News Kannada
Monday, January 30 2023

ಮಂಗಳೂರು

ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ‘ಸ್ವಚ್ಛ-ಸುಂದರ ಮಂಗಳೂರು ಮಾದರಿ ಕಾರ್ಯಕ್ರಮ-ರವಿ ಕುಮಾರ್ ಎಂ.ಆರ್.

Ravi Kumar M.R. Ravi Kumar has launched 'Swachh-Sundara Mangalore Model Programme' to create awareness among the youth.
Photo Credit : News Kannada

ಮಂಗಳೂರು, ಡಿ.16: ಯುವ ಜನರಲ್ಲಿ ಸ್ವಚ್ಛತೆ ಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛ- ಸುಂದರ ಮಂಗಳೂರು ಅಭಿಯಾನ ಒಂದು ಮಾದರಿ ಕಾರ್ಯಕ್ರಮ ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.

ಅವರು ಇಂದು ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸ್ವಚ್ಛ ಸುಂದರ ಮಂಗಳೂರು ಅಭಿಯಾನಕ್ಕೆ ನಗರದ ರಥಬೀದಿ ಬಸ್ ತಂಗುದಾಣದಲ್ಲಿ ಚಾಲನೆ ನೀಡಿ ಮಾತನಾಡುತ್ತಿದ್ದರು. ಬೆಳೆಯುತ್ತಿರುವ ಮಂಗಳೂರು ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಇಲ್ಲಿನ ನಾಗರಿಕರಲ್ಲಿ ಸ್ವಚ್ಛತೆ ಯ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿ ಗಳು, ಯುವಜನರು ಸಂಘ ಸಂಸ್ಥೆ ಗಳ ಪ್ರತಿನಿಧಿಗಳು ತಮ್ಮನ್ನು ಸ್ವಯಂ ಸ್ಪೂರ್ತಿ ಯಿಂದ ತೊಡಗಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಯವರು ಮಾತನಾಡುತ್ತಾ, ನಗರದ ಬಸ್ಸು ತಂಗುದಾಣವನ್ನು ಸುಂದರ ಸ್ವಚ್ಛ ಸುರಕ್ಷಿತ ಜಾಗವನ್ನಾಗಿ ಪರಿವರ್ತಿಸುವ ಸ್ಪರ್ಧೆಯ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಯ ಬಗ್ಗೆ ಸ್ವಯಂ ಜಾಗೃತಿ ಮೂಡಿಸುವುದು.

ಯುವಜನರು,ವಿದ್ಯಾರ್ಥಿ ಗಳನ್ನು ಸ್ವಚ್ಛತಾ ಕಾರ್ಯ ದಲ್ಲಿ ಪಾಲುದಾರರನ್ನಾಗಿ ಮಾಡುವುದು ಉದ್ದೇಶ ವಾಗಿದೆ. ಯುವ ಜನರಲ್ಲಿ ಮತ್ತು ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಸ್ವಚ್ಛ ಸುಂದರ ಮಂಗಳೂರು’ ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯ ನಿರತ ಪತ್ರಕರ್ತರ ಸಂಘ ಜಂಟಿಯಾಗಿ ರೂಪಿಸಿದ ವಿಶೇಷ ಕಾರ್ಯ ಕ್ರಮ.ಈ ಕಾರ್ಯಕ್ರಮದ ದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಯುವ ರೆಡ್ ಕ್ರಾಸ್ ಘಟಕಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಯುವ ರೆಡ್ ಕ್ರಾಸ್ ಘಟಕಗಳು ತಮ್ಮ ಕಾಲೇಜಿನ ಹತ್ತಿರ ಇರುವ ಬಸ್ಸು ತಂಗುದಾಣಗಳ ನ್ನುನಿರಂತರವಾಗಿ ಸ್ವಚ್ಚಗೊಳಿಸಿ ಸುಂದರವಾಗಿ ಹೂವಿನ ಗಿಡಗಳಿಂದ ಅಲಂಕರಿಸಿ ಸಾಮಾಜಿಕ ಶುಚಿತ, ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಫಲಕಗಳನ್ನು ಸ್ಥಾಪಿಸುವ ಮೂಲಕ ಹಾಗೂ ಸಾರ್ವಜನಿಕ ರಿಗೆ ಬಸ್ ತಂಗುದಾಣ ದ ಮೂಲಕ ಮಾಹಿತಿ,ಅರಿವು ನೀಡುವ ಆಕರ್ಷಕ ಕೇಂದ್ರ ವಾಗಿ ಬಸ್ ತಂಗುದಾಣ ವನ್ನು ಪರಿವರ್ತನೆ ಮಾಡುವ ಈ ಕಾರ್ಯಕ್ರಮವನ್ನು ನಿರ್ವಹಿಸುವಂತೆ ನಿರೀಕ್ಷಿಸಲಾಗಿದೆ. ಕಾಲೇಜು ಘಟಕಗಳು ತಮ್ಮ ಕ್ರೀಯಾಶೀಲ ಚಿಂತನೆಯೊಂದಿಗೆ ಯುವ ರೆಡ್ ಕ್ರಾಸ್ ಸ್ವಯಂಸೇವಕರ ಸಹಕಾರದೊಂದಿಗೆ ಶುಚಿತ್ವ ಕಾರ್ಯಕ್ರಮ ವನ್ನು ನಿರಂತರವಾಗಿ ನಡೆಸುವ ಮೂಲಕ ಈ ಸ್ಪರ್ಧೆ ಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ವಿವೇಕಾನಂದ ಜಯಂತಿಯ ಆಚರಣೆ ಸಂದರ್ಭದಲ್ಲಿ ಬಹುಮಾನ ಮತ್ತು ಪಶಸ್ತಿ ಪತ್ರಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜಯಾ ನಂದ ಅಂಚನ್ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಪೂರ್ಣಿಮಾ,,ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಸಭಾಪತಿ ಸಿ.ಎ.ಶಾಂತರಾಮ ಶೆಟ್ಟಿ, ದಯಾನಂದ ಪೈ,ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಕಾಲೇಜಿನ ಪ್ರಾಂಶುಪಾಲ ಜಯಕರ ಭಂಡಾರಿ,ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ, ರೆಡ್ ಕ್ರಾಸ್ ಘಟಕದ ಹಿರಿಯ ಸದಸ್ಯ ರಾದ ರವೀಂದ್ರನಾಥ ಉಚ್ಚಿಲ್,ಯುವ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ಡಾ.ಮಹೇಶ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಾರ್ಯಕ್ರಮ ನಿರೂಪಿಸಿದರು.ಬಸ್ಸು ತಂಗುದಾಣದ ಬಳಿ ಗಿಡ ನೆಟ್ಟು ಸ್ವಚ್ಛ ಗೊಳಿಸುವ ಕಾರ್ಯಕ್ರಮ ದಲ್ಲಿ ರಥಬೀದಿಯ ದಯಾನಂದ ಪೈ,ಸತೀಶ್ ಪೈ ಕಾಲೇಜಿನ ವಿದ್ಯಾರ್ಥಿಗಳು ಅತಿಥಿ ಗಳೊಂದಿಗೆ ಭಾಗವಹಿಸಿದರು.

See also  ಲಿಮಾ: ಪೆರುವಿನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ದೀನಾ ಬೊಲುವಾರ್ಟೆ ಪ್ರಮಾಣ ವಚನ ಸ್ವೀಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು