News Kannada
Tuesday, February 07 2023

ಮಂಗಳೂರು

ಬಂಟ್ವಾಳ: ಅನ್ಯಕೋಮಿನ ವಿದ್ಯಾರ್ಥಿಗಳ ಪ್ರೇಮ ಪ್ರಕರಣ, ಆಡಳಿತ ಮಂಡಳಿಯ ದಿಟ್ಟ ನಿರ್ಧಾರ

Janaspandana Sabha at Keravadi, lays foundation stone for works worth Rs 2 crore
Photo Credit : Pixabay

ಬಂಟ್ವಾಳ: ವಿಟ್ಲದ ಖಾಸಗೀ ಪದವಿಪೂರ್ವ ಕಾಲೇಜಿನ ಅನ್ಯಕೋಮಿನ ಯುವತಿ ಹಾಗೂ ಯುವಕನ ನಡುವಿನ ಪ್ರೇಮ ಪ್ರಕರಣ ವಿಚಾರದಲ್ಲಿ ಸಹಕರಿಸಿದ ಹಾಗೂ ವಿವಾದ ಮಾಡಲು ಹೋದ ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ನಡೆವೆ ಮಾತುಕತೆ ನಡೆದು ಮುನ್ನೆಚ್ಚರಿಕೆ ದೃಷ್ಟಿಯಿಂದ ಸುಮಾರು 18 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಲಾಗಿದೆ.

ಕೆಲವು ಸಮಯದಿಂದ ಅನ್ಯಕೋಮಿನ ಯುವತಿ ಹಾಗೂ ಯುವಕನ ನಡುವೆ ಪ್ರೇಮ ಪ್ರಕರಣವಿದ್ದು, ಗಮನಕ್ಕೆ ಬಂದ ಕಾಲೇಜು ಆಡಳಿತ ವರ್ಗ ಪೊಷಕರನ್ನು ಕರೆಸಿ ವಿಷಯವನ್ನು ತಿಳಿಸಿತ್ತು. ಈ ಬಳಿಕ ಕೆಲವು ಸಮಯ ಯಾವುದೇ ಗೊಂದಲವಿಲ್ಲದೆ ನಡೆಯುತ್ತಿದ್ದ ಕಾಲೇಜು, ವಾರ್ಷಿಕೋತ್ಸವ ಸಮಯ ಮತ್ತೆ ಪ್ರೇಮ ಪ್ರಕರಣ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಉಪನ್ಯಾಸಕರ ತಂಡ ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವ ಬಗ್ಗೆ ತಪಾಸಣೆಗೆ ಮುಂದಾಗಿದ್ದಾರೆ. ಈ ಸಂದರ್ಭ ಹಿಂದು ಯುವತಿಯ ಕೈಯಲ್ಲಿ ಪ್ರೇಮ ಪತ್ರ ಪತ್ತೆಯಾಗಿತ್ತು. ಈ ದಿನ ಮುಸ್ಲಿಂ ಯುವಕ ಕಾಲೇಜಿಗೆ ಬಂದಿರಲಿಲ್ಲ. ಯುವತಿಯ ಪೊಷಕರಲ್ಲಿ ಮಾತುಕತೆ ನಡೆಸಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಯುವತಿಯನ್ನು ಪರೀಕ್ಷೆಗೆ ಮಾತ್ರ ಆಗಮಿಸುವಂತೆ ಸೂಚನೆ ನೀಡಿದರು.

ಯುವಕ ತರಗತಿಗೆ ಹಾಜರಾಗುತ್ತಿದ್ದಂತೆ ಉಪನ್ಯಾಸಕರುಗಳಿಗೆ ಮಾಹಿತಿ ನೀಡದೆ ಕೆಲವು  ಯುವಕರು ಗುಂಪು ಕಟ್ಟಿಕೊಂಡು ಹೋಗಿ ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.  ಯುವಕ ಹಾಗೂ ಆತನಿಗೆ ಸಹಕಾರ ಮಾಡಿದ 6ಮಂದಿ  ಯುವಕ ಯುವತಿಯರನ್ನು ಹಾಗೂ ಗುಂಪು ಕಟ್ಟಿಕೊಂಡು ಪ್ರಶ್ನಿಸಲು ಹೋದ ಯುವಕರನ್ನು ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ದಿಟ್ಟ ನಿರ್ಧಾರಕ್ಕೆ ಪ್ರಶಂಸೆಗಳು ಕೇಳಿ ಬರುತ್ತಿದೆ.

See also  ಪತ್ರಿಕಾ ಭವನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು