಸಿ ಚಿಂತಿಸಬಹುದು ಇದರ ವಿಮಾನ ನಿಲ್ದಾಣಕ್ಕೆ ಬಸ್ ಸಂಪರ್ಕ ಇರಬೇಕೆಂಬ ಬೇಡಿಕೆಯು ಪೂರೈಸಿದಂತಾಗುತ್ತದೆ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದೆಂದು ಅಭಿಪ್ರಾಯವಿದೆ .
ಇಂದು ವಿಮಾನ ಪ್ರಯಾಣ ಸಿರಿವಂತರಿಗೆ ಮಾತ್ರ ಸೀಮಿತವಾಗಿಲ್ಲ ಅನಿವಾರ್ಯ ಕಾರಣಗಳಿಂದ ಮಧ್ಯಮ ವರ್ಗದ ಜನರು ಕೂಡ ವಿಮಾನದಲ್ಲಿ ಸಂಚರಿಸುತ್ತಾರೆ ಅಲ್ಲದೆ ಈ ಮಾರ್ಗದಲ್ಲಿ ಸಂಚರಿಸುವ ಸಾಮಾನ್ಯ ಸಾರಿಗೆಯನ್ನು ಇತರ ಸ್ಥಳಗಳ ಪ್ರಯಾಣಿಕರು ಕೂಡ ಬಳಸಲು ಅವಕಾಶ ಇರುವುದರಿಂದ ಸಾಮಾನ್ಯ ಬಸ್ ಓಡಿಸಿದರೆ ಕೆ ಎಸ್ ಆರ್ ಟಿ ಸಿ ಗೆ ನಷ್ಟ ಕೊಳಗಾಗುವ ಭೀತಿ ಇಲ್ಲ ಎಂಬುದು ಪ್ರಯಾಣಿಕರ ಮಾತು.