News Kannada
Saturday, January 28 2023

ಮಂಗಳೂರು

ಮಂಗಳೂರು: `ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ(ಸೀಸನ್-೪)’ ಉದ್ಘಾಟನೆ

Photo Credit : By Author

ಮಂಗಳೂರು: ಮಂಗಳೂರಿನ ಮುಂಚೂಣಿಯ ಪ್ರಾಪರ್ಟಿ ಡೆವೆಲಪರ್ ಆಗಿರುವ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು, ಹೊಸ ತಲೆಮಾರಿನ ಆಶೋತ್ತರಗಳಿಗೆ ಸ್ಪಂದಿಸುತ್ತಾ ಅನುಷ್ಠಾನಗೊಳಿಸಿರುವ ನೂತನ ಪರಿಕಲ್ಪನೆಯ ಜೀವನ ಶೈಲಿಯ ಅಪಾರ್ಟ್ಮೆಂಟ್‌ಗಳ ಸರಣಿಯ ಬಗ್ಗೆ ಗ್ರಾಹಕರಿಗೆ ಪರಿಪೂರ್ಣ ಮಾಹಿತಿ ಒದಗಿಸುವುದಕ್ಕಾಗಿ ಹಮ್ಮಿಕೊಂಡ ನಾಲ್ಕು ದಿನದ `ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ(ಸೀಸನ್-೪)’ ಸೋಮವಾರ ಉದ್ಘಾಟನೆಗೊಂಡಿದೆ. ಡಿ.೨೨ರ ವರೆಗೆ ಈ ಮೇಳ ನಡೆಯಲಿದೆ.

ಉದ್ಘಾಟನೆ ನೆರವೇರಿಸಿದ ಹಿರಿಯ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಅವರು, ಕೋವಿಡ್ ವೇಳೆ ಅತ್ಯಂತ ಸಂಕಷ್ಟಮಯ ಪರಿಸ್ಥಿತಿಗೆ ರಿಯಲ್ ಎಸ್ಟೇಟ್ ಕ್ಷೇತ್ರವು ಕುಸಿದಿತ್ತು, ಅದನ್ನೆಲ್ಲಾ ಹಿಮ್ಮೆಟ್ಟಿಸಿ ಯೋಜನೆಗಳನ್ನು ಕ್ಲಪ್ತಸಮಯದಲ್ಲಿ ಗುಣಮಟ್ಟದೊಂದಿಗೆ ನಿರ್ಮಿಸುತ್ತಾ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಶ್ರೀನಾಥ್ ಹೆಬ್ಬಾರ್ ಅವರು ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಯೋಜನೆಗಳಿಗೆ ಸ್ಥಳಗಳ ಆಯ್ಕೆ, ವಿನ್ಯಾಸ, ನಿರ್ಮಾಣದ ಗುಣಮಟ್ಟ, ದಾಖಲೆಗಳ ಪರಿಪೂರ್ಣತೆ ಇವೆಲ್ಲದರಿಂದಾಗಿ ಮಂಗಳೂರಿ ನಿರ್ಮಾಣ ವಲಯದಲ್ಲೇ ಲ್ಯಾಂಡ್‌ಟ್ರೇಡ್ಸ್ ಸಂಸ್ಥೆ ಜನಮನ್ನಣೆ ಗಳಿಸಿದೆ. ಅವರ ಗೃಹ, ವಾಣಿಜ್ಯ, ಬಜೆಟ್ ಮನೆ ಇವೆಲ್ಲವೂ ಉತ್ಕೃಷ್ಟ ಮಟ್ಟದಲ್ಲಿವೆ ಎಂದ ಅವರು, ಅತ್ಯಽಕ ಮಂದಿಗೆ ಕೆಲಸ ನೀಡುತ್ತಿರುವ ನಿರ್ಮಾಣ ವಲಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಎಂಎಸ್‌ಎಂಇ(ಕಿರು, ಸಣ್ಣ, ಮಧ್ಯಮ ಉದ್ದಿಮೆ) ಎಂದು ಪರಿಗಣಿಸುವುದು ಸೂಕ್ತವಾಗಿದೆ ಎಂದರು.

ಖರೀದಿಗೆ ಸೂಕ್ತ ಸಮಯ
ಮುಖ್ಯ ಅತಿಥಿ ಯೂನಿಯನ್ ಬ್ಯಾಂಕ್ ಡಿಜಿಎಂ ಮಹೇಶ ಜೆ ಅವರು, ಒಂದೆಡೆ ಕೋವಿಡ್ ಬಳಿಕ ಎಲ್ಲಾ ಕ್ಷೇತ್ರಗಳೂ ಮತ್ತೆ ಚಿಗುರಿಕೊಳ್ಳುತ್ತಿದ್ದು, ಭೂಮಿಯ ದರ, ನಿರ್ಮಾಣದ ದರ ತ್ವರಿತವಾಗಿ ಮೇಲೇರುತ್ತಿದೆ, ಮನೆ ಖರೀದಿಸುವುದಾದರೆ ಇದು ಸರಿಯಾದ ಸಮಯ, ಮುಂದೆ ದರಗಳು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಕರ್ಣಾಟಕ ಬ್ಯಾಂಕ್ ಡಿಜಿಎಂ ರವಿಚಂದ್ರನ್ ಅವರು ಮಾತನಾಡಿ, ೩ ದಶಕಗಳಿಂದ ನಿರ್ಮಾಣ ಕ್ಷೇತ್ರದಲ್ಲಿದ್ದು ಏಳುಬೀಳುಗಳನ್ನು ಅನುಭವಿಸಿ ೩೭ ಯೋಜನೆಗಳನ್ನು ಪೂರ್ಣಗೊಳಿಸಿರುವ ಶ್ರೀನಾಥ್ ಹೆಬ್ಬಾರ್ ಅವರ ಸಾಧನೆ ಅಭಿನಂದನೀಯ, ಅವರು ಯೋಜನೆಗಳ ಗುಣಮಟ್ಟಕ್ಕೆ ಕೊಡುವ ಪ್ರಾಧಾನ್ಯ ಗಮನಾರ್ಹ, ಅಲ್ಲದೆ ಯೋಜನಾ ಪ್ರದೇಶದಲ್ಲಿ ಹಸಿರುವಲಯಕ್ಕೂ ಮಹತ್ವ ಕೊಡುವುದು ಉಲ್ಲೇಖನೀಯ ಎಂದರು.

ಭಾರತೀಯ ಸ್ಟೇಟ್‌ಬ್ಯಾಂಕ್ ಎಜಿಎಂ ಡೈಸಿ ಕುಜೂರು ಅವರು ಶುಭಹಾರೈಸಿ, ಸ್ಮಾರ್ಟ್ಸಿಟಿಯಾಗಿರುವ ಮಂಗಳೂರನ್ನು ಮತ್ತಷ್ಟು ಸ್ಮಾರ್ಟ್ಗೊಳಿಸುವಲ್ಲಿ ಲ್ಯಾಂಡ್‌ಟ್ರೇಡ್ಸ್ ಕೊಡುಗೆ ಬಹಳಷ್ಟಿದೆ. ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ತಾಯ್ನಾಡಿಗೆ ಮರಳುತ್ತಿರುವಾಗ ಇಂತಹ ಪ್ರಾಪರ್ಟಿ ಉತ್ಸವ ಏರ್ಪಡಿಸಿದ್ದು ಅವರಿಗೆ ಅವಕಾಶ ಒದಗಿಸಿದಂತಾಗಿದೆ ಎಂದರು.

ಸ್ವಾಗತಿಸಿ ಪ್ರಸ್ತಾವಿಸಿದ ಲ್ಯಾಂಡ್ ಟ್ರೇಡ್ಸ್ನ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಅವರು, ಗ್ರಾಹಕರು ಬೆಳಗ್ಗೆ ೧೦ ರಿಂದ ಸಂಜೆ ೭ ರ ತನಕ ಯಾವುದೇ ಸಮಯದಲ್ಲಿ ಮೇಳಕ್ಕೆ ಭೇಟಿ ನೀಡಿ ನೂತನ ಯೋಜನೆಗಳಲ್ಲಿನ ಖರೀದಿಗೆ ಆಕರ್ಷಕ ಕೊಡುಗೆ ಪಡೆಯಬಹುದು ಎಂದರು.

ಲ್ಯಾಂಡ್‌ಟ್ರೇಡ್ಸ್ ಸಿಇಒ ರಮಿತ್ ಕುಮಾರ್ ಸಿದ್ದಕಟ್ಟೆ ವಂದಿಸಿದರು.

ಯಾವೆಲ್ಲಾ ಯೋಜನೆ?
ಕದ್ರಿ-ಶಿವಭಾಗ್‌ನ ನಿಸರ್ಗ ರಮಣೀಯ ಎತ್ತರ ಪ್ರದೇಶದಲ್ಲಿ ಲ್ಯಾಂಡ್ ಟ್ರೇಡ್ಸ್ ಶಿವಭಾಗ್ ಎಂಬ ೩೪ ಅಂತಸ್ತುಗಳ ಅರಮನೆ ಸದೃಶ ರೆಸಿಡೆನ್ಸಿಯಲ್ ಯೋಜನೆ ಸುಂದರ ಪರಿಸರ, ಅತ್ಯಾಧುನಿಕ ಸೌಕರ್ಯದೊಂದಿಗೆ ನಿರ್ಮಾಣಗೊಳ್ಳುತ್ತಿದೆ.
ಬೆಂದೂರ್‌ವೆಲ್‌ನಲ್ಲಿ ನಿರ್ಮಾಣವಾಗುತ್ತಿರುವ ೩೨ ಅಂತಸ್ತುಗಳ ಗಗನಚುಂಬಿ `ಅಲ್ಟೂರ’, ಮಣ್ಣಗುಡ್ಡ ಗಾಂಽನಗರದ `ನಕ್ಷತ್ರ’ ಯೋಜನೆಯು ೪೯ ಸುಸಜ್ಜಿತ ೨ ಹಾಗೂ ೩ ಬಿಎಚ್‌ಕೆ ಪ್ರೀಮಿಯಂ ಅಪಾರ್ಟ್ಮೆಂಟ್, ಉರ್ವ-ಮಾರಿಗುಡಿ ರಸ್ತೆಯ `ಅದಿರ’ ೩ ಬಿಎಚ್‌ಕೆಯ ೧೬ ಅಪಾರ್ಟ್ಮೆಂಟ್‌ಗಳ ಯೋಜನೆ, ಉಳ್ಳಾಲದಲ್ಲಿ ೧.೫ ಎಕರೆ ಜಮೀನಿನಲ್ಲಿ `ಕಾಮತ್ ಗಾರ್ಡನ್’ ಎಂಬ ೧೬ ಸ್ವತಂತ್ರ ಮನೆ ನಿವೇಶನಗಳ ಸುಸಜ್ಜಿತ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ.
ಹ್ಯಾಟ್‌ಹಿಲ್‌ನಲ್ಲಿರುವ ಸಾಲಿಟೇರ್-೩೨ ಅಂತಸ್ತುಗಳ ೧೪೩ ಸೂಪರ್ ಲಕ್ಸುರಿ ಅಪಾರ್ಟ್ಮೆಂಟ್ ಲ್ಯಾಂಡ್ ಟ್ರೇಡ್ಸ್ನ ಅತ್ಯಂತ ಪ್ರತಿಷ್ಠೆಯ ಗಗನ ಚುಂಬಿ ಯೋಜನೆಯಾಗಿದೆ. ದೇರೆಬೆÊಲ್‌ನ ಹ್ಯಾಬಿಟ್ಯಾಟ್ ವನ್-೫೪ ಯೋಜನೆಯು ಒಂದು ಮತ್ತು ಎರಡು ಬೆಡ್‌ರೂಮ್‌ಗಳ ೧೫೪ ಬಜೆಟ್ ಅಪಾರ್ಟ್ಮೆಂಟ್ ಸಂಕೀರ್ಣವಾಗಿದೆ. ಎಮರಾಲ್ಡ್ ಬೇ- ಸುರತ್ಕಲ್‌ನಲ್ಲಿರುವ ಕ್ಲಬ್‌ಹೌಸ್, ನಿಸರ್ಗ ಸೌಂದರ್ಯದ ಬೀಚ್ ಪ್ರಾಪರ್ಟಿಯಾಗಿದೆ.

See also  ಮಂಗಳೂರು: ವಾರ್ಡ್ ಸಮಿತಿ ಬಳಗದಿಂದ ಸಮಾಲೋಚನಾ ಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು