ಮಂಗಳೂರು: ಮರುಬಳಕೆಗೊಳ್ಳದ ತ್ಯಾಜ್ಯಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿಅಮೇರಿಕ ಮೂಲದ ರಿ ಪರ್ಪಸ್ ಗ್ಲೋಬಲ್ ಸಂಸ್ಥೆಯು ಮಂಗಳೂರಿನ ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ. ಸಂಸ್ಥೆಯ ಸಹಭಾಗಿತ್ವದೊಂದಿಗೆ ಮಹತ್ತರ ಯೋಜನೆಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ರಿ ಪರ್ಪಸ್ ಗ್ಲೋಬಲ್ ಸಂಸ್ಥೆಯ ಸದಸ್ಯರು ತ್ಯಾಜ್ಯ ನಿರ್ವಹಣೆಯ ಕುರಿತಂತೆ ಮಂಗಳ ರಿಸೋರ್ಸ್ ಮೆನೇಜಮೆಂಟ್ ಸಂಸ್ಥೆಗೆ ಮೂರುದಿನಗಳ ಅಧ್ಯಯನ ಭೇಟಿಯನ್ನು ನೀಡಿದರು.
ತ್ಯಾಜ್ಯ ನಿರ್ವಹಣೆಎಂಬುದು ಮಹಾನಗರಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಈ ದಿನಗಳಲ್ಲಿ, ಮಂಗಳಾ ರಿಸೋರ್ಸ್ ಮೆನೇಜಮೆಂಟ್ತನ್ನ ವಿನೂತನ ಯೋಜನೆಗಳ ಮೂಲಕ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತಿದ್ದೆ. ಈ ಯಶೋಗಾಥೆಯನ್ನು ಪರಿಗಣಿಸಿ ರಿ ಪರ್ಪಸ್ ಗ್ಲೋಬಲ್ ಸಂಸ್ಥೆಯು ಮರುಬಳಕೆಗೊಳ್ಳದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮಂಗಳ ನಿರ್ವಹಣಾ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದವನು ಮಾಡಿಕೊಂಡಿದೆ.
ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಮುನ್ನಡೆಸುತ್ತಿರುವ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಸಂಗ್ರಹವಾದ ಒಟ್ಟು ಒಣ ಕಸದಲ್ಲಿ ಶೇಕಡ50 ಪ್ರತಿಶತ ಮಲ್ಟಿಲೇಯರ್ ಪ್ಲಾಸ್ಟಿಕ್. ಈ ಪ್ಲಾಸ್ಟಿಕ್ ವೈಜ್ಞಾನಿಕವಾಗಿ ಮರುಬಳಕೆಗೊಳ್ಳದೆ ಡಂಪಿಂಗ್ಯಾರ್ಡ್ ಸೇರುತ್ತಿದೆ. ರಸ್ತೆ ನಿರ್ಮಾಣ ಕಾರ್ಯದಲ್ಲಿ ಮಲ್ಟಿಲೇಯರ್ ಪ್ಲಾಸ್ಟಿಕ್ ಬಳಸುವುದರ ಕುರಿತು ಸರ್ಕಾರದ ಆದೇಶಗಳಿದ್ದರು, ಅನುಷ್ಠಾನ ತರುವಲ್ಲಿಸಮಸ್ಯೆಗಳುಎದುರಾಗಿದೆ. ಮತ್ತೊಂದೆಡೆ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ವ್ಯಾಪಕವಾಗಿ ಶೇಖರಣೆಗೊಂಡ ಮಲ್ಟಿಲೇಯರ್ ಪ್ಲಾಸ್ಟಿಕ್ನ ನಿರ್ವಹಣೆ ಅಸಾಧ್ಯವಾಗಿದೆ.
ಸಮಸ್ಯೆಗೆ ಪರಿಹಾರವಾಗಿ, ಮಲ್ಟಿ ಲೇಯರ್ ಪ್ಲಾಸ್ಟಿಕ್ ಗಳನ್ನು ಸಿಮೆಂಟ್ ಕಾರ್ಖಾನೆಗಳಲ್ಲಿ ಪರ್ಯಾಯ ಇಂಧನವಾಗಿ ಉಪಯೋಗಿಸಬಹುದಾರಿಗೆ. ಆದರೆ ಇದಕ್ಕೆ ತಗಲುವ ಅತ್ಯಧಿಕ. ಮೌಲ್ಯರಹಿತ ಮಲ್ಟಿ ಲೇಯರ್ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸಿ, ವಿಂಗಡಿಸಿ, ಸಂಸ್ಕರಣೆ ಮಾಡಿ, ಸಾಗಾಟ ಮಾಡುವ ಈ ಕೆಲಸಕ್ಕೆ ತಗಲುವ ವೆಚ್ಚವನ್ನುಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಲಾಸ್ಟಿಕ್ ಕ್ರೆಡಿಟ್ ಎಕ್ಸ್ಚೇಂಜ್ ಮೂಲಕ ಸಹಾಯ ಧನವನ್ನು ನೀಡುವ ಕೆಲಸವನ್ನು ರಿ ಪರ್ಪಸ್ಗ್ಲೋಬಲ್ ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ರಿ ಪರ್ಪಸ್ಗ್ರೂಪ್ ಸಂಸ್ಥೆಯು ಮಂಗಳ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ. ಮುನ್ನಡೆಸುತ್ತಿರುವ ದೇಶದ ಮೊಟ್ಟ ಮೊದಲ ಗ್ರಾಮೀಣ ಮೆಟೀರಿಯಲ್ ರಿಕವರಿ ಫೆಸಿಲಿಟಿ ಮತ್ತು ನಿಟ್ಟೆ ವಿವಿಯಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಸಂದರ್ಶಿಸಿ ಅಧ್ಯಯನವನ್ನು ಕೈಗೊಂಡು, ಘಟಕ ಕಾರ್ಯ ನಿರ್ವಹಿಸುತ್ತಿರುವರೀತಿಯನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ ಮಂಗಳ ರಿಸೋರ್ಸ್ ಮೆನೇಜಮೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ದಿಲ್ ರಾಜ್ ಆಳ್ವ, ನಿರ್ದೇಶಕರಾದ ರಂಜನ್ ಬೆಳ್ಳರ್ಪಾಡಿ, ಸಚಿನ್ ಶೆಟ್ಟಿ ನಲ್ಲೂರು, ಅಮರ್ ಜನಕಾರೆ ಅಂತೆಯೇ ರಿ ಪರ್ಪಸ್ಗ್ಲೋಬಲ್ ನ ಪ್ರತಿನಿಧಿಗಳಾದ ಅಮಿಷಾಅಜಿತ್, ರಿಜ್ವಾನ್, ಮೇಘನ್, ಅಂಜಲಿ ಮತ್ತಿತರರು ಉಪಸ್ಥಿತರಿದ್ದರು.
93% ಅಂಕ: ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ. ಸಂಸ್ಥೆಯ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಯೋಜನೆಗಳನ್ನು ಅಧ್ಯಯನ ನಡೆಸಿದ ಅಮೇರಿಕ ಮೂಲದ ರಿ ಪರ್ಪಸ್ಗ್ಲೋಬಲ್, ‘ಪ್ರಾಜೆಕ್ಟ್ಅನ್ಮೋಲ್ಕಿನ್ನರ’ ಎಂಬ ವಿಶೇಷ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯ ಅಂತರ್ಗತ ಮಲ್ಟಿ ಲೇಯರ್ ಪ್ಲಾಸ್ಟಿಕ್ ಗಳ ನಿರ್ವಹಣೆಗಾಗಿ ಪ್ಲಾಸ್ಟಿಕ್ ಕ್ರೆಡಿಟ್ ಗಳನ್ನು ನೀಡುತ್ತಿದೆ. ರಿ ಪರ್ಪಸ್ಗ್ಲೋಬಲ್ ಇತ್ತೀಚೆಗೆ ನಡೆಸಿದ ಎಕ್ಸ್ಟರ್ನಲ್ ಆಡಿಟ್ ನಲ್ಲಿ, ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ. ಸಂಸ್ಥೆಯ ಸಮಗ್ರ ಯೋಜನೆಗಳಿಗೆ 93% ಅಂಕಗಳನ್ನು ನೀಡಿ ಪ್ರಮಾಣೀಕರಿಸಿದೆ.
“ನಮ್ಮ ಸಂಸ್ಥೆ ಮತ್ತು ರಿ ಪರ್ಪಸ್ ಗ್ಲೋಬಲ್ ಜೊತೆಗಿನ ಒಡಂಬಡಿಕೆ ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿಒಂದು ಮಹತ್ವದ ಮೈಲಿಗಲ್ಲು. ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಕ್ರೆಡಿಟ್ ಎಕ್ಸ್ಚೇಂಜ್ ಕ್ರಾಂತಿ ಮಾಡಲಿದೆ” ದಿಲ್ ರಾಜ್ ಆಳ್ವ, ಆಡಳಿತ ನಿರ್ದೇಶಕರು, ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ.