ಮಂಗಳೂರು: ನಗರದ ಸ್ವಸ್ತಿಕ ನ್ಯಾಶನಲ್ ಸ್ಕೂಲ್ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಮಂಗಳೂರಿನಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯ ಸಂಚಾಲಕ ಎಸ್.ಎಸ್.ನಾಯಕ್ ಮತ್ತು ಸ್ವಸ್ತಿಕ್ ನ್ಯಾಶನಲ್ ಸ್ಕೂಲ್ ನ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ “ಸ್ಟಾರ್ಟಪ್ ಮೈಂಡ್ ಸೆಟ್” ಶೀರ್ಷಿಕೆ ಅಡಿಯಲ್ಲಿ ಉದ್ಯಮಶೀಲತಾ ತರಬೇತಿ ಆಯೋಜಿಸುತ್ತಿದ್ದು, ಇತ್ತೀಚಿನ ಅವಿಷ್ಕಾರಗಳು, ಚಿಂತನೆಗಳು, ಮತ್ತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಇದು ವೇದಿಕೆಯನ್ನು ಒದಗಿಸುತ್ತದೆ ಎಂದರು.
ಡಿಸೆಂಬರ್ ೧೯ರಿಂದ ಡಿಸೆಂಬರ್ ೨೨ರವರೆಗೆ ನಡೆಯುವ ಕಾರ್ಯಾಗಾರದಲ್ಲಿ ಉದ್ಯಮಗಳಿಗೆ ದಾಖಲಾತಿ ಮಾಡಿಕೊಳ್ಳುವ ಕುರಿತಂತೆ ವಿವರ, ಸ್ಟಾರ್ಟ್ ಅಪ್ ಯೋಜನೆಯನ್ನು ಕಾರ್ಯಗತ ಮಾಡಲು ವ್ಯವಹಾರ ಯೋಜನೆಯನ್ನು ರೂಪಿಸುವ ವಿಧಾನ ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಗುವುದು ಎಂದೂ ಅವರು ವಿವರಿಸಿದರು. ಯು.ರಾಮರಾವ್, ಶ್ರೀಕಾಂತ ನಾಯಕ್, ಡಾ. ಮಾಲಿನಿ ಹೆಬ್ಬಾರ್ ಉಪಸ್ಥಿತರಿದ್ದರು.