ಮಂಗಳೂರು: ಎಂಸಿಸಿ ಬ್ಯಾಂಕ್ ಮಂಗಳೂರು ಇದ್ರ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮ ಮಂಗಳೂರಿನ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ದೀಪಬೆಳಗಿ ಚಾಲನೆ ನೀಡಿದರು.
ಎಂಸಿಸಿ ಸಂಸ್ಥಾಪಕ ಪಿ.ಎಫ್. ಎಕ್ಸ್. ಸಲ್ಡಾನ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆಯನ್ನು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನೀಲ್ ಲೋಬೊ ಸೇರಿ ನೆರವೇರಿಸಿದರು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ ಎಂಸಿಸಿ ಬ್ಯಾಂಕ್ ನೂರತ್ತ ಸಂವತ್ಸರವನ್ನು ಸಂಪೂರ್ಣಗೊಳಿಸಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರ. ಈ ಅಭಿವೃದ್ಧಿಗೆ ಮೂಲ ಕಾರಣ ಬ್ಯಾಂಕ್ ನೀಡಿದ ಸೇವೆಯಾಗಿ, ಎಂಸಿಸಿ ಬ್ಯಾಂಕ್ ನ ಸೇವೆ ಹೇಗೆಂದರೆ ಕೇಳಿದ್ದಕ್ಕಿಂತ ಹೆಚ್ಚಾಗಿ ಕೊಡುವಂತಹದ್ದಾಗಿದೆ ಈ ಮೂಲಕ ಬೆಳೆದು ನಿಂತ ಎಂಸಿಸಿ ಬ್ಯಾಂಕ್ ಇದೀಗಾ ತನ್ನ ಲಾಭಾಂಶದಲ್ಲಿ ಅಶಕ್ತ ಕುಟುಂಬಗಳಿಗೆ ದತ್ತಿ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿ ಬೆಳೆಯಲಿದೆ ಎಂದವರು ಹೇಳಿದರು.
ಬಳಿಕ ಮಾತನಾಡಿದ ಯಾವುದೇ ಒಂದು ಸಂಸ್ಥೆಯ ಸೇವೆ ಪರಿಪೂರ್ಣತೆಗೆ ಮೂರು ಅಂಶಗಳು ಮುಖ್ಯವಾಗಿದೆ ಉತ್ತಮ ಆಡಳಿತ, ಸಮರ್ಪಣಾ ಮನೋಭಾವದ ಸಿಬ್ಬಂದಿಗಳು, ಮತ್ತು ಗ್ರಾಹಕರು ಇದ್ರೆ ಯಾವುದೇ ಸಂಸ್ಥೆ ಬೆಳೆದು ನಿಲ್ಲಲು ಸಾಧ್ಯ ಅದ್ರಂತೆ ಮಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಎಂಸಿಸಿ ಬ್ಯಾಂಕ್ ಇದೀಗಾ ೧೧೦ ವರ್ಷಗಳ ಪೂರೈಸಿದ ಅದಕ್ಕೆ ಇಲ್ಲಿನ ಆಡಳಿತ ಮಂಡಳಿ, ಸಿಬ್ಬಂದಿಗಳು, ಮತ್ತು ಗ್ರಾಹಕರೇ ಮೂಲ. ಈ ಸಂಸ್ಥೆಯ ಇನ್ನಷ್ಟು ಯಶಸ್ಸು ಅಭಿವೃದ್ಧಿ ಪಥದತ್ತ ಸಾಗಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಎಂಸಿಸಿ ಬ್ಯಾಂಕ್ ಹೆಸರು ಮೂಡಿಬರುವಂತಾಗಲಿ ಎಂದವರು ಶುಭ ಹಾರೈಸಿದ್ರು.
ಕಾರ್ಯಕ್ರಮದಲ್ಲಿ ಆರ್ಸುಲಾಯ್ನ್ ಮದರ್ ಜನ್ರಲ್ ಸಿಸ್ಟರ್ ಮಿಲ್ಲಿ ಫರ್ನಾಂಡೀಸ್, ಬ್ಯಾಂಕ್ ನ ಮಾಜಿ ಅಧ್ಯಕ್ಷ ವೆಲೆಂಟೈನ್ ಡಿಸಿಲ್ವ, ಮಂಗಳೂರು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನೀಲ್ ಲೋಬೊ, ಎಂಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಎಂಸಿಸಿ ಬ್ಯಾಂಕ್ ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್, ಎಂಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಆ್ಯಂಡ್ರೂ ಡಿಸೋಜ, ಮಾರ್ಸೆಲ್ ಎಮ್ ಡಿಸೋಜ, ಜೋಸೆಫ್ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೆರೋ, ಎಲ್ರೋಯ್ ಕೆ ಕ್ರಾಸ್ಟೊ, ಜೆ.ಪಿ ರೊಡ್ರಿಗಸ್, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೋ, ಡಾ. ಫ್ರೀಡಾ ಡಿಸೋಜ, ಸಿ.ಜಿ ಪಿಂಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪಿ ಮೊಂತೇರೊ, ಶರ್ಮಿಳಾ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.