ಬೆಳ್ತಂಗಡಿ: ಪರಿಶ್ರಮ ಮತ್ತು ಬದ್ದತೆಯಿಂದ ಏನನ್ನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ದೇಲಂಪುರಿ ಕ್ಷೇತ್ರ ಸಾಕ್ಷಿಯಾಗಿದೆ. ಯುಕ್ತಿ ಮತ್ತು ಭಕ್ತಿಯ ಶ್ರಮದಾನದಲ್ಲಿ ದೇಲಂಪುರಿ ದೇಗುಲ ನಿರ್ಮಾಣ ಆಗಿರುವುದು ಸಂತಸ ವಿಚಾರವಾಗಿದ್ದು, ಗ್ರಾಮಗಳಲ್ಲಿ ಸಮೃದ್ಧಿ, ಸುಭೀಕ್ಷೆ ಮನೆಮಾಡಲಿ ಎಂದು ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು.
ಕರಿಮಣೇಲು ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಸೋಮವಾರ ಜರಗಿದ ಧಾರ್ಮಿಕಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾಜಪ ಜಿಲ್ಲಾಧ್ಯಕ್ಷ ಎಂ. ಸುದರ್ಶನ್ ಮೂಡಬಿದಿರೆ, ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸತೀಶ್ ಶೆಟ್ಟಿ, ಉದ್ಯಮಿಗಳಾದ ಉಮೇಶ್ ಹೆಗ್ಡೆ, ಕೆ. ಭಾಸ್ಕರ ಪೈ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ಸತೀಶ್ ಪೂಜಾರಿ ಉಜಿರ್ದಡ್ಡ, ಬ್ರಹ್ಮಕಲಶೋತ್ಸವ ಸಮಿತಿ ಪ್ರ. ಕಾರ್ಯದರ್ಶಿ ಜಗದೀಶ್ ನಾಯಕ್ ಉಪಸ್ಥಿತರಿದ್ದರು.
ಶ್ರುತಿ ಶ್ರವಣ್ ಕಾಂತಾಜೆ ಪ್ರಾರ್ಥಿಸಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಕೆ. ಪ್ರಾಸ್ತಾವಿಸಿ, ಸ್ವಾಗತಿಸಿದರು. ಧಾರ್ಮಿಕಸಭೆ ಸಂಚಾಲಕ ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿ, ಸುಧೀರ್ ಭಂಡಾರಿ ವಂದಿಸಿದರು.
ಇಂದಿನ ಕಾರ್ಯಕ್ರಮ ಡಿ. ೨೮ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ೫ ಗಂಟೆಯಿಂದ ಕಟೀಲು ಪ್ರಕಾಶ್ ಸಪ್ರೆ ಮತ್ತು ಬಳಗದವರಿಂದ ಭಜನ್ ಸಂಧ್ಯಾ, ಉಜಿರೆ ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಯಕ್ಷಗಾನ ತಾಳಮದ್ದಲೆ ಜರಗಲಿದೆ.
ಸಮ್ಮಾನ
ದೇವೇಂದ್ರ ಹೆಗ್ಡೆ ಕೊಕ್ರಾಡಿ, ಯಶೋಧರ ಹೆಗ್ಡೆ ಪಾಳೆಂಜ, ಪಿ. ದೇಜಪ್ಪ ಶೆಟ್ಟಿ ಪಿಜತ್ರೋಡಿ, ಮೇಸ್ತ್ರಿ ಶ್ರೀಧರ ಪೂಜಾರಿ, ದೇವಸ್ಥಾನದ ಪ್ರ. ಅರ್ಚಕರಾದ ಡಿ. ಚಂದ್ರಶೇಖರ ಮತ್ತು ಗಿರಿಜಾ ಭಟ್ ದೇಲಂಪುರಿ ದಂಪತಿಯವರನ್ನು ಸಮ್ಮಾನಿಸಲಾಯಿತು. ಅರುಣ್ ಕೋಟ್ಯಾನ್ ಸಮ್ಮಾನಪತ್ರ ವಾಚಿಸಿದರು.