ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ಏಕತಾ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎನ್ ದಿನೇಶ್ ಚೌಟರವರು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಎನ್ ರವಿ ಎಂ ಎನ್ ಅವರು ಮಾತನಾಡಿ ಶ್ರೀ ವಲ್ಲಭಭಾಯ್ ಪಟೇಲರು ಸುಮಾರು 80 ಹಳ್ಳಿಗಳ ಜನರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಚಳುವಳಿ ಹಮ್ಮಿಕೊಂಡಿದ್ದು ಇದರಿಂದ ಪ್ರೇರೇಪಿತರಾಗಿ ಗಾಂಧೀಜಿಯವರು ಇವರಿಗೆ ಸರ್ದಾರ್ ಎಂಬ ಬಿರುದನ್ನು ನೀಡಿದ್ದರು. ಹಾಗೇನೆ ಸುಮಾರು 557 ಸಂಸ್ಥಾನಗಳನ್ನು ಭಾರತದ ವಿಲೀನಗೊಳಿಸಿದ ಕಾರಣಕ್ಕಾಗಿ ಉಕ್ಕಿನ ಮನುಷ್ಯ ಬಿರುದನ್ನು ಕೂಡ ಗಾಂಧೀಜಿಯವರು ನೀಡಿದ್ದರು.
ಸರ್ದಾರ್ ವಲ್ಲಭಭಾಯ್ ಪಟೇಲರು ಧ್ಯೇಯಕ್ಕಾಗಿ ಬದುಕಿದ್ದ ಅಂಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು. ಹಿಂದಿ ವಿಭಾಗದ ಮುಖ್ಯಸ್ಥರಾದ ನಾಗರಾಜ್ ಹಾಗೂ ಡಾ. ಫ್ಲಾವಿಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಮಂತ ಹಾಗೂ ಅನನ್ಯ ಕಾರ್ಯಕ್ರಮ ನಿರ್ವಹಿಸಿದರು.