ಮಂಗಳೂರು: ನಗರದ ಕಂಕನಾಡಿ ನಾಗುರಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಜೀವಕ್ಕೂ ಆಪತ್ತು ಇರುವ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ಮಾಡಲಾಗಿದೆ. ಕರಾವಳಿಯಲ್ಲಿ ಉಗ್ರರ ಸ್ಲೀಪರ್ ಸೆಲ್ಗಳು ಸಕ್ರಿಯವಾಗಿದ್ದು, ಆತಂಕದ ಹಿನ್ನೆಲೆಯಲ್ಲಿ ಬಿಗು ಭದ್ರತೆ ಮಾಡಲಾಗಿದೆ. ಶಾರೀಕ್ಗೆ ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲೆಡೆ ಬಿಗು ಬಂದೋಬಸ್ತ್ ಮಾಡಲಾಗಿದೆ.
ನಗರದ ಕಂಕನಾಡಿ ನಾಗುರಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಜೀವಕ್ಕೂ ಆಪತ್ತು ಇರುವ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ಮಾಡಲಾಗಿದೆ. ಹ್ಯಾಂಡ್ಲರ್ಗಳ ಅಣತಿಯಂತೆ ಶಾರೀಕ್ನನ್ನು ಮುಗಿಸಲು ಯತ್ನ ನಡೆಯುವ ಶಂಕೆ ವ್ಯಕ್ತವಾಗಿದೆ.
ಕರಾವಳಿಯಲ್ಲಿಉಗ್ರರ ಸ್ಲೀಪರ್ ಸೆಲ್ಗಳು ಸಕ್ರಿಯವಾಗಿದ್ದು, ಆತಂಕದ ಹಿನ್ನೆಲೆಯಲ್ಲಿ ಬಿಗು ಭದ್ರತೆ ಮಾಡಲಾಗಿದೆ. ಶಾರೀಕ್ಗೆ ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲೆಡೆ ಬಿಗುಬಂದೋಬಸ್ತ್ ಮಾಡಲಾಗಿದೆ.
ಶಾರೀಕ್ ಕೊಠಡಿ ಬಳಿ ಒಬ್ಬ ಇನ್ಸ್ಪೆಕ್ಟರ್, ಪಿಎಸ್ಐ ಹಾಗೂ ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿದೆ. ಆಸ್ಪತ್ರೆಯ ಹೊರಗೂ ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದು, ಬಂದು ಹೋಗುವರರ ಮೇಲೆ ನಿಗಾ ಇರಿಸಲಾಗಿದೆ. ಗಂಭೀರ ಸುಟ್ಟಗಾಯದಿಂದ ದಾಖಲಾಗಿರುವ ಶಂಕಿತ ಉಗ್ರ ಶಾರೀಕ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಆತನಿಗೆ ಅಳವಡಿಸಲಾದ ವೆಂಟಿಲೇಟರ್ ತೆಗೆಯಲಾಗಿದೆ. ಹೊಗೆ ತುಂಬಿಕೊಂಡು ಚೆಸ್ಟ್ ಇನ್ಫೆಕ್ಷನ್ನಿಂದ ಶಾರೀಕ್ ಬಳಲುತ್ತಿದ್ದಾನೆ ಎಂದು ತಿಳಿದು ಬಂದಿದೆ.