News Kannada
Saturday, January 28 2023

ಮಂಗಳೂರು

ಮಂಗಳೂರು: ‘ಕನ್ಸರ್ವೇಷನ್ ಲ್ಯಾಬೊರೇಟರಿ’ ಉದ್ಘಾಟಿಸಿದ ಟಿ.ವಿ.ಮೋಹನ್‌ದಾಸ್ ಪೈ

T.V. Mohandas Pai inaugurates 'Conservation Laboratory'
Photo Credit : News Kannada

ಮಂಗಳೂರು: ನಗರದ ಕೆನರಾ ಹೈಸ್ಕೂಲ್‌ನಲ್ಲಿ ಸ್ವಾತಂತ್ರ್ಯಾಪೂರ್ವದಲ್ಲಿ ಆರಂಭವಾಗಿದ್ದ ‘ ಕೆನರಾ ಮ್ಯೂಸಿಯಂ’ ಪುನಶ್ಚೇತನ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ನೂತನವಾಗಿ ಸ್ಥಾಪಿಸಲಾದ ‘ಕನ್ಸರ್ವೇಷನ್ ಲ್ಯಾಬೊರೇಟರಿ’ ಶನಿವಾರ ಉದ್ಘಾಟನೆಗೊಂಡಿತು.

ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಚೇರ್ ಮ್ಯಾನ್ ಟಿ.ವಿ.ಮೋಹನ್‌ದಾಸ್ ಪೈ ಅವರು ನೂತನ ಪ್ರಯೋಗಾಲಯ ಉದ್ಘಾಟಿಸಿದರು. ‘ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನವೇ ಕೆನರಾ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿದೆ. ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ದೇಶದ ಜನರಿಗೆ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸುವ ಆಶಯದಿಂದ ಶಾಲಾ ಕಾಲೇಜು ಆಗಿನ ಕಾಲದಲ್ಲಿ ಆರಂಭವಾಗಿದೆ. ಕೆನರಾ ಸಂಸ್ಥೆ ನಡೆದು ಬಂದ ಹೆಜ್ಜೆಯನ್ನು ಹಾಗೂ ಹಿಂದಿನ ಕಾಲದ ನೆನಪು-ವಸ್ತುಗಳನ್ನು ಮ್ಯೂಸಿಯಂನಲ್ಲಿ ಸಂರಕ್ಷಿಸುವ ಕಾರ್ಯ ಇಲ್ಲಿ ನಡೆಯುತ್ತಿರುವುದು ಶ್ಲಾಘನೀಯ’ ಎಂದರು.

ಜೀವಂತ ಚರಿತ್ರೆ ಅತೀ ಅಗತ್ಯ. ದೇಶದ ಅಮೂಲ್ಯ ವಸ್ತುಗಳನ್ನು ಮ್ಯೂಸಿಯಂನಲ್ಲಿ ಇಟ್ಟು ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಕೆನರಾ ಶಾಲೆಯ ಹುಟ್ಟು ಹಾಗೂ ನಡೆದುಬಂದ ಹೆಜ್ಜೆಗಳ ಕಥೆಗಳನ್ನು ಕೇಳಿ ವಿದ್ಯಾರ್ಥಿಗಳು ಪ್ರೇರೇಪಣೆ ಪಡೆಯುತ್ತಾರೆ ಎಂದರು.

ಪ್ರಮುಖರಾದ ರವೀಂದ್ರ ಪೈ, ಪ್ರದೀಪ್ ಜಿ.ಪೈ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ವಾಸುದೇವ ಕಾಮತ್, ಕಾರ್ಯದರ್ಶಿ ರಂಗನಾಥ್ ಭಟ್, ಉಪಾಧ್ಯಕ್ಷ ಪದ್ಮನಾಭ ಪೈ ಹಾಗೂ ಕೆನರಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

See also  ಬೆಳ್ತಂಗಡಿ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು