News Kannada
Tuesday, February 07 2023

ಮಂಗಳೂರು

ಉಳ್ಳಾಲ: ತಲೆನೋವು, ಜ್ವರದಿಂದ ಬಳಲುತ್ತಿದ್ದ ಆರನೇ ತರಗತಿ ವಿದ್ಯಾರ್ಥಿ ಸಾವು

ullal-class-vi-student-dies-after-suffering-from-headache-fever
Photo Credit : News Kannada

ಉಳ್ಳಾಲ: ಕಳೆದೆರಡು ದಿವಸಗಳಿಂದ ತಲೆನೋವು, ಜ್ವರದಿಂದ ಬಳಲುತ್ತಿದ್ದ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಶ್ವಿತ್ ಇಂದು ಸಾವನ್ನಪ್ಪಿದ್ದು, ಬಾಲಕ ಮೆದುಳು ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಎರಡು ದಿನಗಳಿಂದ ಜ್ವರ ,ತಲೆನೋವು ಎನ್ನುತ್ತಿದ್ದ ಅಶ್ವಿತ್ ನಾಳೆ ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಸ್ಕಿಟ್ ನಲ್ಲೂ ಭಾಗವಹಿಸಲು ತಯಾರಿ ನಡೆಸಿದ್ದನಂತೆ. ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಶಾಲಾ ಆಡಳಿತ ಮಂಡಳಿ, ಕುಟುಂಬ ಹಾಗೂ ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಎರಡು ವರ್ಷಗಳ ಹಿಂದೆ ಅಶ್ವಿತ್ ನ ತಂದೆ ಅವಘಡವೊಂದರಲ್ಲಿ ಸಾವನ್ನಪ್ಪಿದ್ದರು.ಕೊಲ್ಯ ಸಾರಸ್ವತ ಕಾಲನಿಯ ಮನೆಯಲ್ಲಿ ಅಶ್ವಿತ್ ತಾಯಿಯೊಂದಿಗೆ ವಾಸವಿದ್ದ.ಅಶ್ವಿತ್ ಶಾಲೆಯಲ್ಲೂ ಪ್ರತಿಭಾನ್ವಿತನಾಗಿದ್ದು ಶಿಕ್ಷಕರ ಪ್ರೀತಿ ಪಾತ್ರನಾಗಿದ್ದ. ಮೃತ ಅಶ್ವಿತ್ ಗೆ ಕೊನೆಯ ಕ್ಷಣದಲ್ಲಿ ಮಿದುಳು ಜ್ವರದ ಲಕ್ಷಣ ಇತ್ತೆಂದು ಹೇಳಲಾಗಿದೆ.ಆತನಿಗೆ ಮಿದುಳು ಜ್ವರದ ವ್ಯಾಕ್ಸಿನೇಷನ್‌ ಆಗಿದೆಯೇ ಎಂದು ಇನ್ನೂ ಧೃಡಪಟ್ಟಿಲ್ಲ.ಈ ಬಗ್ಗೆ ತಜ್ನ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ಬಾಲಕನ ಅಂತ್ಯ ಸಂಸ್ಕಾರ ಗುರುವಾರ ಮಧ್ಯಾಹ್ನ ನಡೆದಿದ್ದು ಊರಿಗೇ ಊರೇ ರೋಧಿಸುವ ದೃಶ್ಯ ಮನಕಲಕುವಂತಿತ್ತು.

See also  ಬೆಂಗಳೂರು: ಲಿಂಗಾಯತ ಮಠದ ಲೈಂಗಿಕ ಹಗರಣ, ಇಂದು ಆದೇಶ ಹೊರಡಿಸಲಿರುವ ನ್ಯಾಯಾಲಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು