ಮಂಗಳೂರು: ನಗರದ ಜ್ಯೋತಿ ವೃತ್ತದ ಸೋಜಾ ಆರ್ಕೇಡ್ ಬಳಿ ರಸ್ತೆ ಬದಿಯಲ್ಲಿ ಹಗೆದಿಟ್ಟ ಗುಂಡಿಗೆ ಬಿದ್ದು ಮಹಿಳಾ ಒಬ್ಬರು ಗಾಯಗೊಂಡ ಘಟನೆ ಸೋಮವಾರ ಮಧ್ಯಾನ ನಡೆದಿದೆ.
ಜ್ಯೋತಿ ಕೆಎಂಸಿ ಆಸ್ಪತ್ರೆ ಕಡೆಯಿಂದ ಮಿಲಾಗ್ರಿಸ್ ಕಡೆಗೆ ನಡೆದು ಹೋಗುತ್ತಿದ್ದ ಸುಮಾರು 55 ವರ್ಷದ ಕ್ರಿಶ್ಚಿಯನ್ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಆಗಿದಿಟ್ಟು ಗುಂಡಿಗೆ ಬಿದ್ದಿದ್ದಾರೆ.
ಸುಮಾರು ಏಳು ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆಯನ್ನು ಬಳಿಕ ಸ್ಥಳೀಯರು ಕಷ್ಟಪಟ್ಟು ಹೊರಗೆ ತೆಗೆದಿದ್ದಾರೆ , ಕೇಬಲ್ ಕಾಮಗಾರಿ ನೆಪದಲ್ಲಿ ಸೋಜಾ ಆರ್ಕೆಡ್ ಎದುರಲ್ಲಿ ಒಂದು ತಿಂಗಳಿನಿಂದ ರಸ್ತೆ ಬದಿ ಗುಂಡಿ ತೆಗೆಯಲಾಗಿದೆ ಅದನ್ನು ಮುಚ್ಚದೆ ಆಗಿ ಬಿಡಲಾಗಿದ್ದು ಪಾದ ಚಾರಿಗಳು ನಡೆದುಹೋಗುವುದಕ್ಕೆ ಕಷ್ಟಪಡುತ್ತಿದ್ದಾರೆ.
ಮಹಿಳೆ ಕವುಚಿ ಕೊಂಡು ಬಿದ್ದಿದ್ದು ತಲೆಯ ಭಾಗ ಗುಂಡಿಯ ಒಳಗೆ ಬಿದ್ದಿತ್ತು ಬೆನ್ನು ಮತ್ತು ಕುತ್ತಿಗೆಯ ಭಾಗಕ್ಕೆ ಗಾಯಗೊಂಡಿದ್ದು ಜೊತೆಗೆ ಇದ್ದ ಗಂಡ ಎತ್ತಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜ್ಯೋತಿ ವ್ರತದಿಂದ ಮಿಲಾಗ್ರಿಸ್ ಎರಡು ಬದಿ ಆಗಿದ್ದು ಹಾಕಲಾಗಿದ್ದು ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಿನಲ್ಲಿ ಬ್ಲಂಡರ್ ಮಾಡಲಾಗಿದೆ ಇದರಿಂದಾಗಿ ರಸ್ತೆ ಬದಿಯಿಂದ ನಡೆದು ಹೋಗುವುದಕ್ಕೂ ಸಾಧ್ಯವಾಗದ ಸ್ಥಿತಿ ಇದೆ.