ಬೆಳ್ತಂಗಡಿ: ‘ಶಿಸ್ತು,ಪ್ರಾಮಾಣಿಕತೆ ಮತ್ತು ಸ್ವಚ್ಛ ಬದುಕಿಗೆ ಹೆಸರಾದವರು ಕೆ.ಜಿ. ಬಂಗೇರರು. ಅವರ ಪರೋಪಕಾರ ಗುಣದಿಂದಾಗಿಯೇ ಅವರಿಗೆ ಶತಾಯುಷಿಗಳಾಗಿ ಆರೋಗ್ಯದಿಂದ ಬದುಕುವಂತೆ ಆ ಪರಮಾತ್ಮನ ವರ ಲಭಿಸಿದೆ’ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಮುಗ್ಗ ಕುಟುಂಬಸ್ಥರ ಟ್ರಸ್ಟ್ ಬೆಳ್ತಂಗಡಿ, ಶೀ ಗುರುನಾರಾಯಣ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ, ಶ್ರೀ ಗುರುದೇವ ಎಜ್ಯುಕೇಷನಲ್ ಟ್ರಸ್ಟ್ ಬೆಳ್ತಂಗಡಿ, ಎ.ವೀರಮ್ಮ ಕೆ.ಜಿ. ಬಂಗೇರ ಮಕ್ಕಳ ವತಿಯಿಂದ 101 ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಮುಗ್ಗ ಗುತ್ತು ಕುಟುಂಬದ ಹಿರಿಯರಾದ ಕೆ.ಜಿ. ಬಂಗೇರ ಅವರ ಹುಟ್ಟು ಹಬ್ಬ ಆಚರಣೆಯಲ್ಲಿ ಅಭಿನಂದನಾ ಭಾಷಣ ಮಾಡಿದರು.
‘ಕೆ.ಜಿ. ಬಂಗೇರರು ಸಮಾಜದ ಅಭಿವೃದ್ಧಿಯ ಕನಸು ಕಂಡವರು. ಹಾಗಾಗಿಯೇ ಗುರುದೇವ ವಿವಿದೋದ್ದೇಶ ಸಹಕಾರ ಸಂಘ, ಶ್ರೀ ಗುರುದೇವ ಶಿಕ್ಷಣ ಸಂಸ್ಥೆಗಳು ಆರಂಭವಾಗಲು ಕಾರಣವಾಯಿತು’ ಎಂದರು. ಕಸ್ತೂರಿ ಬಾಲಕೃಷ್ಣ ಪೈ ಅಭಿನಂದನಾ ಮಾತುಗಳನ್ನಾಡಿದರು.
ಜಗನ್ನಾಥ ಬಂಗೇರ ನಿರ್ಮಾಲ್ ಅವರ ಸಂಪಾದಕತ್ವದಲ್ಲಿ ಹೊರತಂದ ಸಮಾಜದೊಂದಿಗೆ ಶತಮಾನ ಕಂಡ ಶ್ರೀ ಮುಗ್ಗ ಗುತ್ತು ಕೆ.ಜಿ. ಬಂಗೆರ ಅವರ ನೂರೊಂದು ನೆನಪು ‘ಸಂಭ್ರಮ’ ಎಂಬ ಸ್ಮರಣ ಸಂಚಿಕೆಯನ್ನು ಹಿರಿಯ ವಕೀಲ ನೇಮಿರಾಜ್ ಶೆಟ್ಟಿ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಕೆ.ಪ್ರಭಾಕರ ಬಂಗೇರ, ವಸಂತ ಸಾಲ್ಯಾನ್, ಧನಂಜಯ ಸುವರ್ಣ ಮಂಗಳೂರು, ಪೀತಾಂಬರ ಹೇರಾಜೆ, ಪಿ.ಕೆ. ರಾಜು ಪೂಜಾರಿ, ಚಿದಾನಂದ ಪೂಜಾರಿ ಎಲ್ದಕ್ಕ, ತುಕಾರಾಮ ಬಂಗೇರ, ಗಂಗಾಧರ ಮಿತ್ತಮಾರ್, ಶಾರದಾ ಕೃಷ್ಣ, ಕಾರ್ಯದರ್ಶಿ ಭಗೀರಥ ಜಿ, ಜೊತೆ ಕಾರ್ಯದರ್ಶಿಗಳಾದ ದಿನೇಶ್ ಪೆದಮಲೆ, ಪ್ರಶಾಂತ್ ಬಂಗೇರ, ಅನೂಪ್ ಬಂಗೇರ, ಕೋಶಾಧಿಕಾರಿ ಜಯವಿಕ್ರಮ್, ಸದಸ್ಯರಾದ ಶೇಖರ ಬಂಗೇರ, ಮೋನಪ್ಪ ಪೂಜಾರಿ, ಧರಣೇಂದ್ರ ಕುಮಾರ್, ಸತೀಶ್ ಕಾಶಿಪಟ್ಣ, ಚಂದ್ರಹಾಸ ಕೇದೆ, ಸಂಚಾಲಕ ಗುಣಕರ ಅಗ್ನಾಡಿ , ಜಗನ್ನಾಥ ಬಂಗೇರ ನಿರ್ಮಲ್ ಹಾಗೂ ಪ್ರಮುಖರಾದ ಯೋಗೀಶ್ ಕುಮಾರ್, ರಾಘವ, ಸುಜಿತಾ ವಿ ಬಂಗೇರ, ಜನಾರ್ದನ ಕಳಿಯ, ದೇವರಾಜ್ ಕಲ್ಲಾಪು, ಚಂದಪ್ಪ ಪೂಜಾರಿ, ಪಿ,ರಕ್ಷಿತ್ ಶಿವರಾಂ, ಗೋಪಾಲ ಪೂಜಾರಿ, ಎ.ಎಲ್.ಸುವರ್ಣ ಮುಂತಾದವರು ಇದ್ದರು.
ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಕುಟುಂಬ ವರ್ಗದವರಿಂದ, ಸಾರ್ವಜನಿಕರಿಂದ ಅಭಿನಂದನೆ ಸಲಲಿಸಲಾಯಿತು.
ಕೆ.ಜಿ.ಬಂಗೇರ ಹಾಗೂ ಪತ್ನಿ ವೀರಮ್ಮ ದಂಪತಿಗಳು ದೀಪ ಬೆಳಗಿ ಕೇಕ್ ಕತ್ತರಿಸಿದರು. ಸುಮಂಗಲೆಯರು ಆರತಿ ಬೆಳಗುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು. ಕೆ ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಪ್ರಸ್ತಾವಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ರಾಜಾರಾಮ್ ಸನ್ಮಾನ ಪತ್ರ ವಾಚಿಸಿದರು. ಸಂಚಾಲಕ ಚರಣ್ ಕೆ. ವಂದಿಸಿದರು.
ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.