News Kannada
Thursday, February 02 2023

ಮಂಗಳೂರು

ಮಂಗಳೂರು: ಜ.15ರಂದು ಸಾಧಕರಿಗೆ ಪ್ರತಿಷ್ಠಿತ ‘ರಚನಾ ಪ್ರಶಸ್ತಿ’ ಪ್ರದಾನ

Mangaluru, Jan 15: The prestigious 'Rachana Puraskaram' will be presented to the achievers on January 15.
Photo Credit : News Kannada

ಮಂಗಳೂರು: 1998ರಲ್ಲಿ ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯು ತನ್ನ ಮೂಲ ಆಶಯವಾದ ಕಥೊಲಿಕ್‌ ಯುವ ಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದಿದೆ.

ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಹಲವು ಯುವ ಜನರಿಗೆ ತರಬೇತಿಯನ್ನು ನೀಡಲಾಗಿದೆ.

ಕ್ರೈಸ್ತಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು, ಅನಿವಾಸಿ ಭಾರತೀಯರು ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರತಿಷ್ಠಿತ ರಚನಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 25 ಜ್ಯೂರಿ ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸಿ ಈ ಕೆಳಗಿನ ವ್ಯಕ್ತಿಗಳನ್ನು 2023ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ:

ರಚನಾ ಕೃಷಿಕ – ಲಿಯೋಫೆರ್ನಾಂಡಿಸ್
ರಚನಾಉದ್ಯಮಿ –  ಜೆರಿ ವಿನ್ಸೆಂಟ್‌ಡಾಯಸ್
ರಚನಾ ವೃತ್ತಿಪರ– ಸಿ. ಡಾ. ಗ್ಲ್ಯಾಡಿಸ್ ಮಿನೇಜಸ್
ರಚನಾ ಅನಿವಾಸಿ ಉದ್ಯಮಿ –  ಮೈಕಲ್‌ಡಿಸೋಜಾ
ರಚನಾ ಮಹಿಳಾಸಾಧಕಿ–ಡಾ. ಲವೀನಾ ಎಂ. ನೊರೊನ್ಹಾ

ಪ್ರಶಸ್ತಿ ಪ್ರದಾನ ಕರ‍್ಯಕ್ರಮವು 2023ರ ಜನವರಿ 15ರಂದು ಭಾನುವಾರ ಸಂಜೆ 6.00 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್‌ ಹವಾನಿಯಂತ್ರಿತ ಸಭಾಭವನದಲ್ಲಿ, ಮಂಗಳೂರಿನ ಬಿಷಪ್‌ ಅತೀ ಡಾ. ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.  ಸಂಜಯ್‌ಡಿಸೋಜ, ಸೀನಿಯರ್ ಎಕ್ಸಿಕ್ಯೂಟಿವ್‌ವೈಸ್ ಪ್ರೆಸಿಡೆಂಟ್, ಎಚ್‌ಎಫ್‌ಡಿಸಿ ಬ್ಯಾಂಕ್ -ಇವರು ಮುಖ್ಯ ಅತಿಥಿಯಾಗಿ ಆಗಮಿಸಲಿರುವರು.

ಪತ್ರಿಕಾಗೋಷ್ಠಿಯಲ್ಲಿ ವಿನ್ಸೆಂಟ್‌ಕುಟಿನ್ಹಾ–ಅಧ್ಯಕ್ಷರು, ರುಡೋಲ್ಫ್ರೊಡ್ರಿಗಸ್– ಸಂಚಾಲಕರು, ಲವೀನಾ ಮೊಂತೇರೊ – ಕಾರ್ಯದರ್ಶಿ, ಯುಲಾಲಿಯಾಡಿಸೋಜಾ–ಖಜಾಂಚಿ, ಲುವಿಸ್‌ಜೆ. ಪಿಂಟೊ–ಸಂಘಟಕರು ಹಾಜರಿದ್ದರು.

ಕೆನರಾಕ್ಲಬ್, ಮಂಗಳೂರು, ಡಿಸೆಂಬರ್8, 2023, ಮಧ್ಯಾಹ್ನ 12.30 ಗಂಟೆಗೆ ಪ್ರಶಸ್ತಿ ವಿಜೇತರ ಭಾವಚಿತ್ರ, ವಿವರ ಮತ್ತು ಪತ್ರಿಕಾ ಪ್ರಕಟಣೆಗಳನ್ನು ಇಮೇಯ್ ಮೂಲಕ ಕೂಡಾ ಕಳುಹಿಸಲಾಗಿದೆ.

ಕೃಷಿ ಕ್ಷೇತ್ರದ ಸಾಧಕ : ಲಿಯೊ ಫೆರ್ನಾಂಡಿಸ್, ಅಲ್ಲಿಪಾದೆ

ಬಂಟ್ವಾಳದ ಅಲ್ಲಿಪಾದೆಯ ಲಿಯೊ ಫೆರ್ನಾಂಡಿಸ್ ಅಡಿಕೆ – ಕರಿಮೆಣಸು ಕೃಷಿ ಮತ್ತು ಹೈನುಗಾರಿಕೆಯ ಮೂಲಕ ಬದುಕನ್ನು
ಕಟ್ಟಿಕೊಂಡಿರುವುದಲ್ಲದೇ, ಆ್ಯಂಟನಿ ಟ್ರೇಡರ್ಸ್ ಸಂಸ್ಥೆಯ ಮೂಲಕ ಊರಿನ ಅಡಿಕೆ ಬೆಳೆಗಾರರಿಂದ ಉತ್ತಮ ಬೆಲೆಗೆ ಅಡಿಕೆ ಖರೀದಿಸಿ, ಬೆಳೆಗಾರರು ಮತ್ತು ವ್ಯಾಪಾರಿಗಳ ನಡುವೆ ಕೊಂಡಿಯಾಗಿದ್ದಾರೆ. ಫೆರ್ನಾಂಡಿಸ್ ಕೆಟರಿಂಗ್ ಎಂಬ ಸಂಸ್ಥೆಯ ಮೂಲಕ ಊಟೋಪಚಾರ ಸೇವಾಉದ್ಯಮವನ್ನೂ ನಡೆಸುತ್ತಿದ್ದಾರೆ. ತೋಟ ಮತ್ತು ಸಂಸ್ಥೆಗಳಲ್ಲಿ ನೂರಾರು ಜನರಿಗೆ ಉದ್ದೋಗಾವಕಾಶ ಕೊಟ್ಟು ಗೌರವಯುತ ಜೀವನೋಪಾಯ ಕಲ್ಪಿಸಿದ್ದಾರೆ. 20 ಎಕ್ರೆ ತೋಟದಲ್ಲಿ 15000 ದಷ್ಟು ಅಡಿಕೆಮರಗಳು, 1000 ದಷ್ಟು ತೆಂಗಿನ ಮರಗಳಿದ್ದು, ವಾರ್ಷಿಕ 350 ಕ್ವಿಂಟಾಲ್ ಅಡಿಕೆ ಮತ್ತು 25000 ತೆಂಗಿನ ಫಸಲು ಬೆಳೆಯುತ್ತಾರೆ. ಗೀರ್, ಜರ್ಸಿ, ಎಚ್.ಎಫ್ ಹೀಗೆ 100 ರಷ್ಟು ಹಸು – ಕರುಗಳಿದ್ದು ಪ್ರತಿದಿನ ಸುಮಾರು 600 ಲೀಟರ್ ಹಾಲು ಸರಬರಾಜು ಮಾಡುತ್ತಾರೆ. ಜೊತೆಗೆ ಕಂಬಳದ ಕೋಣಗಳನ್ನು ಸಾಕುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ಸರಪಾಡಿ ಮತ್ತು ಅಲ್ಲಿಪಾದೆ ಹಾಲು ಉತ್ಪಾದಕರ ಸಂಘಗಳಿಗೆ 2021 – 22 ರಲ್ಲಿ ಅತೀ ಹೆಚ್ಚು ಹಾಲು ಪೂರೈಸಿದ ದಾಖಲೆಯಿದ್ದು, ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಬಹುಮಾನ
ಪಡೆದಿರುತ್ತಾರೆ.

