News Kannada
Sunday, February 05 2023

ಮಂಗಳೂರು

ಪಡಿಲ್ ಗೇಟ್ ಉದ್ಘಾಟನೆ, ಮಂಗಳೂರು ಬೆಳವಣಿಗೆ ಹೊಸ ಕೊಡುಗೆ ಎಂದ ವೇದವ್ಯಾಸ ಕಾಮತ್

Inauguration of Padil Gate, Mangaluru's growth is a new gift, says Vedavyas Kamath
Photo Credit : News Kannada

ಮಂಗಳೂರು: ನಗರದ ಪಡಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಪಡಿಲ್ ಗೇಟ್’ ಕಮರ್ಷಿಯಲ್ ಸೆಂಟರ್ ನ ಉದ್ಘಾಟನೆ ಹಾಗೂ ಇಲ್ಲಿ ಆಯೋಜಿಸಲಾಗಿರುವ ಡಿಸ್ಕೌಂಟ್ ಮೇಳದ ಉದ್ಘಾಟನೆ ಶುಕ್ರವಾರ ನೆರವೇರಿತು.

ಪಡಿಲ್ ಗೇಟ್ ಕಮರ್ಷಿಯಲ್ ಸೆಂಟರನ್ನು ಮಂಗಳೂರು ಮೇಯರ್ ಜಯಾನಂದ ಅಂಚನ್ ಉದ್ಘಾಟಿಸಿದರು. ಈ ಸೆಂಟರ್ ನಲ್ಲಿ ಆಯೋಜಿಸಲಾಗಿರುವ ‘ಮಂಗಳೂರು ಕಾರ್ನಿವಲ್’ ವಸ್ತು ಪ್ರದರ್ಶನ ಮೇಳವನ್ನು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.

ಸಮಾರಂಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು , ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಹಾಗೂ ವಿಸ್ತಾರವಾಗುತ್ತಿರುವ ಮಂಗಳೂರು ನಗರದ ಬೆಳವಣಿಗೆ ಪಡಿಲ್ ಗೇಟ್ ಕಮರ್ಷಿಯಲ್ ಸೆಂಟರ್ ದೊಡ್ಡ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮಂಗಳೂರು ಮೇಯರ್ ಜಯಾನಂದ ಅಂಚನ್ ಅವರು ಮಾತನಾಡಿ, ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಕ್ಕೆ ಪಡಿಲ್ ಗೇಟ್ ಹೊಸ ಶೋಭೆ ತರಲಿದೆ ಎಂದರು.

ಮಾಜಿ ಶಾಸಕ ಜೆ.ಆರ್.ಲೊಬೋ ಅವರು ಮಾತನಾಡಿ, ಹೊಸ ಜಿಲ್ಲಾಧಿಕಾರಿ ಕಚೇರಿಗೆ ಸನಿಹದಲ್ಲೇ ನಿರ್ಮಾಣಗೊಂಡ ಪಡಿಲ್ ಗೇಟ್ ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.

ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರು ಮಾತನಾಡಿ, ಸ್ಮಾರ್ಟ್ ಸಿಟಿ ಮಂಗಳೂರು ಅಭಿವೃದ್ಧಿಗೆ ಪೂರಕವಾಗುವಂತೆ ಉದ್ದಿಮೆದಾರರು , ಬಿಲ್ಡರ್ ಗಳು ಯೋಜನೆಯನ್ನು ರೂಪಿಸಬೇಕು , ಇದಕ್ಕೆ ಪೂರಕವಾಗಿ ಆಡಳಿತ ವ್ಯವಸ್ಥೆ ಸ್ಪಂದಿಸಬೇಕು ಎಂದು ಆಶಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ , ಕಾರ್ಪೊರೇಟರ್ ರೂಪಶ್ರೀ ಪೂಜಾರಿ , ಮನೋಹರ್ ಕದ್ರಿ ಶುಭ ಕೋರಿದರು. ಸ್ಥಳದ ಮಾಲೀಕರಾದ ಸತೀಶ್ ಶೆಟ್ಟಿ , ಬಾವ ಬಿಲ್ಡರ್ಸ್ ನ ಪ್ರವರ್ತಕ ಅಬ್ದುಲ್ ಖಾದರ್ , ಹೈಲ್ಯಾಂಡ್ ಬಿಲ್ಡರ್ಸ್ ನ ಪಾಲುದಾರರಾದ ಮುಬಾರಕ್ ಸುಲೈಮಾನ್ , ಕೆ.ಎ.ಇಬ್ರಾಹಿಂ, ಉಪಸ್ಥಿತರಿದ್ದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ , ಮಹೇಶ್, ರಾಜೇಶ್ ಭಾಗವಹಿಸಿದ್ದರು.

ಡಿಂಕಿ ಡೈನ್ ಮಾಲಕ ಸ್ವರ್ಣ ಸುಂದರ್ ಅವರು ಸ್ವಾಗತಿಸಿದರು. ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಪಡಿಲ್ ಗೇಟ್ ನಲ್ಲಿ ಆಯೋಜಿಸಲಾಗಿರುವ ಡಿಸ್ಕೌಂಟ್ ಮೇಳ ಜನವರಿ 4 ರ ತನಕ ನಡೆಯಲಿದೆ. ವೈವಿಧ್ಯಮಯ ಉತ್ಪನ್ನಗಳು ವಿಶೇಷ ರಿಯಾಯಿತಿಯಲ್ಲಿ ಈ ಮೇಳದಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

See also  ಮಡಿಕೇರಿ: ದೈವಜ್ಞ ಬ್ರಾಹ್ಮಣ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು