News Kannada
Saturday, February 04 2023

ಮಂಗಳೂರು

ಬೆಳ್ತಂಗಡಿ: ಓಡಿಲ್ನಾಳ ಶ್ರೀ ಕಿರಾತಮೂರ್ತಿ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

Belthangady: Sri Kiratamurthy Brahmakalashotsava Religious Meeting at Odilnala
Photo Credit : By Author

ಬೆಳ್ತಂಗಡಿ, ಡಿ.27: ಇಂದು ಶಿಕ್ಷಿತ ಸಮಾಜ ಎಡವಿದೆ. ಹಿಂದೂ ಸಮಾಜಕ್ಕೆ ಹಿಂದೂಗಳೇ ಕಂಠಕವಾಗುತ್ತಿದ್ದಾರೆ. ಕಾರಣ ಧರ್ಮದ ಶಿಕ್ಷಣದ ಕೊರತೆ, ಹಿಂದು ಸಂಸ್ಕೃತಿ ಆಚಾರ ವಿಚಾರ ಮಕ್ಕಳಲ್ಲಿ ರೂಢಿಸಿದ ಪರಿಣಾಮ ಪಾಶ್ಚಾತ್ಯ ಸಂಸ್ಕೃತಿ ಒಲವು, ಲೌಜಿಹಾದ್, ಡ್ರಗ್ಸ್ ಮಾಫಿಯಾ, ಬಯೋತ್ಪಾದನೆ, ಮತಾಂತರ ಜಾಲಕ್ಕೆ ಸಿಲುಕುವಂತಾಗಿದೆ. ಮಕ್ಕಳ ಭವಿಷ್ಯ ಭದ್ರವಾಗಿಸುವ ಕಾರ್ಯ ಪೋಷಕರಿಂದಾಗಬೇಕಿದ್ದು ಕುಟುಂಬ ಒಗ್ಗಟ್ಟಿನಿಂದ ಉಳಿಯಬೇಕಾದರೆ ಪ್ರತಿ ಮನೆಯಲ್ಲಿ ಭಜನೆ ಹರಿನಾಮ ಸಂಕೀರ್ತನೆಗಳು ಮೊಳಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಓಡಿಲ್ನಾಳ ಗ್ರಾಮದ ಶ್ರೀರಾಮನಗರ ಮೈರಲ್ಕೆ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಡಿ.27 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ತಾವುಗಳು ಕೂಡಿಟ್ಟ ಸಂಪತ್ತಿನ ಒಂದಂಶವನ್ನು ಹಿಂದೂ ಸಮಾಜದ ಏಳಿಗೆಗಾಗಿ ಮೀಸಲಿರಿಸಿದರೆ ಭವಿಷ್ಯದ ಹಿಂದೂ ಸಮಾಜದ ಮಹೋನ್ನತಿಯಾಗಲಿದೆ. ಆಡಂಬರದ ಜೀವನಕ್ಕಾಗಿ ದುಂದುವೆಚ್ಚ, ಚಿಂತನೆಯಿಲ್ಲದ ಧಾರ್ಮಿಕ ಆಚರಣೆ ಅರ್ಥಹೀನವಾಗಿರುವುದು ಕಳವಳಕಾರಿ ಎಂದು ಹೇಳಿದರು.

ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಸಂಸ್ಕಾರ ಎಂಬುದು ಪಾಠವಲ್ಲ, ಪರೀಕ್ಷೆ ಬರೆಯುವ ವಿಷಯವಲ್ಲ ಇದು ನಮ್ಮ ಮನೋಭೂಮಿಕೆ, ಈ ನೆಲದ ಆಚಾರದ ಬೆಳೆದು ಬಂದ ವಿಷಯವಾಗಿದೆ. ಪ್ರಕೃತಿಯಿಂದ ಸಂಸ್ಕೃತಿ, ಸಂಸ್ಕೃತಿ ವಿಕೃತಿಯಾದಾಗ ಸಮಾಜ ಅಧಃಪತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.

ಕೊಯ್ಯೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪ್ರಧಾನ ಅರ್ಚಕ ಅಶೋಕ್ ಕುಮಾರ್ ಭಾಂಗಿಣ್ಣಾಯ ಅಧ್ಯಕ್ಷತೆ ವಹಿಸಿದ್ದರು.

ಕುವೆಟ್ಟು ಗ್ರಾ.ಪಂ. ಸದಸ್ಯೆ ಭಾರತಿ ಎಸ್.ಶೆಟ್ಟಿ, ಪಡ್ಯಾರಬೀಡು ಪ್ರವೀಣ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ.ಜೈನ್, ಕಾರ್ಯಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ.ಎಂ. ಕಾಲೇಜು ಉಪನ್ಯಾಸಕ ದೀಕ್ಷಿತ್ ರೈ, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.

ಪಿಲಿಚಂಡಿಕಲ್ಲು ಸ.ಹಿ.ಪ್ರಾ.ಶಾಲೆ ಹಾಗೂ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರ ಪ್ರಶಸ್ತಿ ವಿಜೇತ ದೇಹದಾರ್ಢ್ಯ ಪಟು ಜಗದೀಶ್ ಪೂಜಾರಿ ಅಡ್ಯಾರ ಪದವು ಅವರ ದೇಹದಾರ್ಢ್ಯ ಪ್ರದರ್ಶನ ನಡೆಯಿತು. ಆ ದೇವೆರು ತೂವಡು ಸಾಂಸಾರಿಕ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಂಡಿತು.

ಇಂದು ಶಿಕ್ಷಿತ ಸಮಾಜ ಎಡವಿದೆ. ಹಿಂದೂ ಸಮಾಜಕ್ಕೆ ಹಿಂದೂಗಳೇ ಕಂಠಕವಾಗುತ್ತಿದ್ದಾರೆ. ಕಾರಣ ಧರ್ಮದ ಶಿಕ್ಷಣದ ಕೊರತೆ, ಹಿಂದು ಸಂಸ್ಕೃತಿ ಆಚಾರ ವಿಚಾರ ಮಕ್ಕಳಲ್ಲಿ ರೂಢಿಸಿದ ಪರಿಣಾಮ ಪಾಶ್ಚಾತ್ಯ ಸಂಸ್ಕೃತಿ ಒಲವು, ಲೌಜಿಹಾದ್, ಡ್ರಗ್ಸ್ ಮಾಫಿಯಾ, ಬಯೋತ್ಪಾದನೆ, ಮತಾಂತರ ಜಾಲಕ್ಕೆ ಸಿಲುಕುವಂತಾಗಿದೆ. ಮಕ್ಕಳ ಭವಿಷ್ಯ ಭದ್ರವಾಗಿಸುವ ಕಾರ್ಯ ಪೋಷಕರಿಂದಾಗಬೇಕಿದ್ದು ಕುಟುಂಬ ಒಗ್ಗಟ್ಟಿನಿಂದ ಉಳಿಯಬೇಕಾದರೆ ಪ್ರತಿ ಮನೆಯಲ್ಲಿ ಭಜನೆ ಹರಿನಾಮ ಸಂಕೀರ್ತನೆಗಳು ಮೊಳಗಬೇಕು ಎಂದು ಮಾಣಿಲ ಶ್ರೀಗಳು ಆಶಿಸಿದರು.

See also  ಕರಾವಳಿ ಜಿಲ್ಲೆಗಳ ಪ್ರವಾಸಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು