ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಅಭಿವೃದ್ದಿ ದೃಷ್ಟಿಯಿಂದ ಕಳೆದ ನಾಲ್ಕೂವರೆ ವರ್ಷದಲ್ಲಿ ಸುಮಾರು ಎರಡೂವರೆ ಸಾವಿರ ಕೋ.ರೂ. ಅನುದಾನ ತಂದು ವಿವಿಧ ಅಭಿವೃದ್ದಿ ಕೆಲಸ ಮಾಡಲಾಗಿದೆ. ಅದೇ ರೀತಿ ಕಳೆದ ನಾಲ್ಕು ವರ್ಷದಲ್ಲಿ ಅರ್ಹ ಫಲಾನುಭವಿಗಳಿಗೆ ಸುಮಾರು 4 ಸಾವಿರ 94 ಸಿ, 94ಸಿಸಿ ಹಕ್ಕುಪತ್ರ ವಿತರಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬೆಳ್ತಂಗಡಿ ಶ್ರೀಮಂಜುನಾಥಸ್ವಾಮಿ ಕಲಾ ಭವನದಲ್ಲಿ ದ.ಕ.ಜಿ.ಪಂ., ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಕಂದಾಯ ಇಲಾಖೆ ಇದರ ಜಂಟಿ ಸಹಯೋಗದೊಂದಿಗೆ ಅರ್ಹ ವಿಕಲ ಚೇತನ ಫಲಾನುಭವಿಗಳಿಗೆ 10 ತ್ರಿಚಕ್ರ ವಾಹನ ಹಾಗೂ 186 ಮಂದಿ ಅರ್ಹ ಫಲಾನುಭವಿಗಳಿಗೆ 94ಸಿ, 94 ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ತಾಲೂಕಿನ ಅರ್ಹ ಫಲಾನುಭವಿಗಳಿಗೆ ಸರಕಾರದ ವಿವಿಧ ಯೋಜನೆಗಳು ಸಿಗುವಂತೆ ತಾಲೂಕಿನ ಆಯಾಯ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮವಹಿಸಿದ್ದಾರೆ ಎಂದರು.
ಬೆಳ್ತಂಗಡಿ ತಾಲೂಕು ಅಭಿವೃದ್ದಿ ದೃಷ್ಟಿಯಿಂದ ರಸ್ತೆ, ಸೇತುವೆಗಳ ಕಾಮಗಾರಿ ಆಗಿದೆ.ಇದೀಗ ಪ್ರವಾಸಿ ಮಂದಿರ, ಗ್ರಂಥಾಲಯ ಕಟ್ಟಡ, ಏತ ನೀರಾವರಿ ಯೋಜನೆ, ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಆಗಲಿದೆ. ತಾಲೂಕಿನ ಬೆಳ್ತಂಗಡಿ ಹಾಗೂ ಪುಂಜಾಲಕಟ್ಟೆ ಎರಡು ಪದವಿ ಕಾಲೇಜನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ಬೆಳ್ತಂಗಡಿ ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ, ನೆರಿಯ ಗ್ರಾ.ಪಂ. ಅಧ್ಯಕ್ಷೆ ವಸಂತಿ, ಲಾಯಿಲ ಗ್ರಾ.ಪಂ. ಅಧ್ಯಕ್ಷೆ ಆಶಾ ಸಲ್ದಾನ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಅಳಂಬಿಲ, ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷ ನವೀನ, ಕಲ್ಮಂಜ ಗ್ರಾ.ಪಂ. ಅಧ್ಯಕ್ಷ ಶ್ರೀಧರ, ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷ ಆನಂದ ಅಡೀಲು, ನಡ ಗ್ರಾ.ಪಂ. ಅಧ್ಯಕ್ಷ ವಿಜಯ ಗೌಡ, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷ ಯಶವಂತ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷ ಪ್ರಸಾದ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾ.ಪಂ.ಇಒ ಕುಸುಮಾಧರ್ ಮೊದಲಾದವರು ಇದ್ದರು.
ಕಂದಾಯ ಇಲಾಖೆಯ ಪವಾಡಪ್ಪ ದೊಡ್ಡಮನಿ, ಪ್ರತೀಶ್ , ಪರಮೇಶ್, ಹೇಮಾ, ಅನಿತಾ, ಸಿಡಿಪಿಒ ಇಲಾಖೆಯ ರತ್ನಾವತಿ, ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್ ಸಹಕರಿಸಿದರು.
ತಾ.ಪಂ. ಸಂಯೋಜಕ ಜಯಾನಂದ ಲಾಯಿಲ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
- ದ.ಕ.ಜಿ.ಪಂ.ನ 9 ಲಕ್ಷ ರೂ. ಅನುದಾನದಲ್ಲಿ 7 ತ್ರಿಚಕ್ರ ವಾಹನ ಹಾಗೂ ವಿಕಲಚೇತನ ಕಲ್ಯಾಣ ಇಲಾಖೆಯಿಂದ 3.75 ಲಕ್ಷ ರೂ. ವೆಚ್ಚದಲ್ಲಿ 3 ತ್ರಿಚಕ್ರ ವಾಹನ ವಿತರಣೆ.
- ಬೆಳ್ತಂಗಡಿ, ಕೊಕ್ಕಡ ಹಾಗೂ ವೇಣೂರು ಹೋಬಳಿಯ 186 ಅರ್ಹ ಫಲಾನುಭವಿಗಳಿಗೆ 94 ಸಿ ಹಾಗೂ 94 ಸಿಸಿ ಹಕ್ಜುಪತ್ರಗಳನ್ನು ವಿತರಿಸಲಾಯಿತು.
- ಬೆಳ್ತಂಗಡಿ ಹೋಬಳಿಯಲ್ಲಿ 94ಸಿ 63 ಮಂದಿಗೆ, ವೇಣೂರು ಹೋಬಳಿಯಲ್ಲಿ 94ಸಿ 19 ಮಂದಿಗೆ ಹಾಗೂ ಕೊಕ್ಕಡ ಹೋಬಳಿಯಲ್ಲಿ 94ಸಿ 74 ಮಂದಿಗೆ ಮತ್ತು ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ 94ಸಿಸಿ 30 ಮಂದಿಗೆ ಒಟ್ಟು 186 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.