ಉದ್ಯಮ ಕ್ಷೇತ್ರದ ಸಾಧಕ : ಡಾ| ಜೆರಿ ವಿನ್ಸೆಂಟ್ ಡಾಯಸ್, ಉಡುಪಿ

ಉಡುಪಿ ಸಂತೆಕಟ್ಟೆಯ ಡಾ| ಜೆರಿ ವಿನ್ಸೆಂಟ್ ಡಾಯಸ್, ಉಡುಪಿ ಜಿಲ್ಲೆಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ‘ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್’ ಇದರ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿದ್ದು, ಪ್ರಸ್ತುತ ಕ್ರೆಡಾಯ್, ಉಡುಪಿಯ ಅಧ್ಯಕ್ಷರಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದ ಹೊರತಾಗಿ ಸಿನೆಮಾ ನಿರ್ಮಾಣ ಮತ್ತು ಹೋಟೆಲ್ ಉದ್ಯಮದಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1995 ರಿಂದ 2022 ವರೆಗೆ, ಉಡುಪಿ ಮತು ಮಣಿಪಾಲದಲ್ಲಿ, 4000 ವಸತಿ ಮತ್ತು 250 ವ್ಯಾಪಾರಿ ಮಳಿಗೆಗಳನ್ನೊಳಗೊಂಡ ಸುಮಾರು 50 ಸಮುಚ್ಚಯಗಳನ್ನು ನಿರ್ಮಿಸಿದ್ದು, ಸ್ಟಾರ್ ದರ್ಜೆಯ ಐಷಾರಾಮಿ ಹೋಟೆಲ್ ಇರುವ, ಉಡುಪಿಯ ಪ್ರಪ್ರಥಮ ಮತ್ತು ಅತೀ ದೊಡ್ಡ ಮಾಲ್ ಮಾಂಡವಿ ಟೈಮ್ಸ್ ಸ್ಕ್ವೇರ್ ಕಟ್ಟಿದ ಹೆಗ್ಗಳಿಕೆ ಡಾ| ಡಾಯಸ್ ಅವರಿಗೆ ಸಲ್ಲುತ್ತದೆ. 4 ಮಲ್ಟಿಫ್ಲೆಕ್ಸ್ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಕೈಗಾರಿಕೋದ್ಯಮಿಯೂ ಅಗಿರುವ ಇವರ ಜೆ. ಜೆ. ಇಂಡಸ್ಟ್ರೀಸ್ ನಲ್ಲಿ ಸೊಲಿಡ್ ಬ್ಲೊಕ್ ತಯಾರಾಗುತ್ತಿವೆ. ಜೆ.ಜೆ. ಸಿನೆ ನಿರ್ಮಾಣ ಸಂಸ್ಥೆಯ ಮೂಲಕ ‘ಮಹಾನದಿ’ ಮತ್ತು ‘ಡಿ.ಕೆ.’ ಎಂಬ ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

See also  ಮಂಗಳೂರು : ಸಮಾಜದಲ್ಲಿ ಅಶಾಂತಿ ಮತ್ತು ದ್ವೇಷ ಸೃಷ್ಟಿಸಿದ್ರೆ ಕ್ರಮ ಆಗಬೇಕು- ಯು.ಟಿ.ಖಾದರ್

ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಉಡುಪಿಯಲ್ಲಿ ಲಯನ್ಸ್ ಕ್ಲಬ್ ಹಾಗೂ ಇತರ ಸಮಾಜಸೇವಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ನಿರ್ಮಿಸಿದ ಮಾಂಡವಿ ರಾಯಲ್ ಪ್ರಿನ್ಸ್ ವಸತಿ ಸಂಕೀರ್ಣಕ್ಕೆ ಅತ್ಯುತ್ತಮ ವಸತಿ ಸಂಕೀರ್ಣ ಪ್ರಶಸ್ತಿ ಲಭಿಸಿದೆ. ಇವರ ವೃತ್ತಿ ಕೌಶಲ್ಯಕ್ಕೆ ಕ್ರೆಡಾಯ್ ಕೇರ್ ಮತ್ತು ಸಮಾಜಸೇವೆಗೆ ಉಡುಪಿಯ ಅದಮಾರು ಮಠ, ಮಂಗಳೂರಿನ ಬಂಟರ ಸಂಗಮ, ಬ್ರಾಹೇಯ್ನ್ನ ಬಿಲ್ಲವರ ಸಂಘ – ಹೀಗೆ ಹಲವಾರು ಪ್ರಶಸ್ತಿ – ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಬೆಂಗಳೂರಿನ ನ್ಯಾಶನಲ್ ಇನ್ಸಿಟಿಟ್ಯೂಟ್ ಒಫ್ ಸೋಶಿಯಲ್ ಇಕೊನೊಮಿಕ್ ರಿಫೊರ್ಮ್ಸ್ (ರಿ) ಇವರು ರಾಷ್ಟ್ರೀಯ ಸಮಾಜ ರತ್ನ ಪುರಸ್ಕಾರ ನೀಡಿರುತ್ತಾರೆ. ಇವರ ಸಮಾಜಮುಖಿ ಚಿಂತನೆಗೆ ಅಕಾಡೆಮಿ ಒಫ್ ಗ್ಲೊಬಲ್ ಪೀಸ್ ಇವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದ್ದಾರೆ.

ವೃತ್ತಿಪರ ಕ್ಷೇತ್ರದ ಸಾಧಕಿ : ಸಿ| ಡಾ| ಗ್ಲ್ಯಾಡಿಸ್ ಮಿನೇಜಸ್, ಬೆಳ್ಮಣ್

 

ವೃತ್ತಿಯಲ್ಲಿ ಸ್ತ್ರೀ ಮತ್ತು ಪ್ರಸೂತಿ ತಜ್ಞೆಯಾಗಿರುವ, ಮೂಲತಃ ಕಾರ್ಕಳ ತಾಲೂಕಿನ ಬೆಳ್ಮಣ್‌ನ ಸಿ| ಡಾ| ಗ್ಲ್ಯಾಡಿಸ್ ಮಿನೇಜಸ್ ಇವರಿಗೆ ಸತತ ಮೂರು ದಶಕಗಳ ಕಾಲ ತೀರಾ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಸಲ್ಲುತ್ತದೆ. ಬೆಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯ ಸೈಂಟ್ ಜೋನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಮ್.ಬಿ.ಬಿ.ಎಸ್ ಮತ್ತು ಡಿ.ಜಿ.ಒ ಪದವಿ ಪೂರೈಸಿದ ಸಿ| ಡಾ| ಗ್ಲ್ಯಾಡಿಸ್ ಆಂದ್ರಪ್ರದೇಶದ ವಿಜಯಮೇರಿ ಆಸ್ಪತ್ರೆಯಿಂದ ಆರಂಭಿಸಿ, ಉತ್ತರ ಕನ್ನಡದ ಮುಂಡಗೋಡ್, ಭಟ್ಕಳ, ರಾಮನಗರ – ಹೀಗೆ ಕರ್ನಾಟಕ ತೀರಾ ಹಿಂದುಳಿದ ಗ್ರಾಮೀಣ ಭಾಗಗಳಲ್ಲಿ, ಸಮಾಜದ ಅಶಕ್ತ ವರ್ಗದವರಿಗೆ ತಮ್ಮ ಸೇವೆಯನ್ನು ನೀಡುತ್ತಾ ಬಂದಿರುತ್ತಾರೆ. ಲಂಬಾಣಿ, ಗೊಲ್ಲ, ಗೌರಿ, ಸಿದ್ದಿ ಮತ್ತು ಟಿಬೇಟ್ ಸಮುದಾಯಗಳನ್ನು ತಲುಪಿದ್ದಾರೆ. ಕಳೆದ ಮೂರು ದಶಕಗಳಿಂದ ದಿನಕ್ಕೆ ಸರಾಸರಿ 150 ರೋಗಿಗಳನ್ನು ನೋಡುವ ಸಿ| ಡಾ| ಗ್ಲ್ಯಾಡಿಸ್, ವಾರಕ್ಕೆ 80 ರಷ್ಟು ಪ್ರಸೂತಿಗಳನ್ನು ಮಾಡಿರುತ್ತಾರೆ. ತಾವು ಸೇವೆ ನೀಡಿದಲ್ಲೆಲ್ಲ ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಜಾಗ್ರತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಮಕ್ಕಳಿಗೆ ದಾದಿ ತರಬೇತಿ ನೀಡಿ, ಇಂದು ಕರ್ನಾಟಕದ ಹಳ್ಳಿಗಳಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ಪ್ರಸೂತಿ ದಾದಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಹೊರತಾಗಿ ಸುಮಾರು 200ಕ್ಕೂ ಮಿಕ್ಕಿ ಮಹಿಳೆಯರಿಗೆ ಸಮುದಾಯ ಆರೋಗ್ಯ ಕಾರ್ಯಕರ್ತರನ್ನಾಗಿ ತರಬೇತು ಮಾಡಿ, ಜೀವನೋಪಾಯವನ್ನು ಕಲ್ಪಿಸಿದ್ದಾರೆ. ಸಿ| ಡಾ| ಗ್ಲ್ಯಾಡಿಸ್ ಇವರು ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ನೀಡಿದ ನಿಸ್ವಾರ್ಥ ವೃತ್ತಿಪರ ಸೇವೆಯನ್ನು ಪರಿಗಣಿಸಿ ಅವರಿಗೆ ಅಹಿಂದ ಸಂಘಟನೆಯ ಕರ್ನಾಟಕ ರತ್ನ, ವೈದ್ಯರ ದಿನದ ಸಿ.ವಿ. ರಾಮನ್ ಪ್ರಶಸ್ತಿ ಮತ್ತು ಜಿಲ್ಲಾ ರೈತ ಸಂಘಟನೆ ವತಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ ರಾಮನಗರ ಸೊಲ್ಲೂರಿನಲ್ಲಿ ಸಿ| ಡಾ| ಗ್ಲ್ಯಾಡಿಸ್ ಮಿನೇಜಸ್ ಸೇವೆ ಸಲ್ಲಿಸುತ್ತಿದ್ದಾರೆ.

See also  ಬಂಟ್ವಾಳ: ಏಕ ಬಳಕೆ ಪ್ಲಾಸ್ಟಿಕ್ ಜಾಗೃತಿ ಹಾಗೂ ದಂಡ ವಿಧಿಸುವ ಕಾರ್ಯ ಆರಂಭ

ಅನಿವಾಸಿ ಭಾರತೀಯ ಕ್ಷೇತ್ರದ ಸಾಧಕ : ಮೈಕಲ್ ಡಿ’ಸೊಜಾ, ಪುತ್ತೂರು – ಅಬುದಾಬಿ

ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಮೈಕಲ್ ಡಿಸೊಜಾ, ತಮ್ಮ ತಂದೆಯಿಂದ ಪ್ರೇರೇಪಿತರಾಗಿ, ಪೂತ್ತೂರಿನಲ್ಲಿ ಸೋಜಾ ಮೆಟಲ್ ಮಾರ್ಟ್ ಸಂಸ್ಥೆಯಿಂದ ಉದ್ಯಮ ಆರಂಭಿಸಿ, ಮಂಗಳೂರಿನಲ್ಲಿ ಸೋಜಾ ಇಲೆಕ್ಟ್ರೋನಿಕ್ಸ್ ಎಂಬ ಸಂಸ್ಥೆಗೆ ವಿಸ್ತರಿಸಿ ಅಲ್ಲಿಂದ ದುಬಾಯ್‌ಗೆ ಪ್ರಯಾಣ ಬೆಳೆಸಿ ಪ್ರಸ್ತುತ ಅಬುದಾಬಿಯಲ್ಲಿ ಉದ್ಯಮಿಯಾಗಿದ್ದಾರೆ. ಎಚ್.ಎ.ಎಸ್ ಹಾಸ್ಪಿಟಾಲಿಟಿ ಎಂಬ ಉದ್ಯಮ ಸಂಸ್ಥೆ ಕಟ್ಟಿ ದುಬಾಯಾದ್ಯಂತ ಡ್ಯೂನ್ಸ್ ಮತ್ತು ಐವರಿ ಗ್ರಾಂಡ್ ಎಂಬ ಹೆಸರಿನ ಹೋಟೆಲ್ ಅಪಾರ್ಟ್ಮೆಂಟ್‌ಗಳನ್ನು ಹೊಂದಿದ್ದಾರೆ. ಅವರ ಸಂಸ್ಥೆಗಳಲ್ಲಿ ಸಾವಿರಾರು ಮಂದಿಗೆ ಜೀವನೋಪಾಯ ದೊರೆಯುತಿದ್ದು, ಮಂಗಳೂರು ಧರ್ಮಕ್ಷೇತ್ರದಲ್ಲಿ ಸಿ.ಒ.ಡಿ.ಪಿ. ಸಂಸ್ಥೆಯ ಮೂಲಕ 25 ಕೋಟಿ ರುಪಾಯಿಯ ಎಡುಕೇರ್ ವಿದ್ಯಾನಿಧಿಯನ್ನು ಸ್ಥಾಪಿಸಲಾಗಿದ್ದು, 2013 ರಿಂದ ಈ ತನಕ ಸುಮಾರು 3500 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಸಮಾಜದ ಅಶಕ್ತ ವರ್ಗದವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ 10 ಕೋಟಿ ರುಪಾಯಿ ನಿಧಿ ಸ್ಥಾಪಿಸಿ ಸ್ವ – ಸಹಾಯ ಗುಂಪುಗಳಿಗೆ ನೀಡಲಾಗಿದೆ. ಸುಮಾರು 10,000 ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿವೆ. ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐಎಎಸ್, ಐಪಿಎಸ್ ಮತ್ತಿತರ ಅಧಿಕಾರಿಗಳಾಗಬೇಕೆಂಬ ಉದ್ದೇಶದಿಂದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. ಸಾಹಿತ್ಯ, ಕಲೆಗೆ ಸದಾ ಸದಾ ಪ್ರೋತ್ಸಾಹ ನೀಡುವ ಶ್ರೀಯುತರು, ಬಡಜನರ ವಸತಿಗೆ. ಶಿಕ್ಷಣ ಸಂಸ್ಥೆಗಳಿಗೆ, ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು – ನೆರವಿನ ಹಸ್ತ ನೀಡುತ್ತಾ ಬಂದಿದ್ದು, ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂರ್ತ್ಯಗಳ ಧರ್ಮಕೇಂದ್ರಗಳಿಗೆ ಬೃಹತ್ ಮೊತ್ತದ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ. ಸ್ವ ಉದ್ಯಮ ಸ್ಥಾಪಿಸಲು ಬಯಸುವ ಸಮಾಜ ಭಾಂದವರಿಗೂ ಶ್ರಿಯುತರು ಬಂಡವಾಳ ಸಹಾಯ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಕುಟುಂಬ ಸಮೇತ ಅಬುದಾಬಿಯಲ್ಲಿ ವಾಸವಾಗಿದ್ದಾರೆ.

ಮಹಿಳಾ ಸಾಧಕಿ : ಡಾ| ಲವೀನಾ ಎಂ. ನೊರೋನ್ಹಾ

ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಮತ್ತು ಪಿ.ಎಚ್.ಡಿ. ಪದವಿಯನ್ನು ಪಡೆದಿರುವ ಮೂಲತಃ ಮಂಗಳೂರು ಕುಲಶೇಖರ ನಿವಾಸಿಯಾಗಿರುವ ಡಾ| ಲವೀನಾ ಎಂ. ನೋರೋನ್ಹಾ ಆವೆ ಮರಿಯಾ ಪ್ಯಾಲೇಟಿವ್ ಕೆರ್ ಇದರ ನಿರ್ದೇಶಕಿಯಾಗಿದ್ದಾರೆ. 15 ಹಾಸಿಗೆಗಳ ಈ ಕೇಂದ್ರದಲ್ಲಿ, ನುರಿತ ವೈದ್ಯರು, ದಾದಿಯರು ಮತ್ತು ಸೇವಾನಿರತರ ಸಹಾಯದಿಂದ ಡಾ| ಲವೀನಾ ಕ್ಯಾನ್ಸರ್, ಲಿವರ್, ಕಿಡ್ನಿ ಸಮಸ್ಯೆ, ಡಿಮೆನ್ಸಿಯಾ ಇವೇ ಮುಂತಾದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಆರೈಕೆ ಮಾಡುತ್ತಿದ್ದಾರೆ. ಈ ಸಂಸ್ಥೆಯು ಜಾತಿ ಮತ ಮತ್ತು ವರ್ಗ ಬೇಧಗಳಿಲ್ಲದೇ ಉಚಿತ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯಲ್ಲಿ ಎಂ.ಫಿಲ್, ಅಮೆರಿಕೆಯ ಇಲಿಯನೋಸ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಪದವಿ ಪಡೆದು, ವಿದೇಶದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕ ತಾಯ್ನಾಡಿಗೆ ಮರಳಿದ ಡಾ| ಲವೀನಾ ಪ್ರಸ್ತುತ ಇಂಡಿಯನ್ ಅಸೊಶಿಯೆಶನ್ ಒಫ್ ಪ್ಯಾಲೇಟಿವ್ ಕೇರ್ ಇದರ ಸದಸ್ಯರಾಗಿದ್ದು, ಅಮೇರಿಕದಲ್ಲಿ ಕ್ರೆಸ್ಟ್ ಇಂಟರ್‌ನ್ಯಾಶನಲ್ ಇದರ ಸ್ಥಾಪಕ ಅಧ್ಯಕ್ಶರಾಗಿಯೂ ಅವರು ಸೇವೆ ಸಲ್ಲಿಸ್ದಿದ್ದಾರೆ. ವಿದೇಶದಲ್ಲಿ ಮಾನಸಿಕ ಆರೋಗ್ಯ, ಒತ್ತಡ ನಿರ್ವಹಣೆ, ಸಿಬ್ಬಂದಿ ಸಹಾಯ ಇವೇ ಮುಂತಾದ ಕ್ಷೇತ್ರಗಳಲ್ಲಿ ಕ್ಲಿನಿಕಲ್ ಅನುಭವವಿರುವ ಡಾ| ಲವೀನಾ ಈ ವಿಷಯಗಳ ಮೆಲೆ ಹಲವಾರು ಸಂಶೋಧನಾತ್ಮಕ ಪ್ರಬಂದ ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು