ಉಳ್ಳಾಲ: ಸಂಶೋಧನೆಗಳನ್ನು ರ್ಯಾಂಕ್ ರೂಪದಲ್ಲಿ ಅಳಿಯುವುದು ಸೂಕ್ತವಲ್ಲ. ವೈದ್ಯಕೀಯವನ್ನು ತಾಂತ್ರಿಕತೆಯ ಜೊತೆಗೆ ಕಲಿಯಲು ಅಸಾಧ್ಯ. 2021 ರಲ್ಲಿ 41,000 ಕೋಟಿ ರೂ. ವೆಚ್ಚದ ವೈದ್ಯಕೀಯ ಸಲಕರಣೆಗಳನ್ನು ದೇಶಕ್ಕೆ ಆಮದು ಮಾಡಿರುವುದು ವೈದ್ಯಕೀಯ ವ್ಯವಸ್ಥೆ ಬಹಳಷ್ಟು ಹಿಂದೆ ಉಳಿದಿದೆ ಅನ್ನವುದು ಸ್ಪಷ್ಟ ಎಂದು ಪದ್ಮವಿಭೂಷಣ ಪುರಸ್ಕೃತ ಡಾ. ಎಮ್.ಎಸ್ ವೆಲಿಯಾಟನ್ ಅಭಿಪ್ರಾಯಪಟ್ಟರು.
ದೇಶದ 150 ಮಹಿಳಾ ವಿಜ್ಞಾನಿಗಳಲ್ಲಿ ಒಬ್ಬರು ಹಾಗೂ ಜಿಲ್ಲೆಯ ಪ್ರಥಮ ಮಹಿಳಾ ವಿಜ್ಞಾನಿಯಾಗಿ ಭಾರತ ಸರ್ಕಾರದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಇಂಡಿಯಾ (NASI) ಇದರ ವಿಜ್ಞಾನ ಹಾಗೂ ತಾಂತ್ರಿಕ ವಿಭಾಗದ ಪ್ರತಿಷ್ಠಿತ ಫೆಲೋಶಿಪ್ ಪಡೆದುಕೊಂಡ ಕ್ಷೇಮ ಸೆಂಟರ್ ಫಾರ್ ಅಡ್ವಾನ್ಸ್ಟ್ ನ್ಯುರೊಲಾಜಿಕಲ್ ರಿಸಚ್೯ ನಿರ್ದೇಶಕಿ, ನ್ಯುರಾಲಜಿ ವಿಭಾಗದ ಪ್ರೊ. ಲೇಖಾ ಪಂಡಿತ್ ಇವರಿಗೆ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿ.ವಿ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಆಮದು ಮಾಡಿರುವ ಸಲಕರಣೆಗಳಿಂದ ದೇಶದ ಶೇ. 20% ಮಾತ್ರ ಜನರಿಗೆ ಸವಲತ್ತು ಒದಗಿಸಬಹುದು. ಈ ನಿಟ್ಟಿನಲ್ಲಿ ಸರಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ಸಂಶೋಧಕರಿಗೆ ಪ್ರೋತ್ಸಾಹ ನೀಡುವ ಕಾರ್ಯ ಹೆಚ್ಚಾಗಿ ಆಗಬೇಕಿದೆ. ತಾಂತ್ರಿಕತೆಯನ್ನು ಅಭಿವೃದ್ಧಿ ಗೊಳಿಸುವ ಜ್ಞಾನ ,ಫಂಡಮೆಂಟಲ್ ಐಡಿಯಾಗಳನ್ನು ಒಳಗೊಂಡು, ಪ್ರಾಡಕ್ಟ್ ಓರಿಯೆಂಟಡ್ ಸಂಶೋಧನೆಗಳು ಪರಿಣಾಮಕಾರಿಯಾಗಿ ಆಗಬೇಕಿದೆ. ವಸ್ತುಗಳು ವೈದ್ಯಕೀಯ ವಿಭಾಗಕ್ಕೆ ಉಪಯುಕ್ತವಾಗುವಂತೆ ಹೊರಬರಬೇಕಿದೆ. ಕರ್ನಾಟಕದ ವಿಜ್ಞಾನಿ ಸಂಶೋಧಿಸಿದ ವಸ್ತು ಅಂತರಾಷ್ಟ್ರೀಯ ವಾಗಿ ಉಪಯೋಗವಾಗುತ್ತಿದೆ. ಇವೆಲ್ಲವೂ ಸಂಶೋಧನೆಗಳಿಂದಷ್ಟೆ ಸಾಧ್ಯವಾಗಿದೆ. ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳು ವಿಶ್ವಾಸಗಳು ಉಳಿಸುವುದು ಕಷ್ಟ. ಆದರೆ ನಿಟ್ಟೆ ಸಂಸ್ಥೆ ಸಂಶೋಧನೆಗೆ ಪ್ರೋತ್ಸಾಹ ನೀಡಿ ದೇಶದಲ್ಲಿ ತಮ್ಮ ವೈದ್ಯರನ್ನು ಗುರುತಿಸಲ್ಪಡುವ ಕಾರ್ಯ ಮಾಡಿರುವುದು ಶ್ಲಾಘನೀಯ. ಅಂತರಾಷ್ಟ್ರೀಯ ಮಟ್ಟದ ಫಿಸಿಸ್ಟ್ , ಬಡರೋಗಿಗಳಿಗೆ ಸೇವೆ ಸಲ್ಲಿಸಿದ ವ್ಯಕ್ತಿ, ಫಿಸಿಸ್ಟ್ ಐನ್ಸ್ಟನ್ ರೀತಿಯಲ್ಲಿ ಉಳಿದುಕೊಂಡ ಎಂ.ಎನ್.ಸಾಹಾ ಸ್ಥಾಪಿಸಿದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಅಡಿಯಲ್ಲಿ ಫೆಲೋಶಿಪ್ ಪಡೆದಿರುವುದು ಹೆಮ್ಮೆಯ ವಿಚಾರ. ಮೂರು ಹೆಸರಾಂತ ಅಕಾಡೆಮಿಗಳು ದೇಶದಲ್ಲಿ ವೈಜ್ಞಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದೆ ಎಂದರು.
ಅಭಿನಂದನಾ ಸ್ವೀಕರಿಸಿದ ಡಾ.ಲೇಖಾ ಪಂಡಿತ್ ಮಾತನಾಡಿ, ಪ್ರಕೃತಿ ಜತೆಗಿನ ಒಡನಾಟ ಅಜ್ಜಿಯ ಪ್ರೋತ್ಸಾಹ ಎತ್ತರಕ್ಕೆ ಬೆಳೆಸಿದೆ. 1959 ರಲ್ಲಿ ಹುಟ್ಟಿದ ಕ್ಷಣದಿಂದ ಆಕೆ ನೀಡುತ್ತಿದ್ದ ಔಷಧಿಗೆ ನಾನೇ ರೋಗಿಯಾಗಿದ್ದೆ. ಸ್ವಂತ ಯೋಚನೆಗಳನ್ನು ಹೊಂದಿದ್ದಾಗ ಡಾ.ಪಿ.ಕೆ ಮೋಹನ್ ಅವರಿಂದ ಕಲಿತ ವಿಚಾರಗಳು ಬಹಳಷ್ಟು. ರೋಗಿಯ ಡಿಸ್ಚಾಜ್೯ ಸಮ್ಮರಿಯೇ ಪ್ರಮುಖ ಎಂಬುದು ಅವರಿಂದ ತಿಳಿದುಬಂತು. ಖಾಸಗಿ ಸಂಸ್ಥೆಗಳ ಸಂಶೋಧನಾ ವರದಿಯನ್ನು ಸರಕಾರಿ ವ್ಯವಸ್ಥೆ ಸುಲಭವಾಗಿ ಪಡೆದುಕೊಳ್ಳುವುದಿಲ್ಲ. ಅದಕ್ಕಾಗಿ ಬಹಳಷ್ಟು ಕಷ್ಟಪಡಬೇಕು. ಕುಟುಂಬ ಸದಸ್ಯರ ಹಾಗೂ ನಿಟ್ಟೆ ಸಂಸ್ಥೆಯ ಪ್ರೋತ್ಸಾಹದಿಂದ ಸಂಶೋಧನೆಗೆ ಆರ್ಥಿಕ ವ್ಯವಸ್ಥೆಯನ್ನು ಒಟ್ಟುಗೂಡಿಸಲು ಸಹಕಾರವಾಯಿತು ಎಂದರು.
ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿ.ವಿ.ಯ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ ದೇಶದ ಪ್ರತಿಷ್ಠಿತ ಫೆಲೋಶಿಪ್ ಪಡೆದುಕೊಳ್ಳುವುದರಲ್ಲಿ ಜಿಲ್ಲೆಯ ಪ್ರಥಮ ಮಹಿಳೆ ಆಗಿರುವುದು ಹೆಮ್ಮೆ. ನೇರ ನಡೆಯ ವ್ಯಕ್ತಿತ್ವದಿಂದ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಸಂಶೋಧನೆಯ ಗುಣಮಟ್ಟ ಸಂಶೋಧಕ ಇರುವ ಸಂಸ್ಥೆ ಯ ಹೆಸರನ್ನು ಖ್ಯಾತಿಗೊಳಿಸುತ್ತದೆ ಎಂದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಸಹಕುಲಾಧಿಪತಿ ಡಾ.ಎಂ ಶಾಂತರಾಮ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಸಹಕುಲಪತಿ ಡಾ.ಎಂ.ಎಸ್.ಮೂಡಿಥಾಯ ಪದ್ಮವಿಭೂಷಣ ಡಾ.ಎಂ.ಎಸ್ ವೆಲಿಯಾಟನ್ ಪರಿಚಯ ನೀಡಿದರು. ಕ್ಷೇಮ ವೈದ್ಯಕೀಯ ಕಾಲೇಜು ಡೀನ್ ಡಾ.ಪಿ.ಎಸ್ ಪ್ರಕಾಶ್ ಇವರು ಡಾ.ಲೇಖಾ ಪಂಡಿತ್ ಪರಿಚಯ ನೀಡಿದರು.
ನಿಟ್ಟೆ ವಿ.ವಿ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಡಾ.ಸಿದ್ದಾಥ್೯ ನಿರೂಪಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ಹರ್ಷ ಹಾಲಹಳ್ಳಿ ವಂದಿಸಿದರು.