ಬೆಳ್ತಂಗಡಿ: ಯುವ ವಕೀಲ ಕುಲದೀಪ್ ಶೆಟ್ಟಿ ಯವರ ಮೇಲೆ ಪುಂಜಾಲಕಟ್ಟೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ಬೆಳ್ತಂಗಡಿ ಯುವ ವಕೀಲರ ವೇದಿಕೆಯಿಂದ ವಕೀಲರ ಭವನದ ಮುಂಭಾಗದಲ್ಲಿ ಯುವ ವಕೀಲರ ವೇದಿಕೆ ವತಿಯಿಂದ ದೌರ್ಜನ್ಯಕ್ಕೊಳಗಾದ ವಕೀಲರ ಪರವಾಗಿ ಅವರಿಗೆ ನೈತಿಕ ಬೆಂಬಲವನ್ನು ಸೂಚಿಸಲಾಯಿತು.
ಈ ಸಂಧರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್, ಎಂ ಮತ್ತು ಕಾರ್ಯದರ್ಶಿ ನವೀನ್ ಬಿ. ಕೆ, ಪದಾಧಿಕಾರಿಗಳು, ಯುವ ವಕೀಲರು, ಹಿರಿಯ ವಕೀಲರಾದ ಶಿವಕುಮಾರ್, ರಾಧಾಕೃಷ್ಣ, ಹರಿಪ್ರಕಾಶ್, ಮತ್ತು ಇತರರು ಇದ್ದರು.