News Kannada
Friday, January 27 2023

ಮಂಗಳೂರು

ಮಂಗಳೂರು: ಐ ಲವ್ ಕುಡ್ಲ ಕಲಾಕೃತಿಯ ಲೋಕಾರ್ಪಣೆಗೊಳಿಸಿದ ಜಸ್ಟಿಸ್ ಸಂತೋಷ್ ಹೆಗ್ಡೆ

ustice Santosh Hegde unveils 'I Love Kudla' artwork
Photo Credit : News Kannada

ಮಂಗಳೂರು:  ರಾಮಕೃಷ್ಣ ಮಠದ ಪ್ರೇರಣೆಯಿಂದ ಮುನ್ನಡೆಯುತ್ತಿರುವ ಸ್ವಚ್ಛ ಮಂಗಳೂರು ಫೌಂಡೇಶನ್ ವತಿಯಿಂದ ‘ಐ ಲವ್ ಕುಡ್ಲ’ ಎಂಬ ಕಲಾಕೃತಿಯನ್ನು ನಗರದ ಹಂಪನಕಟ್ಟೆಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ಹಾಗೂ ಮಾಜಿ ಲೋಕಾಯುಕ್ತ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ ಅವರು ಅನಾವರಣಗೊಳಿಸಿದರು.

ಎನ್. ಸಂತೋಷ್ ಹೆಗ್ಡೆ ಅವರು ಮಾತನಾಡಿ, ಮಾನವನ ಅತಿ ಆಸೆಯೇ ಎಲ್ಲಾ ರೀತಿಯ ಪ್ರಕೃತಿನಾಶ ಹಾಗೂ ತ್ಯಾಜ್ಯ ಉತ್ಪತ್ತಿಗೆ ಕಾರಣವಾಗಿದೆ. ಸಂಪನ್ಮೂಲಗಳನ್ನು ಬೇಕಾದಷ್ಟೇ ಬಳಸಿದರೆ ಕಸದ ಹೊರೆ ಕಡಿಮೆಯಾಗುತ್ತದೆ. ಸ್ವಚ್ಛತೆಯನ್ನು ಸಾಧಿಸುವಲ್ಲಿಯೂ ಈ ಕಡಿಮೆ ಬಳಕೆಯ ಮಂತ್ರವನ್ನು ಪಾಲಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಮಹತ್ವಾಕಾಂಕ್ಷೆಯಿರುವುದು ತಪ್ಪಲ್ಲ ಆದರೆ ಹಣ, ವಸ್ತುಗಳನ್ನು ಹಾಗೂ ಸೇವೆಗಳನ್ನು ಪಡೆಯಲು ಯಾರನ್ನೂ ನೋಯಿಸದೇ ಇರುವುದೇ ನೈಜ ನಾಗರೀಕನ ಧರ್ಮ ಎಂದರು . ಸ್ವಾರ್ಥರಹಿತ ಹಾಗೂ ಜವಾಬ್ದಾರಿಯುತ ನಾಗರಿಕರಿಂದ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಇನ್ನೋರ್ವ ಅತಿಥಿಗಳಾದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಮಾತನಾಡಿ, ಮಂಗಳೂರಿನ ರಾಮಕೃಷ್ಣ ಆಶ್ರಮದ ಸ್ವಚ್ಛತಾ ಅಭಿಯಾನದ ಯಶಸ್ಸನ್ನು ಶ್ಲಾಘಿಸಿದರು. ಹಲವಾರು ಕಾರ್ಯಕರ್ತರ ಸ್ವಾರ್ಥ ರಹಿತ ಸೇವೆಯಿಂದ ಇಂಥಹಾ ಸಾಧನೆ ಸಾಧ್ಯವಾಗಿದೆ. ಎಲ್ಲಿ ಬದ್ದತೆ ಮತ್ತು ಸೇವೆ ಇರುತ್ತದೆಯೋ ಅಲ್ಲಿ ಮಹತ್ಕಾರ್ಯಗಳು ಆಗುತ್ತವೆ ಎಂದರು.

ರಾಮಕೃಷ್ಣ ಮಠದ ಸ್ವಾಮಿ ರಘು ರಾಮಾನಂದಜಿ, ಸಭಾ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಹಲವರ ಪ್ರಯತ್ನದ ಪರಿಣಾಮವಾಗಿರುವ ಸ್ವಚ್ಛ ಮಂಗಳೂರು ಅಭಿಯಾನ ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಸ್ವಚ್ಚ ಮಂಗಳೂರು ಫೌಂಡೇಶನ್ ನ ಮಾರ್ಗದರ್ಶಕರಾದ ಕ್ಯಾ. ಗಣೇಶ್ ಕಾರ್ಣಿಕ್ ಆಶಯ ಭಾಷಣ ಮಾಡಿ ಸ್ವಾಗತಿಸಿದರು.

ಸ್ವಚ್ಛ ಮಂಗಳೂರು ಫೌಂಡೇಶನ್ ನ ಅಧ್ಯಕ್ಷ ಉಮನಾಥ ಕೋಟೇಕಾರ್ ವೇದಿಕೆಯಲ್ಲಿ ಉಸ್ಥಿತರಿದ್ದರು. ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರ ಡಿ. ವೇದವ್ಯಾಸ ಕಾಮತ್ ಸಭೆಯಲ್ಲಿ ಉಪಸ್ಥಿತರಿದ್ದರು.

ಕಲಾಕೃತಿ ತಯಾರಿಸಿದ ವಿಕ್ರಂ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಂಜನ್ ಬೆಳ್ಳರ್ಪಾಡಿ ವಂದಿಸಿದರು. ಅಭಿಷೇಕ್ ಶೆಟ್ಟಿ ನಿರೂಪಿಸಿದರು.
ಮಂಗಳೂರು ಮಹಾನಗರದ ಜಾಗೃತ ನಾಗರಿಕರು ಮತ್ತು ಸ್ವಚ್ಚ ಮಂಗಳೂರಿನ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

See also  ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ- ಪುರುಷೋತ್ತಮ ಪೂಜಾರಿಗೆ ಸರ್ವ ರೀತಿಯಲ್ಲೂ ಸಹಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು