ಮಂಗಳೂರು: ತಾ ಡಿ.17, 2022 ರಂದು ಮಂಗಳೂರು ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ವತಿಯಿಂದ ಕಾಲೇಜಿನ ಆವರಣದಲ್ಲಿ ‘ಅವಿಷ್ಕಾರ್ 2022’ ಸಾಂಸ್ಕೃತಿಕ ಹಬ್ಬ ವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಬ್ಯಾರೆಟ್ಟೊ ಸ್ಟ್ಯಾನಿ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ
ಶ್ರೀ ಸ್ಟ್ಯಾನಿ ಬ್ಯಾರೆಟ್ಟೊ, ಉದ್ಘಾಟಿಸಿ, ಮಾತನಾಡಿ, ಈ ಸಾಂಸ್ಕೃತಿಕ ಹಬ್ಬ ವು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿ
ಬೆಳೆಸಲು ಮುಖ್ಯ ವೇದಿಕೆ ಯಾಗಿದೆ ಎಂದು ಹೇಳಿದರು.
ಕಾಲೇಜಿನ ಸಂಚಾಲಕ ರೆ| ಫಾ| ಬೊನವೆಂಚರ್ ನಝರತ್, ಅಧ್ಯಕ್ಷತೆ ವಹಿಸಿ ಸಾಂಸ್ಕೃತಿಕ ಹಬ್ಬ ಬಂದಿರುವ ಎಲ್ಲರಿಗೂ ಶುಭ
ಹಾರೈಸಿದರು, ಸಂಸ್ಥೆಯ ಹಳೆ ವಿದ್ಯಾರ್ಥಿ,, ಚಲನಚಿತ್ರ ನಟ, ಬರಹಗಾರ ಮತ್ತು ನಿರ್ದೇಶಕ ರಾದ ಶ್ರೀಯುತ ಸಂದೀಪ್ ಮಲಾನಿ, ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷರಾದ ಶ್ರೀಮತಿ ಪ್ಯಾಟ್ಸಿ ವಾಸ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಯುತ ಮೆಲ್ವಿನ್ ವಾಸ್,
ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ವಂದ ಗುರು. ಉದಯ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಪಿಎಲ್ ಕಾರ್ಪೊರಲ್ನಲ್ಲಿ ಸಾಧನೆ ಮಾಡಿದ ಎನ್ಸಿಸಿ ಕೆಡೆಟ್ನ ವಿದ್ಯಾರ್ಥಿಗಳಾಗಿರುವ ಆಕಾoಶ ಮತ್ತು ನಿಹಾರ್ ಗೌಡ
ಸನ್ಮಾನಿಸಲಾಯಿತು. ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಉಡುಗೆ ತೊಡುಗೆಗಳ ಪ್ರದರ್ಶನ, 3ರಿಂದ 5 ವರ್ಷ ವಯಸ್ಸಿನ ಪುಟಾಣಿಗಳಿಗಾಗಿ ಬೇಬಿ ಶೋ,,ಹೌಸಿ ಹೌಸಿ, ಕಿಸ್ಮಸ್ ಸ್ಟಾರ್ , ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು .
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಶೇಷ ಆಕರ್ಷಕ ಬಹುಮಾನವನ್ನು ನೀಡಿಲಾಯಿತು. ಸಾಂಸ್ಕೃತಿಕ ಹಬ್ಬ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಸಲಾಯಿತು, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂದ. ಗುರು. ಮೈಕಲ್ ಸಾಂತುಮಾಯೋರ್ ಸ್ವಾಗತಿಸಿ, ಉಪನ್ಯಾಸಕಿ ಕ್ಯಾರಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಶ್ರೀಯುತ ಡೆಂಝಿಲ್ ಡಿ ಕಾಸ್ಟ್ ವಂದಿಸಿದರು.