ಮಂಗಳೂರು : ಖ್ಯಾತ ಸಮಾಜ ಸೇವಕ, ದಿ. ನಾರಾಯಣ ಕರ್ಕೇರ ಸ್ಮರಣಾರ್ಥ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವರಾತ ಯಕ್ಷಗಾನ ಮಂಡಳಿ ಇವರಿಂದ ಡಿ. 3 ರಂದು ರಾತ್ರಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ಶ್ರೀ ಭಗವತೀ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಸುದೀರ್ಘ ಕಾಲದಿಂದ ಧಾರ್ಮಿಕ ಸೇವಾ ನಿರತರಾಗಿರುವ ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಮಾಡೂರು ಶ್ರೀ ಪಾಡಂಗರ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕರಾದ ನಾರಾಯಣ ಕಾರ್ನವರ್ ಮತ್ತು ಮಂಗಳಾದೇವಿ ಅಯ್ಯಪ್ಪ ಭಕ್ತವೃಂದದ ಅಯ್ಯಪ್ಪ ಮಾಲಾಧಾರಿ ಬಿ. ವಿಶ್ವನಾಥ ಶೆಟ್ಟಿ ಯವರನ್ನು ಕಟೀಲು ಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕರಾದ ವೇದಮೂರ್ತಿ ಲಕ್ಷೀನಾರಾಯಣ ಆಸ್ರಣ್ಣರು, ಮಂಗಳಾದೇವಿ ದೇವಸ್ಥಾನದ ಮೊಕ್ತೇಸರರಾದ ಪಿ. ರಮಾನಾಥ ಹೆಗ್ಡೆ ಇವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿ. ಗಿರಿಜಾ ನಾರಾಯಣ ಕರ್ಕೇರ, ಶ್ರೀಮತಿ ಮತ್ತು ಶ್ರೀ ಅಂಬಿಕಾ ಅಶೋಕ್ ಕುಮಾರ್, ಸರಳಾ ಮತ್ತು ನಾಗೇಶ್ ಸುವರ್ಣ, ಮುಂಬಯಿಯ ಉದ್ಯಮಿ ಕುಮಾರ್ ಎನ್. ಬಂಗೇರ ಮತ್ತು ವಿಶ್ವಜಿತ್ ಕುಮಾರ್ ಬಂಗೇರ ಉಪಸ್ಥಿತರಿದ್ದು ಸನ್ಮಾನ ಕಾರ್ಯವನ್ನು ನೆರವೇರಿಸಿದರು. ಅಲ್ಲದೆ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷರಾದ ಗಣೇಶ್ ಕುಂಟಲ್ಪಾಡಿ ಸೇರಿ ಸ್ಥಳೀಯ ಕೆಲವು ಗಣ್ಯರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಗೌರವಿಸಿದರು.
ವರದಿ : ಈಶ್ವರ ಎಂ. ಐಲ್