News Kannada
Tuesday, February 07 2023

ಮಂಗಳೂರು

ಬೆಳ್ತಂಗಡಿ: ದುರಾಸೆ ಮಟ್ಟಹಾಕದಿದ್ದರೆ ದೇಶ ರಾಜ್ಯ ಅಭಿವೃದ್ಧಿ ಸಾದ್ಯವಿಲ್ಲ-ಸಂತೋಷ್ ಹೆಗ್ಡೆ

Belthangady: India and state cannot be developed if greed is not curbed: Santosh Hegde
Photo Credit : News Kannada

ಬೆಳ್ತಂಗಡಿ: ಅತಿಯಾದ ದುರಾಸೆಯೇ ಎಲ್ಲ ಭ್ರಷ್ಟಾಚಾರಕ್ಕೆ ಮೂಲ ಕಾರಣ. ಇರುವುದರಲ್ಲಿ ತೃಪ್ತಿಯ ಜೊತೆಗೆ ದುರಾಸೆಯ ಮಟ್ಟವಮ್ಮ ನಿಯಂತ್ರಿಸದಿದ್ದರೆ ಸಮಾಜದಲ್ಲಿ ಶಾಂತಿ‌ ಸೌಹಾರ್ದತೆ ನೆಲೆಸಲು ಸಾಧ್ಯವೇ ಇಲ್ಲ ಎಂದು ಪರಮೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಹೇಳಿದರು.

ಗುರುವಾಯನಕೆರೆ ಬಂಟರ ಭವನದಲ್ಲಿ ನ.27 ರಂದು ನಡೆದ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಪ್ರಾಂತ್ಯ5 ರ ಪ್ರಾಂತ್ಯ ಸಮ್ಮೇಳನ “ಪ್ರಾಪ್ತಿ” ಇದರಲ್ಲಿ ಅವರು ಶಿಖರೋಪನ್ಯಾಸ ನೀಡುತ್ತಿದ್ದರು.

ತಪ್ಪುಗಳನ್ನು ಮಾಡುವವರನ್ನು ಬಹಿಷ್ಕರಿಸುವ ಕಾಲವೊಂದಿತ್ತು. ಇದರ ಶಿಕ್ಷೆ ತಪ್ಪು ಮಾಡಿದವರಿಗೆ ಮಾತ್ರ ವಲ್ಲ ಅವರ ಕುಟುಂಬ ವರ್ಗಕ್ಕೂ ತಟ್ಟುತ್ತಿತ್ತು. ಆದರೆ ಇಂದು ಅನ್ಯಾಯಗೈದು ಜೈಲಿಗೆ ಹೋಗಿ‌ ಬರುವ ವ್ಯಕ್ತಿಗಳನ್ನೂ ಗೌರವಿಸಿ‌ ಸಂಭ್ರಮಿಸುವ ಸ್ಥಿತಿ‌ ಇದೆ. ಹಿಂದೆ ಮಕ್ಕಳಿಗೆ ಶಾಲೆಯಲ್ಲಿ ನೀತಿ ಪಾಠ ಇತ್ತು‌. ಈಗ ಅದು ಇಲ್ಲದಾಗಿದೆ. ಇರುವುದರಲ್ಲಿ ತೃಪ್ತಿ ಪಡುವ ಮೌಲ್ಯ ಅಳವಡಿಸುವ ಪ್ರಯತ್ನ ಆಗಲೇ ಬೇಕು. ಸಂಪಾದನೆಯ ಗುರಿ ಬೇಕು ಆದರೆ ಅದು ನ್ಯಾಯಮಾರ್ಗದಿಂದ ಆಗಿರಬೇಕು. ಇನ್ನೊಬ್ಬರ ಜೇಬಿಗೆ ಕೈ ಹಾಕಿದರೆ ಅದರಲ್ಲಿ ತೃಪ್ತಿ ಹೊಂದಲು ಸಾದ್ಯವಿಲ್ಲ. ನಮ್ಮ ಮಾನವೀಯತೆಯ ಗುಣ ನಮ್ಮ ಮಕ್ಕಳು, ಕುಟುಂಬಕ್ಕೆ ಮಾತ್ರ ಸೀಮಿತವಾದುದಲ್ಲ. ಸಮಾಜದಲ್ಲೂ ನಮ್ಮ‌ ಮಾನವೀಯತೆ ತೋರುವುದು ಮುಖ್ಯ‌ ಎಂದು ಅವರು ತಿಳಿಸಿದರು.

ಪ್ರಾಂತ್ಯಾಧ್ಯಕ್ಷ, ಶ್ರದ್ದಾ ಎಂಟರ್ ಪ್ರೈಸಸ್ ಮಾಲಿಕ ವಸಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಲಯನ್ಸ್ ಮೂಲಕ ಸಲ್ಲಿಸಿದ ಸೇವೆಯಿಂದ ಸಂತೃಪ್ತಿಯಾಗಿದೆ. ಪ್ರಾಂತ್ಯದ ಎಲ್ಲಾ 8 ಲಯನ್ಸ್ ಕ್ಲಬ್ಬುಗಳೂ ಕೂಡ ತಪ್ತಿದಾಯಕ ಕಾರ್ಯ ಮಾಡಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಎಸ್‌ಡಿಎಂ ಶಿಕ್ಷ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್ ಸತೀಶ್ಚಂದ್ರ ಮಾತನಾಡಿ, ಯೋಜನೆ, ಮಾತು ಮತ್ತು‌ ನಮ್ಮ ಕೆಲಸ ಇವುಗಳು ಒಂದಕ್ಕೊಂದು ಪೂರಕವಾಗಿದ್ದರೆ ಅಂತವರು ಮಾಹಾತ್ಮರಾಗುತ್ತಾರೆ. ಆಡುವ ಮಾತಿಗೂ ಪ್ರವೃತ್ತಿಗೂ ಸಂಬಂಧವಿರಬೇಕಾದುದು ಮುಖ್ಯ ಎಂದರು.

ಮಾಜಿ‌ ‌ ಯೋಧ ಜಗನ್ನಾಥ ಶೆಟ್ಟಿ ರಾಷ್ಟ್ರದ್ವಜವನ್ನು ವೇದಿಕೆಗೆ ತಂದರೆ, ನಿತ್ಯಾನಂದ ನಾವರ ಅವರು ಧ್ವಜ ವಂದನೆ ನಡೆಸಿಕೊಟ್ಟರು. ಸಮ್ಮೇಳನ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರಾಂತ್ಯದ ಪ್ರಥಮ ಮಹಿಳೆ ಶಾಲಿನಿ‌ ವಸಂತ ಶೆಟ್ಟಿ ನಡೆಸಿದರು. ಪ್ರಾಂತ್ಯದ ಸೇವಾ ಚಟುವಟಿಕೆಗಳ ವಿವರವನ್ನು ಅಮಿತಾನಂದ ಹೆಗ್ಡೆ, ಜಿಫ್ರಿಯನ್ ತಾವ್ರೋ ಮತ್ತು ರವಿ ಶೆಟ್ಟಿ ಸುಲ್ಕೇರಿ ನಡೆಸಿಕೊಟ್ಟರು. “ಪ್ರತೀಕಾ” ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಗಿ ಸಂಪಾದಕಿ ಸುಭಾಷಿಣಿ ಸಂಪಾದಕೀಯ ಮಾತುಗಳನ್ನಾಡಿದರು.

ಅತಿಥಿಗಳನ್ನು ಮತ್ತು ಸನ್ಮಾನಿತರನ್ನು ಪರಿಚಯಿಸುವುದು ಸಹಿತ ಇತರ ಜವಾಬ್ದಾರಿಗಳನ್ನು ಪ್ರಕಾಶ ಶೆಟ್ಟಿ ನೊಚ್ಚ, ಕೃಷ್ಣ ಆಚಾರ್, ಧರಣೇಂದ್ರ ಕೆ.ಜೈನ್, ರವೀಂದ್ರ ಶೆಟ್ಟಿ ಓಸ್ವಾಲ್ಡ್ ಡಿಸೋಜಾ, ಮಂಜುನಾಥ ಜಿ, ಲಕ್ಷ್ಮಣ ಪೂಜಾರಿ, ಕಿರಣ್ ಕುಮಾರ್ ಶೆಟ್ಟಿ, ದೇವಿಪ್ರಸಾದ್, ರಾಮಕೃಷ್ಣ ಗೌಡ, ಸುಶೀಲಾ ಎಸ್ ಹೆಗ್ಡೆ ಮೊದಲಾದವರು ನಡೆಸಿಕೊಟ್ಟರು.

See also  ಕಾರವಾರ: ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದು ಸಹ ಶ್ರೇಷ್ಠ ತ್ಯಾಗ -ಜಿಲ್ಲಾ ನ್ಯಾಯಾಧೀಶ

ಸ್ಥಾಪಕ ಸದಸ್ಯ‌ ಎಂ.ಜಿ ಶೆಟ್ಟಿ, ಸಮಿತಿ ಕಾರ್ಯಾಧ್ಯಕ್ಷ ಹೇಮಂತ ರಾವ್, ಕೋಶಾಧಿಕಾರಿ ಸುರೇಂದ್ರ ಎಸ್, ಅ ಆತಿಥೇಯ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮ, ಕಾರ್ಯದರ್ಶಿ ತುಕಾರಾಮ‌ ಬಿ, ಕೋಶಾಧಿಕಾರಿ ಪಂಚಾಕ್ಷರಪ್ಪ, ಸಮ್ಮೇಳನ‌ ಸಮಿತಿ ಕಾರ್ಯದರ್ಶಿಗಳಾದ ಧತ್ತಾತ್ರೇಯ ಜಿ ಮತ್ತು ಅನಂತಕೃಷ್ಣ, ಪ್ರಾಂತ್ಯದ ಇತರ 7 ಕ್ಲಬ್ಬುಗಳಾದ ಆಲಂಗಾರು, ಬಪ್ಪನಾಡು ಇನ್ಸ್ಪಯರ್, ಗುರುಪುರ ಕೈಕಂಬ, ಮುಚ್ಚೂರು ನೀರುಡೆ, ಮೂಡಬಿದ್ರೆ, ಸುಲ್ಕೇರಿ, ವೇಣೂರು ಕ್ಲಬ್ಬುಗಳ ಅಧ್ಯಕ್ಷರುಗಳು, ಎರಡು ವಲಯಗಳ ಅಧ್ಯಕ್ಷರುಗಳು ಮತ್ತು ಪ್ರಾಂತ್ಯದ ಇತರ 11 ಮಂದಿ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀತ್‌ ಶೆಟ್ಟಿ, ದ್ವಿತೀಯ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ, ಮಲ್ಟಿಪಲ್ ಡಿಸ್ಟ್ರಿಕ್ಟ್ ಗವರ್ನರ್ ವಸಂತ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಅಶ್ರಫ್ ಆಲಿಕುಂಞಿ ಮತ್ತು ಶುಭಾಷಿಣಿ ಕಾರ್ಯಕ್ರಮ ನಿರ್ವಹಿಸಿದರು. ಸೀತಾಲಕ್ಷ್ಮೀ‌ ದಿನೇಶ್ ಪ್ರಾರ್ಥನೆ ಹಾಡಿದರು. ಸಮ್ಮೇಳನ‌ ಸಮಿತಿ ಪ್ರಧಾನ‌ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು.

3 ಮಂದಿ ಸಾಧಕರಿಗೆ ಸನ್ಮಾನ; ಗೌರವಾರ್ಪಣೆ;
ಸಮ್ಮೇಳನದಲ್ಲಿ ಮೂರು ಮಂದಿ ಅಪೂರ್ವ ಸಾಧಕರನ್ನು ಸನ್ಮಾನಿಸಲಾಯಿತು. ರೊನಾಲ್ಡ್ ಸಿಲ್ವನ್ ಡಿಸೋಜಾ (ವ್ಯವಹಾರ ಕ್ಷೇತ್ರ), ಅರುವ ಕೊರಗಪ್ಪ ಶೆಟ್ಟಿ (ಕಲಾ ಕ್ಷೇತ್ರ) ಮತ್ತು ಕೆ‌ ವಿನಾಯಕ ರಾವ್ (ಸಮಾಜ ಸೇವಾ ಕ್ಷೇತ್ರ) ಇವರು ಗಣ್ಯರಿಂದ ಸನ್ಮಾನ ಸ್ವೀಕರಿಸಿದರು. ವಿನಾಯಕ ರಾವ್ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ‌ಸಮ್ಮೇಳನ ಸಮಿತಿಗೆ ಪ್ರಶಂಶನಾ ಪತ್ರ ನೀಡಲಾಯಿತು. ವಿವಿಧ ಸಮಿತಿಯ‌ ಸಂಚಾಲಕರುಗಳನ್ನು ಗೌರವಿಸಲಾಯಿತು. ಆರಂಭದಲ್ಲಿ ಎಲ್ಲಾ 8 ಕ್ಲಬ್ಬುಗಳು ಬ್ಯಾನರ್ ಪದರ್ಶನ, ವಿನ್ಸೆಂಟ್ ಟಿ‌ ಡಿಸೋಜಾ ಸಂಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು