ಮಂಗಳೂರು: ಕರಾವಳಿಯ ಮುಂಚೂಣಿ ಸಹಕಾರಿ ಲಿಮಿಟೆಡ್ ಬ್ಯಾಂಕ್ ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಶತಮಾನೋತ್ತರ ದಶಮಾನೋತ್ಸವದ ಪ್ರಯುಕ್ತ ಸಮಾಜದ ಅಶಕ್ತ ವರ್ಗದವರ ಚಿಕಿತ್ಸೆಗೆ, ಉನ್ನತ ಶಿಕ್ಷಣಕ್ಕೆ, ವಸತಿ ಮತ್ತು ಹೆಣ್ಣು ಮಕ್ಕಳ ಮದುವೆ ವೆಚ್ಚಕ್ಕೆ, ಸರಿಸುಮಾರು 90 ಅಶಕ್ತ ಕುಟುಂಬಗಳಿಗೆ ೧೫ ಲಕ್ಷ ಮೊತ್ತದ ಧತ್ತಿ ದೇಣಿಗೆ ವಿತರಣಾ ಕಾರ್ಯಕ್ರಮ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಎಂಸಿಸಿ ಬ್ಯಾಂಕ್ ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಜೆಪ್ಪು ಸೆಮಿನರಿಯ ಆಡಳಿತಾಧಿಕಾರಿ, ಪ್ರೊಫೆಸರ್ ಫಾ. ನವೀನ್ ಪಿಂಟೊ ದೀಪಬೆಳಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸಮಾಜದ ದುರ್ಬಲ ಕುಟುಂಬಗಳಿಗೆ ಸಹಾಯಸ್ತ ನೀಡುವ ಪುಣ್ಯದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲು ಸಂತೋಷಪಡುತ್ತೇನೆ. ಈ ರೀತಿಯ ಸಮಾಜಮುಖಿ ಕಾರ್ಯಗಳ ಮೂಲಕ ಬ್ಯಾಂಕ್ ಮತ್ತಷ್ಟು ಗ್ರಾಹಕರತ್ತ ಹೋಗಲು ಸಾಧ್ಯವಾಗಿದೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಎಂಸಿಸಿ ಬ್ಯಾಂಕ್ ನಿಂದ ಆಗಲಿ. ದ.ಕ ಜಿಲ್ಲೆಯಲ್ಲಿ ಜಾತಿ ಮತ ಭೇದ ಮರೆತು ಸಹಾಯಸ್ತ ಚಾಚುವ ಕೈಗಳು ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ಇನ್ನಷ್ಟು ದುರ್ಬಲ ವರ್ಗಗಳ ಏಳಿಗೆಗೆ ಮುಂದಾಗುವ ಸಂಸ್ಥೆಯಾಗಲಿ ಎಂದರು.
ಈ ವೇಳೆ ಮಂಗಳೂರು ಮಹಾನಗರ ಪಾಲಿಕೆ ಮಹಾಪೌರ ಜಯನಂದ್ ಅಂಚನ್ ಮಾತನಾಡಿ ಎಂಸಿಸಿ ಬ್ಯಾಂಕ್ ಸಮಾಜದ ದುರ್ಬಲ ವರ್ಗಗಳ ಶಿಕ್ಷಣ, ಆರೋಗ್ಯ, ಮನೆ ನಿರ್ಮಾಣ, ವಿವಾಹ ವೆಚ್ಚದ ದತ್ತಿ ದೇಣಿಗೆ ನೀಡುವ ಕಾರ್ಯ ಶ್ಲಾಘನೀಯ ವಿಚಾರ ಅದರಲ್ಲೂ ಈ ಸೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ದುರ್ಬಲ ವರ್ಗಕ್ಕೆ ಸಿಗುವಂತಾಗಲಿ ಅದರೊಂದಿಗೆ ಈ ಸೇವೆ ಇತರರಿಗೆ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಮನಪ ವಿಪಕ್ಷ ನಾಯಕ ನವೀನ್ ಡಿಸೋಜ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನೀಲ್ ಲೋಬೊ, ಎಂಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಎಂಸಿಸಿ ಬ್ಯಾಂಕ್ ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್, ಎಂಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಆ್ಯಂಡ್ರೂ ಡಿಸೋಜ, ಮಾರ್ಸೆಲ್ ಎಮ್ ಡಿಸೋಜ, ಜೋಸೆಫ್ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೆರೋ, ಎಲ್ರೋಯ್ ಕೆ ಕ್ರಾಸ್ಟೊ, ಜೆ.ಪಿ ರೊಡ್ರಿಗಸ್, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೋ, ಡಾ. ಫ್ರೀಡಾ ಡಿಸೋಜ, ಸಿ.ಜಿ ಪಿಂಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪಿ ಮೊಂತೇರೊ, ಶರ್ಮಿಳಾ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.