News Kannada
Tuesday, February 07 2023

ಮಂಗಳೂರು

ಬೆಳ್ತಂಗಡಿ: ಯಕ್ಷಗಾನ ಬಯಲಾಟಕ್ಕೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣ, ಸುಖಾಂತ್ಯ

Janaspandana Sabha at Keravadi, lays foundation stone for works worth Rs 2 crore
Photo Credit : Pixabay

ಬೆಳ್ತಂಗಡಿ: ಮರೋಡಿಯಲ್ಲಿ ನಡೆದ ಶ್ರೀ ಆದಿ ಧೂಮಾವತಿ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣವು ಭಾನುವಾರ ಸುಖಾಂತ್ಯಗೊಂಡಿದೆ.

ಶುಕ್ರವಾರ ರಾತ್ರಿ ಬ್ಯಾನರನ್ನು ಯಾರೋ ಹರಿದು ಹಾಕಿದ್ದು, ಕೆಲವು ಬ್ಯಾನರ್ ನ್ನು ಕೊಂಡುಹೋಗಿರುತ್ತಾರೆ. ಇದೊಂದು ಯಕ್ಷಗಾನ ವಿರೋಧಿ ಕಿಡಿಗೇಡಿಗಳ ಕೃತ್ಯ ೆಂದು ಮನನೊಂದ ಭಕ್ತರು ಹಾಗೂ ಯಕ್ಷಗಾನ ಆಯೋಜಕರು ಗೆಜ್ಜೆಗಿರಿ ಕ್ಷೇತ್ರದ ಹಾಗೂ ಪೊಸರಡ್ಕ ಕ್ಷೇತ್ರದ ದೈವಗಳ ಮೊರೆ ಹೋಗಿ ತಪ್ಪು ಮಾಡಿದವರು ಯಾರೇ ಆಗಲಿ, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳುವಂತಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದರು.

ಪ್ರಾರ್ಥನೆ ಸಲ್ಲಿಸಿದ 24 ಗಂಟೆಯ ಒಳಗೆ ಮರೋಡಿಯ 3 ಮಕ್ಕಳು ತಾವು ಈ ಕೆಲಸ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದು, ಮಕ್ಕಳು ಮಾಡಿದ ಕೃತ್ಯವನ್ನು ಮನ್ನಿಸಬೇಕೆಂದು ಪೋಷಕರು ಕೇಳಿಕೊಂಡ ಹಿನ್ನೆಲೆಯಲ್ಲಿ ಈ ವಿಷಯವನ್ನು ಇಲ್ಲಿಗೆ ಮುಕ್ತಾಯ ಗೊಳಿಸುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿರುತ್ತಾರೆ.

ತಪ್ಪಿತಸ್ಥರು 24 ಗಂಟೆಯ ಒಳಗೆ ತಮ್ಮ ತಪ್ಪನ್ನು ಒಪ್ಪಿಕೊಂಡದ್ದರಿಂದ ಇದು ಗೆಜ್ಜೆಗಿರಿ ಕ್ಷೇತ್ರದ ಮಹಿಮೆ ಮತ್ತು ಪೊಸರಡ್ಕ ಕ್ಷೇತ್ರದ ದೈವಗಳ ಕಾರ್ಣಿಕ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

See also  ಉಪ್ಪಿನಂಗಡಿ : ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು