ಮಂಗಳೂರು: ನಗರದ ನಂತೂರು ಸರ್ಕಲ್ ಬಳಿಯಲ್ಲಿ ಅನ್ಯಕೋಮಿನ ಯುವತಿಯ ಜೊತೆಗೆ ಬಸ್ ನಲ್ಲಿ ತೆರಳುತ್ತಿದ್ದಂತ ಯುವಕನ ಮೇಲೆ, ಬಜರಂಗದಳದ ಕಾರ್ಯಕರ್ತರು ಥಳಿಸಿದ್ದರು. ಈ ಸಂಬಂಧ ಯುವಕ ಕದ್ರಿ ಪೊಲೀಸ್ ಠಾಣೆ ದೂರು ನೀಡಿದ್ದನು. ಈ ದೂರಿನ ಹಿನ್ನಲೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಬಂಧಿಸಿರುವಂತವರನ್ನು ಮುತ್ತು (18), ಪ್ರಕಾಶ್ (21) ಮತ್ತು ರಾಕೇಶ್ (23) ಎಂದು ತಿಳಿದು ಬಂದಿದೆ.
ಅಂದಹಾಗೇ ಕಳೆದ ಮೂರು ದಿನಗಳ ಹಿಂದೆ ರಶೀಂ ಎಂಬಾತ ಕಾರ್ಕಳದ ನಿಟ್ಟೆಯಿಂದ ತನ್ನ ಸಹಪಾಠಿ ಯುವತಿಯೊಂದಿಗೆ ಬಸ್ಸಿನಲ್ಲಿ ತೆರಳುತ್ತಿದ್ದನು. ನಂತೂರು ಸರ್ಕಲ್ ಬಳಿ ಏಕಾಏಕಿ ಬಸ್ ತಡೆದು ಒಳ ನುಗ್ಗಿದ್ದಂತ ಬಜರಂಗದಳದ ಕಾರ್ಯಕರ್ತರು, ಯುವಕನನ್ನು ಥಳಿಸಿದ್ದರು.