ಮಂಗಳೂರು: ವಿಪಕ್ಷ ಉಪನಾಯಕ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು ಟಿ ಖಾದರ್ ಅವರ ಕಾರ್ ಬ್ರೇಕ್ ಫೇಲ್ ಆಗಿರುವ ಘಟನೆ ಶುಕ್ರವಾರ ನಡೆದಿದೆ .
ಬಂಟ್ವಾಳ ಬಿಸಿ ರೋಡ್ ಕಡೆಯಿಂದ ಮಂಗಳೂರಿಗೆ ಬರುವಾಗ ಘಟನೆ ಸಂಭವಿಸಿದೆ . ಪಡೀಲ್ ಬಲಿಯ ಕಣ್ಣೂರ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕಾರ್ ಬ್ರೆಕ್ ಫೇಲ್ ಆಗಿದ್ದು ಚಾಲಕ ಲಿಬ್ಜಿತ್ ತಕ್ಷಣ ಕಾರನನ್ನ ಯಶಸ್ವಿಯಾಗಿ ನಿಲ್ಲಿಸಿದ್ದಾರೆ .
ಬಲಿಕ ಬದಲಿಕಾರನಲ್ಲಿ ಯುಟಿ ಖಾದರ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಅದೃಷ್ಟವಾದ ಶಾಸಕರು ಹಾಗೂ ಕಾರನಲ್ಲಿದ್ದವರು ಏನು ಅಪಾಯವಾಗದೆ ಪಾರಾಗಿದ್ದಾರೆ.