News Kannada
Monday, February 06 2023

ಮಂಗಳೂರು

ಮಂಗಳೂರು: ಹಸಿರು ಉಳಿಸಿಕೊಂಡು ನಗರದ ಅಭಿವೃದ್ಧಿಗೆ ಚಿಂತನೆ- ಶಾಸಕ ಕಾಮತ್

Mangaluru: We are planning to develop the city while retaining greenery, says MLA Kamath
Photo Credit : News Kannada

ಮಂಗಳೂರು: ನಗರದ ಅನೇಕ ಕಡೆಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ ಹಾಗೂ ಹೊಸ‌ ಪಾರ್ಕ್ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ಹಸಿರು ಉಳಿಸಿಕೊಂಡು ನಗರದ ಅಭಿವೃದ್ಧಿಗೆ ಚಿಂತನೆ ನಡೆಸುತ್ತಿದ್ದು ಗ್ರೀನ್ ಮಂಗಳೂರು ಪರಿಕಲ್ಪನೆಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನ ಆರ್.ಬಿ ಲೇಔಟ್ ನಲ್ಲಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ‌ಕಾಮತ್, ಮೂಡದಿಂದ ನಗರದಲ್ಲಿರುವ‌ ಪಾರ್ಕ್ ಗಳ ಅಭಿವೃದ್ಧಿ ಹಾಗೂ ಹೊಸದಾಗಿ ಪಾರ್ಕ್ ನಿರ್ಮಿಸಲು ಅನುದಾನ ಒದಗಿಸಲಾಗಿದ್ದು, ನಗರದ ಆಯ್ದ ಭಾಗಗಳಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು.

ನಗರದ ಬೆಳವಣಿಗೆಯಂತೆ ಹಸಿರನ್ನು ಉಳಿಸುವ ದೃಷ್ಟಿಯಿಂದ ರೂಪುಗೊಂಡ ಗ್ರೀನ್ ಮಂಗಳೂರು ಪರಿಕಲ್ಪನೆಯನ್ನು ಸಾಕಾರಗೊಳಿಸಿ ಉದ್ಯಾನವನಗಳ ಜೊತೆಗೆ ಸಸ್ಯ ಸಂಪತ್ತನ್ನು ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಮಾತನಾಡಿ, ಶಾಸಕರ ಬೇಡಿಕೆಯಂತೆ ಪಾರ್ಕ್ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಈಗಾಗಲೇ ಕೆಲವೊಂದು ಕಾಮಗಾರಿಗಳು ನಡೆಯುತ್ತಿದೆ. ಮರೋಳಿ ಆರ್.ಬಿ ಲೇಔಟ್ ಪಾರ್ಕ್ ಅಭಿವೃದ್ಧಿಗೆ 25 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೋರೇಟರ್ ಕೇಶವ ಮರೋಳಿ, ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಕಿರಣ್ ಮಾರೋಳಿ, ಕೃಷ್ಣ ಎಸ್.ಆರ್, ಜಗದೀಶ್ ಶೆಣೈ, ಜಗನ್ನಾಥ್ ಆಡು ಮನೆ, ಪ್ರಶಾಂತ್ ಮರೋಳಿ, ರಾಘು ಮರೋಳಿ, ಅರುಣ್ ಶೆಟ್ಟಿ, ಸರಳ ಮಾಲತಿ, ಬೋಜ ಅಮೀನ್, ಅನಿತಾ, ದೀಪಕ್ ಮರೋಳಿ, ಲೋಕೇಶ್ ಬೋಳಾರ್, ರವಿರಾಜ್ ಶೆಟ್ಟಿ, ಶಕುಂತಲಾ, ಮೋನಪ್ಪ ಗೌಡ, ಸುಂದರ್ ಶೆಟ್ಟಿ, ಕುಸುಮಾಧರ್, ಸುರೇಶ್ ಬೇಕಲ್, ಹರಿಣಿ, ಸುಲಕ್ಷ್ಮನ್ ರೈ, ಕೃಷ್ಣಪ್ಪಗೌಡ, ಮಟಿ ಕೃಷ್ಣರಾವ್, ಕಿಶೋರ್, ರೇಣುಕಾ, ಸಂಜಯ್, ಸಮತ್, ವಿಠಲ್ ಪ್ರಭು, ದಯಾನಂದ್ ನಾಯಕ್, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

See also  ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ-2023 ಭಾಗವಾಗಿ ಕಾಲ್ನಡಿಗೆ(Walkathon) ಜಾಥ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು