ಮಂಗಳೂರು: ಸಂತ ಕ್ರಿಸ್ತಪೋರ್ ಎಸೋಸಿಯೇಶನ್ ವತಿಯಿಂದ ಎಸೋಸಿಯೇಶನ್ ಸಭಾಂಗಣದಲ್ಲಿ ನಿಲಯದ ನಿವಾಸಿಗಳು ಮತ್ತು ಎಸೋಸಿಯೇಶನ್ ಸದಸ್ಯರಿಗೆ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮ ನಡೆಯಿತು.
ಎಸೋಸಿಯೇಶನ ಗೌರವ ಅಧ್ಯಕ್ಷರಾದ ಸುಶೀಲ್ ನೊರೊನ್ಹಾ ಮಾತನಾಡಿ ಎಲ್ಲಾ ಧರ್ಮದ ಹಬ್ಬಗಳಿಗೆ ದಾರ್ಮಿಕ ಮಹತ್ವವಿದು ಅದರ ಧಾರ್ಮಿಕ ಅಚರಣೆ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮ ಹಮ್ಮಿಕೊಂಡಾಗ ಅದರ ಮಹತ್ವ ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ಆಗುತ್ತದೆ. ಆದರ ಜೊತೆಯಲ್ಲಿ ಸಾಂಸ್ಕೃತಿಕ ಮನೋರಂಜನೆ ಜತೆಗೂಡಿದಾಗ ಅದು ಅರ್ಥಪೂರ್ಣ ಆಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರುಜಾರಿಯೊ ಚರ್ಚ್ ನ ಪ್ರದಾನ ಧರ್ಮ ಗುರುಗಳಾದ ವಂದನೀಯ ಆಲ್ಪ್ರೆಡ್ ರವರು ಮಾತನಾಡಿ ಯೇಸು ಕ್ರಿಸ್ತರು ನಮಗೆ ಬೋಧಿಸಿದ ಪರರನ್ನು ತನ್ನ ಸಹೋದರ, ಸಹೋದರಿ ಯಂತೆ ಪ್ರೀತಿಸು, ಪರರಿಗೆ ಕಷ್ಟ ದಲ್ಲಿ ಸಹಕಾರ ನೀಡುವುದು. ಪರರು ತಪ್ಪು ಮಾಡಿದಾಗ ಅವರನ್ನು ಕ್ಷಮಿಸಿ ಉತ್ತಮ ಪ್ರಜೆಯಾಗಿ ಮಾಡುವುದು. ಕ್ರಿಸ್ಮಸ್ ಹಬ್ಬದ ಸಂದೇಶ ವಾಗಿದೆ ಎಂದು ಹೇಳಿದರು.
ಎಸೋಸಿಯೇಶನ್ ಅಧ್ಯಕ್ಷರಾದ ಪ್ರೊಫೆಸರ್ ಜಾನ್ ಡಿಸಿಲ್ವ ಮಾತನಾಡಿ ನಾವೆಲ್ಲರೂ ಬೇರೆ ಬೇರೆ ಧರ್ಮದವರು ಆಗಿದ್ದರೂ ನಮಗೆಲ್ಲರಿಗೂ ಮಿಗಿಲಾದ ಧರ್ಮ ಮಾನವ ಧರ್ಮ ಅದು ಇಡೀ ಜಗತ್ತಿನ ಜನರು ಹಾತೊರೆಯುವುದು ನಮಗೆ ಕಾಣುತ್ತದೆ. ಇದು ಈ ಹಬ್ಬದ ದಾರಿ ದೀಪವಾಗಲಿ ಎಂದು ಅಶಿಸಿದರು.ಜೋನ್ ಗೇಮ್ಸ್ ಸ್ವಾಗತಿಸಿ. ಸುನಿಲ್ ಲೋಬೊ ಧನ್ಯವಾದಗೈದರು. ವಿಲಿಯಂ ಡಿಸೋಜ ನಿರೂಪಿಸಿದರು. ವಿವಿಧ ಸಂಸ್ಕೃತಿಕ ಹಾಗೂ ಮನೋರಂಜನ ಕಾರ್ಯಕ್ರಮ ಏರ್ಪಡಿಸಲಾಗಿತು.