News Kannada
Tuesday, January 31 2023

ಮಂಗಳೂರು

ಮಂಗಳೂರು: ಅಮೃತ ವಿದ್ಯಾಲಯದಲ್ಲಿ “ಅಮೃತ ಆರೋಗ್ಯ ಮೇಳ”

Mangaluru: "Amrita Arogya Mela" at Amrita Vidyalaya
Photo Credit : News Kannada

ಮಂಗಳೂರು:  ನಗರದ ಅಮೃತ ವಿದ್ಯಾಲಯದಲ್ಲಿ ಜನವರಿ 8 ರಂದು ಜರುಗಿದ ವಿವಿಧ ವೈಶಿಷ್ಟ್ಯತೆಗಳ “ಅಮೃತ ಆರೋಗ್ಯ ಮೇಳ” ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾನ್ಸರ್ ತಪಾಸಣೆ ಮಾಡುವ ಆಧುನಿಕ ಉಪಕರಣ ಸಹಿತ ವಾಹನದಲ್ಲಿ ಮ್ಯಾಮೊಗ್ರಫಿ  ಹಾಗೂ  ಪ್ಯಾಪ್ ಟೆಸ್ಟ್ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಯಿತು. ಅಲ್ಲದೆ ಆಯುಷ್ಮಾನ್ ಭಾರತ್ ಕಾರ್ಡ್, ಕಣ್ಣಿನ ತಪಾಸಣೆ, ದಂತರೋಗ ಚಿಕಿತ್ಸೆ, ಸಾಮಾನ್ಯ ಆರೋಗ್ಯ ತಪಾಸಣೆ, ಮಕ್ಕಳ ಚಿಕಿತ್ಸೆ, ಕ್ಯಾನ್ಸರ್ ತಪಾಸಣೆ, ರಕ್ತದ ಒತ್ತಡ, ಮಧುಮೇಹ ತಪಾಸಣೆ, ಕೊವ್ಯಾಕ್ಸಿನ್ ಬೂಸ್ಟರ್ ಡೋಝ್, ಮೆದುಳು ಜ್ವರ ಬರದಂತೆ ಜೆ ಇ ವ್ಯಾಕ್ಸಿನೇಷನ್‌, ಆಯುರ್ವೇದ, ಹೋಮಿಯೋಪತಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಉಚಿತ ಔಷಧ ವಿತರಣೆ ಮಾಡಲಾಯಿತು. ಪುಷ್ಯ ನಕ್ಷತ್ರದ ದಿನವಾದುದರಿಂದ ಮಕ್ಕಳಿಗೆ ಸ್ವರ್ಣ ಬಿಂದು ಪ್ರಾಶನ ನೀಡಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಆಯುಷ್ ಇಲಾಖೆ , ದೇರಳಕಟ್ಟೆಯ ಏನಪೋಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಯಿತು.

ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಸ್ಥಳೀಯ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ರೋಶನಿ ನಿಲಯದ ರಿಜಿಸ್ಟ್ರಾರ್ ವಿನಿತಾ ಕೆ., ಡಾ.ಸುಚಿತ್ರಾ ರಾವ್, ಯತೀಶ್ ಬೈಕಂಪಾಡಿ, ಡಾ.ಅಶೋಕ ಶೆಣೈ, ಪ್ರವೀಣ್ ಶಬರೀಶ್, ರಾಜನ್, ಡಾ.ದೇವದಾಸ್ ಕೆ.ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಅನಿಲ್ ರಾಮಾನುಜಂ, ಡಾ.ಅನಿತಾ ಕಿರಣ್, ಡಾ.ಶಿಲ್ಪಾ ಹೆಗ್ಡೆ, ಡಾ.ರೇಖಾ ಪಿ‌.ಶೆಣೈ, ಡಾ.ಲೇಪಾಕ್ಷಿ ಕೆ., ಡಾ.ಪ್ರಕಾಶ್, ಡಾ.ಶ್ರೀ ದೇವಿ ಮೊದಲಾದ ಹಲವು ವಿವಿಧ ತಜ್ಞ ವೈದ್ಯರು ಮತ್ತು ಆರೋಗ್ಯ ಸೇವಾರ್ಥಿಗಳು ಭಾಗವಹಿಸಿ ಸೇವೆಗೈದರು. ರೋಶನಿ ನಿಲಯದ ಎನ್ ಎಸ್ಎಸ್ ವಿದ್ಯಾರ್ಥಿಗಳು ಫಲಾನುಭವಿಗಳಿಗೆ ಅಗತ್ಯ ಸಹಕಾರವಿತ್ತು ಸಹಕರಿಸಿದರು.

ಬೋಳೂರು ಪರಿಸರದ ನಾಗರಿಕರು ವಿಶೇಷವಾಗಿ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡರು.

See also  ವಿಜಯಪುರ: ಮುಂದಿನ ವರ್ಷ ಏಪ್ರಿಲ್ ವೇಳೆಗೆ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು