News Kannada
Tuesday, February 07 2023

ಮಂಗಳೂರು

ಬೆಳಾಲು ಪ್ರೌಢಶಾಲೆಯಲ್ಲಿ ಕುವೆಂಪು ನೆನಪು

Kuvempu's memory at Belalu High School
Photo Credit : By Author

ಬೆಳಾಲು: ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಭಾಗಿತ್ವದಲ್ಲಿ “ಕುವೆಂಪು ನೆನಪು” ವಿಶ್ವ ಮಾನವ ದಿನಾಚರಣೆ ಜರಗಿತು. ಶಾಲಾ ಮುಖ್ಯೋಪಾಧ್ಯಾಯರು, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳೂ ಆದ ರಾಮಕೃಷ್ಣ ಭಟ್ ಚೊಕ್ಕಾಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥರವರು ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಾ, ಮಾನವತೆಯ ಸಾಕಾರಮೂರ್ತಿಯಾಗಿ ಬದುಕಿದ ಕುವೆಂಪುರವರು ನಿಜವಾದ ವಿಶ್ವ ಮಾನವರು. ಅವರ ನಡೆನುಡಿಯಲ್ಲಿ , ಬರಹಗಳಲ್ಲಿ, ಕೃತಿಗಳಲ್ಲಿ ಜೀವಪರ ಕಾಳಜಿ, ಜೀವನ ಮೌಲ್ಯಗಳು, ಪರಿಸರ ಪ್ರೀತಿ ಬಹುವಾಗಿ ಪ್ರತಿಪಾದಿತವಾಗಿದೆ. ತಾನು ಮಾಡುವ ಕೆಲಸವನ್ನೇ ದೇವರೆಂದು ಕರ್ತವ್ಯ ನಿರ್ವಹಿಸಿದವರು. ಅಂತಹ ವ್ಯಕ್ತಿತ್ವದ ನೆನಪು ಎಲ್ಲರ ಜೀವನಾದರ್ಶವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕುವೆಂಪುರವರ ಪರಿಚಯವನ್ನು ವಿದ್ಯಾರ್ಥಿ ಶಾರಿಯಾ ಖಾನಂ ಮಾಡಿ, ವಿಶ್ವ ಮಾನವ ಸಂದೇಶವನ್ನು ಸ್ವಸ್ತಿಕ್ ರವರು ತಿಳಿಸಿದರು. ವಿದ್ಯಾರ್ಥಿಗಳಿಂದ ಕುವೆಂಪು ಗೀತೆಗಳ ಗಾಯನವೂ ನೆರವೇರಿತು. ವೇದಿಕೆಯಲ್ಲಿ ಶಿಕ್ಷಕರಾದ ಕೃಷ್ಣಾನಂದ, ಜಗದೀಶ್ ಮತ್ತು ರವಿಚಂದ್ರ ಜೈನ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕರಾದ ಸುಮನ್ ಯು ಎಸ್ ರವರು ಸ್ವಾಗತಿಸಿ , ತೀರ್ಥೇಶ್ ವಂದಿಸಿದರು, ಶ್ರಾವ್ಯ ಎಸ್ ವಿ ಕಾರ್ಯಕ್ರಮವನ್ನು ನಿರೂಪಿಸಿದರು.

See also  ಮಂಗಳೂರು: ಹತ್ಯೆಗೀಡಾದ ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಯು.ಟಿ.ಖಾದರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು