News Kannada
Saturday, January 28 2023

ಮಂಗಳೂರು

ಬೆಳ್ತಂಗಡಿ: ಕುದ್ಯಾಡಿ ಚಿರತೆ ದಾಳಿಗೆ ಹಸು ಬಲಿ

Photo Credit : By Author

ಬೆಳ್ತಂಗಡಿ: ಸುಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ಯಾಡಿ ಗ್ರಾಮದ ಕೆಳಗಿನ ಬೆಟ್ಟು ಎಂಬಲ್ಲಿ ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸು ಚಿರತೆಗೆ ದಾಳಿಗೆ ಬಲಿಯಾದ ಘಟನೆ ಜ.5ರಂದು ನಡೆದಿದೆ.

ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಇಲ್ಲಿನ ಶೀನ ಪೂಜಾರಿ ಎಂಬವರ ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸು ಬೊಬ್ಬೆ ಹೊಡೆಯುವುದು ಕೇಳಿ ಮನೆಯವರು ತೋಟಕ್ಕೆ ಬಂದಾಗ ಹಸುವಿನ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಮನೆ ಮಂದಿ ಮೇಲು ಎರಗಲು ಯತ್ನಿಸಿದೆ ಎಂದು ತಿಳಿದುಬಂದಿದೆ. ಚಿರತೆಯ ದಾಳಿಗೆ ಹಸು ಮೃತಪಟ್ಟಿದೆ.

ವೇಣೂರು ಆರ್ ಎಫ್ ಒ ಮಹಿಮ್ ಜನ್ನು, ಡಿ ಆರ್ ಎಫ್ ಒ ಸುರೇಶ್ ಗೌಡ,ಸುಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೋನು ಅಳವಡಿಕೆ.
ಚಿರತೆ ದಾಳಿ ನಡೆಸಿದ ಪರಿಸರದಲ್ಲಿ ಬೋನು ಅಳವಡಿಸಲಾಗಿದ್ದು, ಚಿರತೆ ದಾಳಿಗೆ ಮೃತಪಟ್ಟ ಹಸುವಿಗೆ ಪರಿಹಾರ ಒದಗಿಸುವ ಭರವಸೆಯನ್ನು ಅರಣ್ಯ ಇಲಾಖೆ ನೀಡಿದೆ.

See also  ಉಡುಪಿ: ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದ ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು