ಮಂಗಳೂರು: ಡಿಸೆಂಬರ್ 18 ರಂದು ವಿಶೇಷ ಮಕ್ಕಳಿಗೆ ಬಹಳ ವಿಶೇಷ ದಿನವಾಗಿತ್ತು. ಕ್ರಿಸ್ಮಸ್ಗೆ ದಿನಗಣನೆ ನಡೆಯುತ್ತಿರುವಾಗಲೇ ಮೀನಾ ನೊರೊನ್ಹಾ ನೇತೃತ್ವದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರ ಬೆಂಬಲದೊoದಿಗೆ ವಿಶೇಷ ಮಕ್ಕಳ ಕುಟುಂಬಗಳಿಗೆ ಕ್ರಿಸ್ಮಸ್ ಪಾರ್ಟಿಯನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮ ಎಷ್ಟು ವಿಶೇಷವಾಗಿತ್ತೆಂದರೆ ಕ್ರಿಸ್ಮಸ್ನ ಅರ್ಥ ಸಮಯ ಶ್ರಮ ಮತ್ತು ಹಣವನ್ನು ಹಂಚಿಕೊಳ್ಳುವ ಮೂಲಕ ಅವರ ಬಗ್ಗೆ ಹೇಗೆ ಕಾಳಜಿ ತೋರಿಸಬಹುದು ಎನ್ನುವುದನ್ನು ಮನಗಾಣಲಾಯಿತು.
ಎಂಸಿಸಿ ಬ್ಯಾಂಕ್ ಮತ್ತು ನ್ಯೂಸ್ ಕರ್ನಾಟಕ. ಕಾಮ್ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಸ್ಥಳ ವ್ಯವಸ್ಥೆ ಮಾಡಲಾಗಿತ್ತು. ಔಪಚಾರಿಕತೆಯ ಮೂಲಕ ಕುಟುಂಬಗಳು ಪರಸ್ಪರ ಪರಿಚಯಿಸುವುದರೊಂದಿಗೆ ಕೂಟ ಆರಂಭಗೊ0ಡಿತು. ನಂತರ ಮಕ್ಕಳು ಮತ್ತು ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪೋಷಕರು ಮತ್ತು ವಿಶೇಷ ಮಕ್ಕಳು ಬಹಳ ಉತ್ಸಾಹದಿಂದ ಚಟುವಟಿಕೆಯಲ್ಲಿ ಭಾಗವಹಿಸಿ ಖುಷಿ ಪಟ್ಟರು.
ಈ ಸಂದರ್ಭ ಕಾತರದಿಂದ ಕಾಯುತ್ತಿದ್ದ ಸಾಂತಕ್ಲಾಸ್ ಆಗಮನವಾಗಿ ಮಕ್ಕಳಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಯಿತು. ಇದರೊಂದಿಗೆ ಹಬ್ಬದ ವಾತಾವರಣ ಉತ್ತುಂಗಕ್ಕೇರಿತ್ತು. ಬಳಿಕ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ನ್ಯೂಸ್ ಕರ್ನಾಟಕ ವತಿಯಿಂದ ಚಿತ್ರಕಲೆ ಸ್ಪರ್ಧೆ ನಮ್ಮ ಊರು ನಮ್ಮ ಸಂಸ್ಕೃತಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಮಕ್ಕಳ ಮೂಲಕ ನೆರವೇರಿಸಲಾಯಿತು.
ಮಂಗಳೂರು ರೋಟರಿ ಕ್ಲಬ್ ವತಿಯಿಂದ ಕೇಕ್ ಮತ್ತು ಚಹಾ ತಿಂಡಿ ಮತ್ತು ಉಡುಗೊರೆಗಳನ್ನು ವಿತರಿಸಲಾಯಿತು.